ಮದುವೆ ಸಾಲ; ಬೇಕಾ, ಬೇಡವಾ?

09 July 2024

Pic credit: Getty

Vijayasarathy SN

ಭಾರತದಲ್ಲಿ ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತಿದೆ. ಮದುವೆ ಎಂಬುದು ವಿಪರೀತ ವೆಚ್ಚ ಬೇಡುವ ಕಾರ್ಯ. ಬಡವರೂ ಕೂಡ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಾರೆ.

ಭಾರೀ ವೆಚ್ಚದ ಕಾರ್ಯ

Pic credit: Getty

ಇವತ್ತಿನ ಬಹಳಷ್ಟು ಯುವಜನರು ತಮ್ಮ ಮದುವೆಗೆ ತಾವೇ ಹಣ ಹೊಂದಿಸಿಕೊಳ್ಳುತ್ತಾರೆ. ಐದಾರು ವರ್ಷದ ದುಡಿಮೆಯ ಹಣವನ್ನು ಮದುವೆಗೆ ಖರ್ಚು ಮಾಡುತ್ತಾರೆ.

ದುಡಿಮೆ ಹಣ

Pic credit: Getty

ಮದುವೆ ಕಾರ್ಯಕ್ರಮಕ್ಕೆ ಖರ್ಚು ಕಡಿಮೆಯಂತೂ ಇರೋದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಸಾಲ ಮಾಡುವುದು ಅನಿವಾರ್ಯವಾಗಬಹುದು. ಆದರೆ, ಮದುವೆಗೆ ಎಂದು ವಿಶೇಷ ಸಾಲ ಸಿಕ್ಕುವುದಿಲ್ಲ. 

ಸಾಲ ಅನಿವಾರ್ಯ

Pic credit: Getty

ಒಡವೆ ಇಟ್ಟು ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು. ಮದುವೆಗೆ ಒಡವೆ ಬೇಕೇಬೇಕು. ಹೀಗಾಗಿ ಮದುವೆಗೆ ದುಡ್ಡು ಸಾಲದಾದರೆ ಪರ್ಸನಲ್ ಲೋನ್ ಪಡೆಯುವುದು ಅನಿವಾರ್ಯ.

ಪರ್ಸನಲ್ ಲೋನ್

Pic credit: Getty

ಪರ್ಸನಲ್ ಲೋನ್ ಸಾಮಾನ್ಯವಾಗಿ ಶೇ. 12ರಿಂದ 18ರಷ್ಟು ಬಡ್ಡಿದರ ಹೊಂದಿರುತ್ತದೆ. ಮದುವೆಗೆ ಇಷ್ಟು ಹೆಚ್ಚಿನ ಬಡ್ಡಿಯ ಸಾಲ ಮಾಡುವುದು ಎಷ್ಟು ಸಮಂಜಸ?

ಬಡ್ಡಿದರ ಹೆಚ್ಚು

Pic credit: Getty

ನಂಟರಿಷ್ಟರು, ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಮದುವೆಯನ್ನು ಸಾಧ್ಯವಾದಷ್ಟೂ ಸರಳವಾಗಿ ಮಾಡಲು ಯತ್ನಿಸಿ.

ಸರಳ ಮದುವೆ

Pic credit: Getty

ಮದುವೆ ಖರ್ಚಿನಲ್ಲಿ ಉಳಿಸಲಾದ ಹಣ ನಿಮ್ಮ ಮತ್ತು ಸಂಗಾತಿಯ ಭವಿಷ್ಯದ ಬದುಕಿಗೆ ನೆರವಾಗಬಹುದು. ಅನಗತ್ಯ ಸಾಲ ತಪ್ಪಬಹುದು. ಸಾಲದ ಗೋಜಲಿಲ್ಲದೆ ಜೀವನ ನಡೆಸಬಹುದು.

ಬದುಕು ಮುಖ್ಯ

Pic credit: Getty