03 Oct 2023
(Disclaimer: Alcohol consumption is harmful for health)
ಇಂದ್ರಿ ದಿವಾಲಿ ಕಲೆಕ್ಟರ್ಸ್ ಎಡಿಶನ್ 2023 ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಡೆದಿದೆ. ‘ಬೆಸ್ಟ್ ಇನ್ ಗೋಲ್ಡ್’ ಪ್ರಶಸ್ತಿಗೆ ಬಾಜನವಾಗಿದೆ.
ವಿಶ್ವಶ್ರೇಷ್ಠ ವಿಸ್ಕಿ
(Pic credit: Piccadily Insta)
ವಿಸ್ಕೀಸ್ ಆಫ್ ದಿ ವರ್ಲ್ಡ್ ನಿಯಮಿತವಾಗಿ ವಿಸ್ಕಿ ಸ್ಪರ್ಧೆ ಆಯೋಜಿಸುತ್ತದೆ. ಸ್ಕಾಚ್, ಬೋರ್ಬೋನ್ ಮೊದಲಾದ ದೊಡ್ಡದೊಡ್ಡ ಬ್ರ್ಯಾಂಡ್ಗಳನ್ನು ಇಂದ್ರಿ ಸೋಲಿಸಿದೆ.
ಘಟಾನುಘಟಿಗಳ ಪೈಪೋಟಿ
(Pic credit: Piccadily Insta)
Piccadilly Distilleries ಹರ್ಯಾಣದಲ್ಲಿ ಇಂದ್ರಿ ಬ್ರ್ಯಾಂಡ್ನ ವಿಸ್ಕಿ ತಯಾರಿಸುತ್ತದೆ. 2021ರಲ್ಲಿ ಭಾರತದ ಮೊದಲ ಟ್ರಿಪಲ್ ಬ್ಯಾರಲ್ ಸಿಂಗಲ್ ಮಾಲ್ಟ್ ವಿಸ್ಕಿಯಿಂದ ಇಂದ್ರಿ ಪಯಣ ಶುರು.
ಇಂದ್ರಿ ತಯಾರಕರು ಯಾರು?
(Pic credit: Piccadily Insta)
ಪಿಕಾಡಿಲಿ ಡಿಸ್ಟಲರೀಸ್ ಮದ್ಯ ತಯಾರಿಕೆಗೆ ಅಡಿ ಇಟ್ಟಿದ್ದು 90ರ ದಶಕದಲ್ಲಿ. 1993ರಲ್ಲಿ ಪಂಜಾಬ್ನಲ್ಲಿ ಮೊದಲ ಡಿಸ್ಟಿಲರಿ ಶುರುವಾಯಿತು. ಗುಣಮಟ್ಟದಲ್ಲಿ ರಾಜಿ ಇಲ್ಲದೇ ವಿಸ್ಕಿ ತಯಾರಿಸುತ್ತದೆ.
ಪಿಕ್ಕಾಡಿಲಿ ಪ್ರಯಾಣ
(Pic credit: Piccadily Insta)
ರಾಜಸ್ಥಾನದಲ್ಲಿ ವಿಶೇಷವಾಗಿ ಬೆಳೆಸಲಾದ ಬಾರ್ಲಿಯನ್ನು ಇಂದ್ರಿ ವಿಸ್ಕಿ ತಯಾರಿಕೆಗೆ ಬಳಸಲಾಗುತ್ತದೆ. ಒಣಹಣ್ಣು, ಹುರಿದ ಬೀಜ, ಓಕ್, ವಿಶೇಷ ಚಾಕೊಲೇಟ್ ಇತ್ಯಾದಿ ಬೆರೆಸಲಾಗುತ್ತದೆ.
ಇಂದ್ರಿ ವಿಸ್ಕಿ ವಿಶೇಷತೆ?
(Pic credit: Piccadily Insta)
ಒಂದು ರೀತಿಯ ವೈನ್ ಆದ ಶೆರಿಯನ್ನು ಸಂಗ್ರಹಿಸಿಟ್ಟ ಪೀಪಾಯಿಯಲ್ಲಿ (ಶೆರಿ ಕ್ಯಾಸ್ಕ್) ಮಿಶ್ರವನ್ನು ಹದ ಮಾಡಲಾಗುತ್ತದೆ. ಇದರಿಂದ ವಿಸ್ಕಿಗೆ ವಿಶೇಷ ರುಚಿ ಬರುತ್ತದೆ.
ಶೆರಿ ಪೀಪಾಯಿಯಲ್ಲಿ...
(Pic credit: Piccadily Insta)
ಬೆಂಗಳೂರಲ್ಲಿ ಇಂದ್ರಿ ವಿಸ್ಕಿ 750 ಎಂಎಲ್ ಬಾಟಲ್ ಸುಮಾರು 3,100 ರೂಗೆ ಸಿಗುತ್ತದೆ. ವಿಶ್ವದ ಅತ್ಯುತ್ತಮ ವಿಸ್ಕಿ ಎನಿಸಿದ ದಿವಾಲಿ ಕಲೆಕ್ಟರ್ಸ್ ಎಡಿಶನ್ ಬೆಲೆ 5,000 ರೂ ಇರಬಹುದು.
ಇಂದ್ರಿ ವಿಸ್ಕಿ ಬೆಲೆ?
(Pic credit: Piccadily Insta)
ಭಾರತದ ಬ್ರ್ಯಾಂಡ್ವೊಂದು ವಿಶ್ವದ ಅತ್ಯುತ್ತಮ ವಿಸ್ಕಿ ಪ್ರಶಸ್ತಿ ಗೆದ್ದಿರುವುದು ಇದೇ ಮೊದಲು ಎನ್ನಲಾಗಿದೆ. ವಿಶ್ವದ ವಿಸ್ಕಿ ಉದ್ಯಮದಲ್ಲಿ ಭಾರತಕ್ಕೊಂದು ಹೆಜ್ಜೆಗುರುತು ಸಿಕ್ಕಂತಾಗುತ್ತದೆ.
ಭಾರತಕ್ಕೆ ಗರಿಮೆ
(Pic credit: Piccadily Insta)