By: Vijayasarathy SN

ಸ್ವಂತವಾಗಿ ಬಿಸಿನೆಸ್​ನಲ್ಲಿ ಯಶಸ್ವಿಯಾದ ಭಾರತೀಯ ನಾರಿಯರಿವರು

28 Nov 2023

ಸ್ವಂತವಾಗಿ ವ್ಯವಹಾರ ಸ್ಥಾಪಿಸುವುದು ಬಹಳ ದೊಡ್ಡ ಸಾಹಸ. ಈ ರೀತಿ ಯಶಸ್ವಿಯಾದ ಭಾರತೀಯ ನಾರಿಯರು ಹಲವರಿದ್ದಾರೆ. ಅವರ ಪೈಕಿ ಕೆಲವರ ಪರಿಚಯ ಇಲ್ಲಿದೆ

ಯಶಸ್ವಿ ನಾರಿಯರು

(Pic credit: Google)

ನೈಕಾ ಎಂಬ ಬ್ಯೂಟಿ ಸರಕು ಮಾರಾಟ ಸಂಸ್ಥೆಯ ಸ್ಥಾಪಕಿ ಫಾಲ್ಗುಣಿ ನಾಯರ್. ಕೋಟಕ್ ಮಹೀಂದ್ರ ಬ್ಯಾಂಕ್​ನ ಹಿರಿಯ ಹುದ್ದೆ ಬಿಟ್ಟು ನೈಕಾ ಕಟ್ಟಿ ಗೆದ್ದ ನಾರಿ.

ಫಾಲ್ಗುಣಿ ನಾಯರ್

(Pic credit: Google)

ಮೆನ್ಸ್​ಟ್ರುಪೀಡಿಯಾ ಸ್ಥಾಪಕಿ ಅದಿತಿ ಗುಪ್ತಾ. ಹದಿಹರೆಯದ ಬಾಲಕಿಯರಲ್ಲಿ ಋತುಸ್ರಾವದ ಬಗ್ಗೆ ಅರಿವು ಮೂಡಿಸುವ ಕಾರ್ಟೂನ್ ಬುಕ್​ಗಳನ್ನು ತಯಾರಿಸುತ್ತಾರೆ.

ಅದಿತಿ ಗುಪ್ತಾ

(Pic credit: Google)

ರಾಧಿಕಾ ಘಾಯ್ ಅಗರ್ವಾಲ್ ShopClues.com ಸಹ-ಸಂಸ್ಥಾಪಕಿ. 2016ರಲ್ಲಿ ಯೂನಿಕಾರ್ನ್ ಕ್ಲಬ್ ಸೇರಿದ ಮೊದಲ ಮಹಿಳಾ ಸಂಸ್ಥಾಪಿತ ಕಂಪನಿ ಅದು.

ರಾಧಿಕಾ ಘಾಯ್

(Pic credit: Google)

ಕಿರಣ್ ಮಜುಮ್ದಾರ್ ಷಾ ಬಯೋಕಾನ್ ಸಂಸ್ಥಾಪಕಿ. ಯೂರೋಪ್ ಮತ್ತು ಅಮೆರಿಕಕ್ಕೆ ಎಂಝೈಮ್​ಗಳನ್ನು ರಫ್ತು ಮಾಡಿದ ಮೊದಲ ಭಾರತೀಯ ಕಂಪನಿ ಇವರದ್ದು.

ಕಿರಣ್ ಷಾ

(Pic credit: Google)

ಕಲಾರಿ ಕ್ಯಾಪಿಟಲ್​ನ ಸ್ಥಾಪಕಿ ವಾಣಿ ಕೋಲ. ಹೂಡಿಕೆ ಕ್ಷೇತ್ರದಲ್ಲಿ ಗೌರವಯುತ ಹೆಸರು. ಭಾರತದ ಅತಿದೊಡ್ಡ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳಲ್ಲಿ ಅದೂ ಒಂದು.

ವಾಣಿ ಕೋಲ

(Pic credit: Google)

ಫ್ಯಾಷನ್ ವಸ್ತುಗಳನ್ನು ಮಾರುವ ಲೈಮ್​ರೋಡ್​ನ ಸ್ಥಾಪಕಿ ಸುಚಿ ಮುಖರ್ಜಿ. ಆನ್​ಲೈನ್​ನಲ್ಲಿ ಉಡುಪು ಮಾರ ತೊಡಗಿದ ಮೊದಲ ಸಂಸ್ಥೆಗಳಲ್ಲಿ ಅವರದ್ದೂ ಒಂದು.

ಸುಚಿ ಮುಖರ್ಜಿ

(Pic credit: Google)

ಆನ್​ಲೈನ್ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯುವರ್​ಸ್ಟೋರಿಯ ಸ್ಥಾಪಕಿ ಸ್ರದ್ಧಾ ಶರ್ಮಾ. ಒಂದು ಕೋಟಿಗೂ ಹೆಚ್ಚು ಸಕ್ರಿಯ ಓದುಗರ ಬಳಗ ಅದರದ್ದು.

ಶ್ರದ್ಧಾ ಶರ್ಮಾ

(Pic credit: Google)