10 Mar 2025
ಚಾಣಾಕ್ಷ್ಯ ಲಲಿತ್ ಮೋದಿ ವಿರುದ್ಧದ ಆರೋಪಗಳೇನು?
Pic credit: Google
Vijayasarathy SN
ಐಪಿಎಲ್ ಹರಿಕಾರ
Pic credit: Google
ಐಪಿಎಲ್ ಆರಂಭ ಕಂಡವರಿಗೆ ಲಲಿತ್ ಮೋದಿ ಹೆಸರು ಚಿರಪರಿಚಿತ ಇರುತ್ತದೆ. ಐಪಿಎಲ್ ಸ್ಥಾಪನೆಯ ರೂವಾರಿಯೇ ಈ ಮೋದಿ. 2008ರಿಂದ 2010ರವರೆಗೆ ಐಪಿಎಲ್ ಛೇರ್ಮನ್ ಆದವರು.
ಯಶಸ್ಸು, ವಿವಾದ
Pic credit: Google
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದಲ್ಲೇ ಸೂಪರ್ ಸಕ್ಸಸ್ ಆಗಲು ಲಲಿತ್ ಮೋದಿ ಕಾರಣ. ಹಾಗೆಯೇ ಬಹಳ ಬೇಗ ವಿವಾದಗಳು, ಆರೋಪಗಳು ಮೋದಿಗೆ ಮೆತ್ತಿಕೊಂಡವು.
ಹಣಕಾಸು ಅಕ್ರಮ
Pic credit: Google
ಐಪಿಎಲ್ ಫಂಡ್ಗಳ ಅಕ್ರಮ ರವಾನೆ, ಅಸಮ್ಮತವಾಗಿ ಐಪಿಎಲ್ ಗುತ್ತಿಗೆಗಳನ್ನು ನೀಡುವುದು ಸೇರಿದಂತೆ ಹಲವು ಹಣಕಾಸು ಅಕ್ರಮಗಳನ್ನು ಎಸಗಿದ ಆರೋಪ ಲಲಿತ್ ಮೋದಿ ಮೇಲಿದೆ.
ಬಿಡ್ಡಿಂಗ್ ಅಕ್ರಮ
Pic credit: Google
ಐಪಿಎಲ್ ಫ್ರಾಂಚೈಸಿ ಹಂಚಿಕೆಯ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಲಲಿತ್ ಮೋದಿ ಅಕ್ರಮ ಎಸಗಿರುವ ಆರೋಪ ಇದೆ. ತಮಗೆ ಬೇಕಾದವರಿಗೆ ಸಿಗುವಂತೆ ಮಾಡಲು ಯತ್ನಿಸಿದರೆನ್ನಲಾಗಿದೆ.
ಫೆಮಾ ಉಲ್ಲಂಘನೆ
Pic credit: Google
ಐಪಿಲ್ಗೆ ಸಂಬಂಧಿತ ವ್ಯವಹಾರಗಳಿಂದ ಬರುವ ಹಣವನ್ನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಫೆಮಾ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಲಲಿತ್ ಮೋದಿ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.
ಪ್ರಸಾರ ಹಕ್ಕು
Pic credit: Google
ವರ್ಲ್ಡ್ ಸ್ಪೋರ್ಟ್ ಗ್ರೂಪ್ ಮತ್ತು ಐಪಿಎಲ್ ನಡುವೆ ಒಪ್ಪಂದ ಮಾಡಿಕೊಂಡು ಬಿಸಿಸಿಐಗೆ ಭಾರೀ ನಷ್ಟ ತಂದರು ಎನ್ನುವ ಆರೋಪ ಲಲಿತ್ ಮೋದಿ ವಿರುದ್ಧ ಇದೆ.
ದೇಶದಿಂದ ಹೊರಕ್ಕೆ
Pic credit: Google
ಲಲಿತ್ ಮೋದಿ ಅವರನ್ನು ಬಿಸಿಸಿಐ 2010ರಲ್ಲಿ ಐಪಿಎಲ್ ಛೇರ್ಮನ್ ಸ್ಥಾನದಿಂದ ಕಿತ್ತುಹಾಕಿತು. ಸಾಲುಸಾಲಾಗಿ ಪ್ರಕರಣಗಳು ದಾಖಲಾದವು. ಆ ವರ್ಷವೇ ಮೋದಿ ದೇಶ ಬಿಟ್ಟು ಹೋದರು.
Next: ಬೆಂಗಳೂರಿನ ಅತಿಶ್ರೀಮಂತ ವ್ಯಕ್ತಿಗಳಿವರು...
ಇನ್ನಷ್ಟು ನೋಡಿ