02 Mar 2025
Pic credit: Google
Vijayasarathy SN
ಹುರೂನ್ ಇಂಡಿಯಾ ಶ್ರೀಮಂತರ ಅಗ್ರ-100 ಪಟ್ಟಿಯಲ್ಲಿ ಇರುವ ಎಂಟು ಬೆಂಗಳೂರಿಗರಲ್ಲಿ ಅಜೀಮ್ ಪ್ರೇಮ್ಜಿ ಮೊದಲಿಗರು. ವಿಪ್ರೋದ ಇವರ ಆಸ್ತಿ 1.90 ಲಕ್ಷ ಕೋಟಿ ರೂ.
Pic credit: Google
Author Name
ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರೆಸ್ಟೀಜ್ ಗ್ರೂಪ್ನ ಛೇರ್ಮನ್ ಇರ್ಪಾನ್ ರಜಾಕ್ ಅವರ ಆಸ್ತಿಮೌಲ್ಯ 43,600 ಕೋಟಿ ರೂ. ಬೆಂಗಳೂರಿನ ಎರಡನೇ ಅತಿಶ್ರೀಮಂತರಿವರು.
Pic credit: Google
Author Name
ಸ್ಟಾಕ್ ಬ್ರೋಕರ್ ಸಂಸ್ಥೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಆಸ್ತಿ 41,000 ಕೋಟಿ ರೂ ಇದೆ. ಇವರ ಸಹೋದರ ನಿಖಿಲ್ ಕಾಮತ್ ಕೂಡ ದೊಡ್ಡ ಹಣವಂತರು.
Pic credit: Google
Author Name
ಇನ್ಫೋಸಿಸ್ನ ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಹಾಗು ಅದರ ಮಾಜಿ ಸಿಇಒ ಕೂಡ ಆದ ಎಸ್ ಗೋಪಾಲಕೃಷ್ಣನ್ 38,500 ಕೋಟಿ ರೂ ಸಂಪತ್ತಿನ ಒಡೆಯರಾಗಿದ್ದಾರೆ.
Pic credit: Google
Author Name
ಇನ್ಫೋಸಿಸ್ನ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಎನ್ ಆರ್ ನಾರಾಯಣಮೂರ್ತಿ ಅವರ ಆಸ್ತಿ ಮೌಲ್ಯ 36,600 ಕೋಟಿ ರೂ. ಬೆಂಗಳೂರಿನ ಅತಿಶ್ರೀಮಂತರಲ್ಲಿ ಇವರು ಐದನೆಯವರು.
Pic credit: Google
Author Name
ಬೃಹತ್ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣ ಸಂಸ್ಥೆಯಾದ ಜಿಎಂಆರ್ ಗ್ರೂಪ್ನ ಸಂಸ್ಥಾಪಕ ಜಿಎಂ ರಾವ್ ಅವರು 36,300 ಕೋಟಿ ರೂನಷ್ಟು ಶ್ರೀಮಂತರು. ಹುರೂನ್ ಇಂಡಿಯಾ ಪಟ್ಟಿಯಲ್ಲಿ ಇವರದ್ದು 71ನೇ ಸ್ಥಾನ.
Pic credit: Google
Author Name
ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ನ ಛೇರ್ಮನ್ ರಂಜನ್ ಪೈ ಅವರಿಗೆ ಇರುವ ಒಟ್ಟು ಸಂಪತ್ತು 34,700 ಕೋಟಿ ರೂ. ಭಾರತದ ಅಗ್ರಗಣ್ಯ ಬಿಲಿಯನೇರ್ಗಳಲ್ಲಿ ಇವರೂ ಒಬ್ಬರು.
Pic credit: Google
Author Name
ಬಯೋಟೆಕ್ನಾಲಜಿ ಸಂಸ್ಥೆಯಾದ ಬಯೋಕಾನ್ನ ಸಂಸ್ಥಾಪಕಿಯಾದ ಕಿರಣ್ ಮಜುಮ್ದಾರ್ ಷಾ ಅವರಲ್ಲಿ 29,000 ಕೋಟಿ ರೂ ಸಂಪತ್ತಿದೆ. ಭಾರತದ 100 ಶ್ರಿಮಂತರಲ್ಲಿ ಇವರದ್ದು 98ನೇ ಸ್ಥಾನ.
Pic credit: Google
Author Name