ಯುದ್ಧದ ಮಧ್ಯದಲ್ಲೂ ಮಿಂಚುತ್ತಿರುವ ಇಸ್ರೇಲ್ ಷೇರುಪೇಟೆ

31 Oct 2024

Pic credit: Google

Vijayasarathy SN

Pic credit: Google

2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದರು. ಅಂದಿನಿಂದ ಇಸ್ರೇಲ್ ತನ್ನ ಸುತ್ತಲಿನ ಕೆಲ ದೇಶಗಳ ವಿರುದ್ಧ ನಿರಂತರ ಸಂಘರ್ಷದಲ್ಲಿದೆ.

Pic credit: Google

ಯುದ್ಧದ ವೇಳೆ ಷೇರು ಮಾರುಕಟ್ಟೆ, ಆರ್ಥಿಕತೆ ಕುಸಿಯುವುದು ಸಹಜ. ಆದರೆ, ಇಸ್ರೇಲ್​ನ ಷೇರುಪೇಟೆ ಒಂದು ವರ್ಷದಲ್ಲಿ ಶೇ. 111ರಷ್ಟು ಬೆಳೆದಿದೆ. ಅಂದರೆ, ಎರಡು ಪಟ್ಟು ಹೆಚ್ಚಾಗಿದೆ.

Pic credit: Google

ಇಸ್ರೇಲ್​ನ ಷೇರು ಮಾರುಕಟ್ಟೆಯನ್ನು BURSA ಎಂದು ಕರೆಯಲಾಗುತ್ತಿದೆ. ರಾಜಧಾನಿ ಟೆಲ್ ಅವಿವ್​ನಲ್ಲಿ ಷೇರುವಿನಿಮಯ ಕೇಂದ್ರವಾದ TASE ಇದೆ. 1953ರಲ್ಲಿ ಆರಂಭವಾದ ಇದರಲ್ಲಿ 473 ಕಂಪನಿಗಳ ಷೇರು ಲಿಸ್ಟ್ ಆಗಿವೆ.

Pic credit: Google

2023ರ ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಆಗಿತ್ತು. ಆಗ ಮಾರುಕಟ್ಟೆ ಸೂಚ್ಯಂಕ 2,164 ಅಂಕಗಳನ್ನು ಹೊಂದಿತ್ತು. ಮಾರನೇ ದಿನ (ಅ. 8) ಮಾರುಕಟ್ಟೆ ತೆರೆದಾಗ ಅಂಕಗಳು 2080 ಕ್ಕೆ ಕುಸಿದವು.

Pic credit: Google

2023ರ ಅಕ್ಟೋಬರ್ 26ಕ್ಕೆ TASE 1,669 ಅಂಕಗಳಿಗೆ ಕುಸಿದಿತ್ತು. ಎರಡು ವಾರಗಳ ಅಂತದಲ್ಲಿ ಮಾರುಕಟ್ಟೆ ಶೇ. 30ಕ್ಕಿಂತಲೂ ಹೆಚ್ಚು ಪತನಗೊಂಡಿತ್ತು. ಅದಾದ ಬಳಿಕ ಇಸ್ರೇಲ್ ಮಾರುಕಟ್ಟೆ ಅದ್ಭುತ ರೀತಿಯಲ್ಲಿ ತಿರುಗಿ ನಿಂತಿದೆ.

Pic credit: Google

ಅಕ್ಟೋಬರ್ 30ರಂದು ಟೆಲ್ ಅವಿವ್ ಸ್ಟಾಕ್ ಎಕ್ಸ್​ಚೇಂಜ್ 3,840 ಅಂಕಗಳಲ್ಲಿ ವಹಿವಾಟು ನಿಲ್ಲಿಸಿದೆ. ವರ್ಷದ ಹಿಂದೆ 1,669 ಅಂಕಗಳನ್ನು ಹೊಂದಿದ್ದ TASE ಒಂದು ವರ್ಷದ ಅಂತದಲ್ಲಿ ಎರಡು ಪಟ್ಟು ಹೆಚ್ಚಾಗಿದೆ.

Pic credit: Google

ಹಪವೊಲಿಮ್, ಮಿಗ್​ಡಲ್ ಇನ್ಷೂರೆನ್ಸ್, ರೇಜರ್ ಲ್ಯಾಬ್ಸ್, ಫೀನಿಕ್ಸ್ ಹೋಲ್ಡಿಂಗ್ಸ್ ಮೊದಲಾದ ಷೇರುಗಳು ಅದ್ಭುತ ರೀತಿಯಲ್ಲಿ ಬೇಡಿಕೆ ಪಡೆದಿವೆ. ಸ್ಥಳೀಯ ಹೂಡಿಕೆದಾರರು ಪೂರ್ಣ ಬೆಂಬಲ ನೀಡುತ್ತಿದ್ದಾರೆ.