ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ

30 Oct 2024

Pic credit: Getty

Vijayasarathy SN

2024ರ ಎಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಆರು ತಿಂಗಳಲ್ಲಿ 6 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಐಫೋನ್​ಗಳನ್ನು ಹೊರದೇಶಗಳಿಗೆ ರಫ್ತು ಮಾಡಲಾಗಿದೆ.

Pic credit: Getty

ಆ್ಯಪಲ್​ನ ಸರಬರಾಜುದಾರ ಸಂಸ್ಥೆಗಳಾದ ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಭಾರತದಲ್ಲಿ ಐಫೋನ್​ಗಳನ್ನು ತಯಾರಿಸುತ್ತಿವೆ.

Pic credit: Getty

ಭಾರತದಲ್ಲಿ ತಯಾರಾಗುತ್ತಿರುವ ಐಫೋನ್​ನಲ್ಲಿ ಫಾಕ್ಸ್​ಕಾನ್ ಪಾಲು ಅರ್ಧದಷ್ಟಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಫಾಕ್ಸ್​ಕಾನ್ ಸಂಸ್ಥೆಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ.

Pic credit: Getty

ಟಾಟಾ ಎಲೆಕ್ಟ್ರಾನಿಕ್ಸ್​ನ ಕೋಲಾರ ಘಟಕದಲ್ಲಿ ತಯಾರಾಗುತ್ತಿರುವ ಐಫೋನ್​ನಲ್ಲಿ 1.7 ಬಿಲಿಯನ್ ಡಾಲರ್ ಮೌಲ್ಯದ ಫೋನ್​ಗಳನ್ನು ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ರಫ್ತು ಮಾಡಲಾಗಿದೆ.

Pic credit: Getty

2024ರ ಹಣಕಾಸು ವರ್ಷದಲ್ಲಿ ಆ್ಯಪಲ್ ಸಂಸ್ಥೆ 14 ಬಿಲಿಯನ್ ಡಾಲರ್ ಮೌಲ್ಯದ ಐಫೋನ್​ಗಳನ್ನು ಭಾರತದಲ್ಲಿ ತಯಾರಿಸಿದೆ. ಸಬ್ಸಿಡಿ, ಪರಿಣಿತ ಉದ್ಯೋಗಿಗಳ ಲಭ್ಯ, ತಂತ್ರಜ್ಞಾನ ನೆರವು ಇವು ನೆರವಾಗಿವೆ.

Pic credit: Getty

ಆ್ಯಪಲ್​ನ ಶೇ. 90ಕ್ಕಿಂತಲೂ ಹೆಚ್ಚು ಉತ್ಪನ್ನಗಳ ತಯಾರಿಕೆ ಈಗಲೂ ಚೀನಾದಲ್ಲೇ ಆಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಉತ್ಪಾದನೆ ವಿಸ್ತರಿಸಿದೆ ಆ್ಯಪಲ್.

Pic credit: Getty

ಅಮೆರಿಕಕ್ಕೆ ಭಾರತದಿಂದ ಅತಿಹೆಚ್ಚು ರಫ್ತಾಗುತ್ತಿರುವ ಸರಕುಗಳಲ್ಲಿ ಸ್ಮಾರ್ಟ್​​ಫೋನ್ ಮೊದಲಿದೆ. ಮೊದಲ 5 ತಿಂಗಳಲ್ಲಿ 2.88 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್​ಫೋನ್ ರಫ್ತಾಗಿದೆ.

Pic credit: Getty