ಸ್ವಂತ ಬಿಸಿನೆಸ್: ಜನೌಷಧಿ ಕೇಂದ್ರ ಆರಂಭಿಸಿ

13 March 2024

By: Vijayasarathy SN

ಜನೌಷಧಿ ಕೇಂದ್ರಗಳು ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುತ್ತವೆ. ಶೇ. 50ರಷ್ಟು ಔಷಧ ವೆಚ್ಚ ಇಳಿಸಲು ನೆರವಾಗುತ್ತವೆ.

ಕಡಿಮೆ ಬೆಲೆ

(Pic credit: Google)

ಭಾರತದಾದ್ಯಂತ 10,624 ಜನೌಷಧಿ ಅಂಗಡಿಗಳಿವೆ. 2026ರ ಮಾರ್ಚ್​ನೊಳಗೆ ಇದರ ಸಂಖ್ಯೆ 25,000 ಆಗಿಸುವ ಗುರಿ ಇದೆ.

ಸರ್ಕಾರದ ಪ್ರೋತ್ಸಾಹ

(Pic credit: Google)

ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರ SIDBI ಸಾಲ ಯೋಜನೆಯೊಂದನ್ನು ಆರಂಭಿಸಿದೆ. ಇದರಲ್ಲಿ ಅಡಮಾನರಹಿತ ಸಾಲ ನೀಡಲಾಗುತ್ತದೆ.

ಸಾಲ ಸೌಲಭ್ಯ

(Pic credit: Google)

ಸ್ವಂತ ಉದ್ಯೋಗ ಮಾಡಬಯಸುವ ಯುವಕರು ಇತರ ಮೆಡಿಕಲ್ ಸ್ಟೋರ್ ರೀತಿಯಲ್ಲಿ ಜನೌಷಧಿ ಮಳಿಗೆ ಆರಂಭಿಸಬಹುದು.

ಸ್ವಂತ ಉದ್ಯೋಗ

(Pic credit: Google)

ಜನೌಷಧಿ ಕೇಂದ್ರದ ಅಧಿಕೃತ ವೆಬ್​ಸೈಟ್​ಗೆ ಹೋಗಿ ಅನ್ಲೈನ್ ಅಪ್ಲಿಕೇಶನ್ ಭರ್ತಿ ಮಾಡಿ ಸಲ್ಲಿಸಬೇಕು. ವೆಬ್ ವಿಳಾಸ ಇಂತಿದೆ: hanaushadhi.gov.in/

ಆನ್ಲೈನ್ ಅರ್ಜಿ

(Pic credit: Google)

ಜನೌಷಧಿ ಮಳಿಗೆ ಸ್ಥಾಪಿಸುವವರು ಬಿಫಾರ್ಮ ಅಥವಾ ಡಿಫಾರ್ಮ ಪದವಿ ಪಡೆದಿರಬೇಕು. ಕೆಲಸ ಮಾಡುವವರಿಗೂ ಆ ವಿದ್ಯಾರ್ಹತೆ ಬೇಕು.

ವಿದ್ಯಾರ್ಹತೆ

(Pic credit: Google)

ಡ್ರಗ್ ಲೈಸೆನ್ಸ್ ಪಡೆಯಬೇಕು. ಮಳಿಗೆ ಸ್ಥಾಪನೆಗೆ ಕನಿಷ್ಠ 120 ಚದರಡಿ ಜಾಗದ ವ್ಯವಸ್ಥೆ ಮಾಡಿಕೊಳ್ಳಬೇಕು.

ಲೈಸೆನ್ಸ್ ಪಡೆಯಿರಿ

(Pic credit: Google)

ಸಿಡ್ಬಿಯಿಂದ 4 ಲಕ್ಷ ರೂವರೆಗೂ ಸಾಲ ಸಿಗುತ್ತದೆ. ಶೇ. 11ರಷ್ಟು ಬಡ್ಡಿ ಇರುತ್ತದೆ. ಮಳಿಗೆ ಸ್ಥಾಪನೆಗೆ ಇಷ್ಟು ಹಣ ಸಾಕಾಗಬಹುದು.

4 ಲಕ್ಷ ಸಾಲ

(Pic credit: Google)

ಜನೌಷಧಿ ಕೇಂದ್ರದಲ್ಲಿ ಎಂಆರ್​ಪಿ ಬೆಲೆಗೆ ಔಷಧ ಮಾರಿದರೆ ನಿಮಗೆ ಶೇ. 20ರಷ್ಟು ಲಾಭ ಸಿಗುತ್ತದೆ. ಈ ಮೂಲಕ ಉತ್ತಮ ಆದಾಯ ಗಳಿಸಬಹುದು.

20% ಲಾಭ

(Pic credit: Google)