26-02-2024

ಲಿಫ್ಟ್‌ನಲ್ಲಿ ಸಿಲುಕಿಕೊಂಡರೆ ತಕ್ಷಣ ಏನು ಮಾಡಬೇಕು?

Author: Vinay Bhat

ಲಿಫ್ಟ್‌ನಲ್ಲಿ ಜಾಗರೂಕರಾಗಿರಿ

ಲಿಫ್ಟ್ ಸಾವಿಗೆ ಕಾರಣವಾಗಬಹುದು. ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಈ ಕೆಲವು ತಪ್ಪುಗಳನ್ನು ನೀವು ಮಾಡಿದರೆ ಅದು ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು.

ಅನೇಕ ಪ್ರಕರಣ

ಇತ್ತೀಚಿನ ದಿನಗಳಲ್ಲಿ, ಲಿಫ್ಟ್‌ನಲ್ಲಿ ಸಿಲುಕಿಕೊಳ್ಳುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾಗೆಯೆ ಪ್ರಾಣ ಕಳೆದುಕೊಂಡ ಸುದ್ದಿಯೂ ಬರುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಇರಬೇಕು.

ನೆನಪಿನಲ್ಲಿಡಿ

ಸಾಮಾನ್ಯವಾಗಿ ಲಿಫ್ಟ್‌ನಲ್ಲಿ ಸಿಲುಕಿಹಾಕಿಕೊಂಡ ನಂತರ, ಜನರು ಭಯಭೀತರಾಗುತ್ತಾರೆ. ಕೆಲವರು ಕಿರುಚಲು ಪ್ರಾರಂಭಿಸುತ್ತಾರೆ. ಆದರೆ ಹೀಗೆ ಮಾಡಬಾರದು.

ಉಸಿರಾಟದ ತೊಂದರೆ

ಲಿಫ್ಟ್‌ನಲ್ಲಿ ಸಿಲುಕಿಕೊಂಡರೆ ಕಿರುಚುವುದು ಅಥವಾ ಆತಂಕಗೊಳ್ಳಬಾರದು. ಇದು ನಿಮಗೆ ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದು ಅಪಾಯಕ್ಕೆ ಕಾರಣವಾಗಬಹುದು.

ಕಾಲ್ ಬಟನ್

ಲಿಫ್ಟ್​ನ ಕಂಟ್ರೋಲ್ ಪ್ಯಾನೆಲ್​ನಲ್ಲಿ ಕಾಲ್ ಬಟನ್ ಇದ್ದು, ಈ ಮೂಲಕ ನಿರ್ವಹಣಾ ತಂಡಕ್ಕೆ ಸೂಚಿಸಬಹುದು. ಈ ಬಟನ್ ಒತ್ತಿ ಸಿಬ್ಬಂದಿಗೆ ಮಾಹಿತಿ ನೀಡಿ.

ಪ್ಯಾನಿಕ್ ಬಟನ್

ಇದಲ್ಲದೆ, ಲಿಫ್ಟ್‌ನಲ್ಲಿ ಪ್ಯಾನಿಕ್ ಬಟನ್ ಅನ್ನು ಸಹ ಒದಗಿಸಲಾಗಿದೆ. ಕರೆ ಬಟನ್ ಒತ್ತಿದ ತಕ್ಷಣ, ಪ್ಯಾನಿಕ್ ಬಟನ್ ಅನ್ನು ಪದೇ ಪದೇ ಒತ್ತಿರಿ.

ಪರೀಕ್ಷಿಸಿ

ನೀವು ಲಿಫ್ಟ್ ಅನ್ನು ಪ್ರವೇಶಿಸಿದ ತಕ್ಷಣ, ಲಿಫ್ಟ್ ಬಾಗಿಲು ಸರಿಯಾಗಿ ಮುಚ್ಚಲ್ಪಟ್ಟಿದೆಯೇ ಅಥವಾ ಅದರಲ್ಲಿ ತುರ್ತು ಎಚ್ಚರಿಕೆಯ ಬಟನ್‌ಗಳನ್ನು ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ.