By: Vijayasarathy SN
ಚಿನ್ನಕ್ಕೆ ಹಾಲ್ಮಾರ್ಕ್ ಗುರುತು ಯಾಕೆ?
916 ಗೋಲ್ಡ್ ಎಂದರೇನು?
05 Dec 2023
ಚಿನ್ನ ಪ್ರತಿಯೊಬ್ಬರಿಗೂ ಪ್ರಿಯವಾಗಿರುವ ಅಮೂಲ್ಯ ಲೋಹ. ಚಿನ್ನದ ಆಭರಣ ಮಾಡಿಸಬಹುದು, ಹೂಡಿಕೆಗೆ ಬಳಸಬಹುದು.
ಚಿನ್ನ ಮೆಚ್ಚು
(Pic credit: Google)
ಗ್ರಾಹಕ ಸರಕುಗಳಿಗೆ ಗುಣಮಟ್ಟದ ಸಂಕೇತವಾಗಿ ಐಎಸ್ಐ ಚಿಹ್ನೆ ಇರುವಂತೆ ಚಿನ್ನಕ್ಕೆ ಬಿಐಎಸ್ ಹಾಲ್ಮಾರ್ಕ್ ಗುರುತು ಇರುತ್ತದೆ.
ಗುಣಮಟ್ಟ ಪ್ರಮಾಣ
(Pic credit: Google)
ಬಿಐಎಸ್ ಎಂಬುದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್. ಇದು ಚಿನ್ನದ ಗುಣಮಟ್ಟ ಪ್ರಮಾಣೀಕರಿಸುತ್ತದೆ. ಹಾಲ್ಮಾರ್ಕ್ ಗುರುತು ಹಾಕುತ್ತದೆ.
ಏನಿದು ಬಿಐಎಸ್?
(Pic credit: Google)
ಆಭರಣಕ್ಕೆ ಹಾಕಲಾಗುವ ಹಾಲ್ಮಾರ್ಕ್ನಲ್ಲಿ ಬಿಐಎಸ್ ಚಿಹ್ನೆ, ಚಿನ್ನದ ಶುದ್ಧತೆ, ಹಾಲ್ಮಾರ್ಕ್ ಸೆಂಟರ್, ತಯಾರಕರ ಗುರುತು ಇರುತ್ತದೆ.
ಏನಿದು ಹಾಲ್ಮಾರ್ಕ್?
(Pic credit: Google)
ಚಿನ್ನದ ಹಾಲ್ಮಾರ್ಕ್ನಲ್ಲಿ 916 ಎಂದು ಬರೆದಿರುವುದನ್ನು ಕಾಣಬಹುದು. ಇದು 22 ಕ್ಯಾರಟ್ ಚಿನ್ನದ ಗುರುತು. ಅಂದರೆ ಶೇ. 91.6ರಷ್ಟು ಶುದ್ಧ ಚಿನ್ನ.
ಬಿಐಎಸ್916 ಎಂದರೇನು?
(Pic credit: Google)
ಶುದ್ಧ ಚಿನ್ನ 24 ಕ್ಯಾರಟ್ನದ್ದು. ಇದು 100% ಚಿನ್ನ. 22 ಕ್ಯಾರಟ್ ಚಿನ್ನ ಎಂದರೆ 24 ಭಾಗದಲ್ಲಿ 22 ಭಾಗ ಚಿನ್ನ, ಇನ್ನುಳಿದದ್ದು ಬೆಳ್ಳಿ, ತಾಮ್ರ ಇತ್ಯಾದಿ.
ಏನಿದು ಕ್ಯಾರಟ್ ಲೆಕ್ಕ?
(Pic credit: Google)
ಚಿನ್ನದ ಆಭರಣ ತಯಾರಿಸಲು ಸೂಕ್ಷ್ಮ ಕಸೂತಿ ಬೇಕು. ಅಪರಂಜಿ ಚಿನ್ನದಿಂದ ಇದು ಆಗದು. ಅದಕ್ಕೆ ಬೇರೆ ಲೋಹ ಬೆರೆಸಿದರೆ ಒಡವೆ ಕೆತ್ತನೆಗೆ ಸುಲಭವಾಗುತ್ತದೆ.
ಒಡವೆಗೆ ಯಾಕೆ 22ಕೆ?
(Pic credit: Google)
ಆಭರಣ ಚಿನ್ನಗಳಲ್ಲಿ ಹೆಚ್ಚಿನವು 22ಕೆ. ಇದರ ಶುದ್ಧತೆ ಶೇ. 91.6. 18 ಕ್ಯಾರಟ್ ಚಿನ್ನದ ಶುದ್ಧತೆ ಶೇ. 75 ಇರುತ್ತದೆ. ಇದಕ್ಕೆ ಬಿಐಎಸ್ ಕೆ750 ಗುರುತು ಇರುತ್ತದೆ.
ಬೇರೆ ಕ್ಯಾರಟ್ ಗೋಲ್ಡ್
(Pic credit: Google)
Next: ಮಹಿಳಾ ಉದ್ದಿಮೆದಾರರಿಗೆ ಸರ್ಕಾರಿ ಯೋಜನೆಗಳಿವು
ಇನ್ನಷ್ಟು ನೋಡಿ