ಹಂದಿ ಕಡಿಯುವ ಸ್ಕ್ಯಾಮ್​ಗೆ ಬಲಿಯಾಗಬೇಡಿ; ಟಿಪ್ಸ್

16 Nov 2023

By: Vijayasarathy SN

ಹುಷಾರ್

ಝೀರೋಧ ಮಾಲೀಕ ನಿತಿನ್ ಕಾಮತ್ ಇತ್ತೀಚೆಗೆ ಪಿಗ್ ಬಚರಿಂಗ್ ಸ್ಕ್ಯಾಮ್ ಅಥವಾ ಹಂದಿ ಕಡಿಯುವ ವಂಚನೆಗಳ ಬಗ್ಗೆ ಬೆಳಕುಚೆಲ್ಲಿದ್ದರು. ಈ ಸೈಬರ್​ಕ್ರೈಮ್ ಬಗ್ಗೆ ಹುಷಾರಾಗಿರಿ..!

(Pic credit: Google)

ಟಿಪ್ಸ್ 1

ಫೇಸ್ಬುಕ್, ಇನ್ಸ್​ಟಾ ಇತ್ಯಾದಿ ಸೋಷಿಯಲ್ ಮೀಡಿಯಾ, ವಾಟ್ಸಾಪ್, ಡೇಟಿಂಗ್ ಆ್ಯಪ್​ಗಳಲ್ಲಿ ಅಪರಿಚಿತರಿದಂ ಬರುವ ಯಾವುದೇ ಮೆಸೇಜ್​ಗಳಿಗೂ ಉತ್ತರ ನೀಡಬೇಡಿ.

(Pic credit: Google)

ಟಿಪ್ಸ್ 2

ಯಾರಾದರೂ ಸರಿ ಹೊಸ ಆ್ಯಪ್ ಡೌನ್ಲೋಡ್ ಮಾಡಬೇಕೆಂದೋ, ಲಿಂಕ್ ತೆರೆಯಬೇಕೆಂದೋ ಕೇಳಿದರೆ ಅದು ಅಪಾಯದ ಕರೆಗಂಟೆ ಎಂದು ಭಾವಿಸಿ, ಎಚ್ಚರವಹಿಸಬೇಕು.

(Pic credit: Google)

ಟಿಪ್ಸ್ 3

ಉತ್ತಮ ಕಡೆ ಉದ್ಯೋಗ ಕೊಡಿಸುವುದು, ಹೈ ರಿಟರ್ನ್​ನ ಭರವಸೆ ನೀಡುವುದು ಇತ್ಯಾದಿ ಆಮಿಷಗಳನ್ನು ಯಾರಾದರೂ ಒಡ್ಡಿದರೆ ಅದೂ ಕೂಡ ಅಪಾಯದ ಎಚ್ಚರಿಕೆ ಎಂದು ಭಾವಿಸಬೇಕು.

(Pic credit: Google)

ಟಿಪ್ಸ್ 4

ನಿಮ್ಮ ಆಸೆ, ಕನಸು, ಭಯ ಇತ್ಯಾದಿ ಭಾವನೆಗಳು ವಂಚಕರಿಗೆ ಅಸ್ತ್ರವಾಗುತ್ತವೆ. ಯಾವುದೇ ಆಸೆ ಆಮಿಷಗಳನ್ನು ಒಡ್ಡಿದರೂ ತತ್​ಕ್ಷಣಕ್ಕೆ ಸ್ಪಂದಿಸಬೇಡಿ.

(Pic credit: Google)

ಟಿಪ್ಸ್ 5

ಒಬ್ಬರ ನಡವಳಿಕೆ ನಿಮಗೆ ಅನುಮಾನ ಹುಟ್ಟಿಸಿದರೆ ಅಥವಾ ಮೋಸ ಹೋಗಿದ್ದು ಗೊತ್ತಾದರೆ ವಕೀಲರ ಮೂಲಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ.

(Pic credit: Google)

ಟಿಪ್ಸ್ 6

ಅಪರಿಚಿತ ಹುಡುಗಿಯಿಂದ ಸ್ನೇಹಕ್ಕಾಗಿ ಮೆಸೇಜ್ ಬಂದಾಗ ಹುಷಾರಾಗಿರಿ. ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಹನಿಟ್ರ್ಯಾಪ್ ಮಾಡಿ ಸಂಕಷ್ಟಕ್ಕೆ ಬೀಳಿಸಬಹುದು.

(Pic credit: Google)

ಟಿಪ್ಸ್ 7

ಆಧಾರ್, ಪಾಸ್​ಪೋರ್ಟ್ ಇತ್ಯಾದಿ ವೈಯಕ್ತಿಕ ಗುರುತಿನ ಮಾಹಿತಿ; ಬ್ಯಾಂಕ್, ಕ್ರಿಪ್ಟೋ ಇತ್ಯಾದಿ ಹಣಕಾಸು ಮಾಹಿತಿಯನ್ನು ಯಾರಿಗೂ ಕೊಡಬೇಡಿ.

(Pic credit: Google)