ಕೋಟಿ ಹಣ ಗಳಿಸಿ ಕುಬೇರರಾಗಬೇಕಾ? ಈ ಟಿಪ್ಸ್ ತಿಳಿದಿರಿ
17 Oct 2023
By: Vijayasarathy SN
ಸಕಲೈಶ್ವರ್ಯಗಳನ್ನು ಪ್ರಾಪ್ತಿ ಮಾಡಿಕೊಂಡು ಶ್ರೀಮಂತರಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಈ ನಿಟ್ಟಿನಲ್ಲಿ ಹಣಕಾಸು ಉಪಾಯಗಳು ಏನಿವೆ? ಮುಂದೆ ನೋಡಿ...
ಹಣಕಾಸು ಉಪಾಯಗಳು
ಮೊತ್ತಮೊದಲಿಗೆ ನಿಮಗೆ ಹಣದ ಮೌಲ್ಯ ಅರಿವಿರಬೇಕು. ನೀವು ಉಳಿಸುವು ಪ್ರತೀ ರುಪಾಯಿಯೂ ಅಷ್ಟೇ ಗಳಿಕೆಗೆ ಸಮ ಎನ್ನುವುದನ್ನು ಅರಿಯಬೇಕು.
ಹಣ ಉಳಿತಾಯ
ಸಂಬಳ ಇತ್ಯಾದಿ ಯಾವುದೋ ಒಂದು ಆದಾಯ ಇದ್ದರೆ ಕಷ್ಟ. ಆ ವರ್ತುಲದಿಂದ ಆಚೆ ಬಂದು ಶ್ರೀಮಂತರಾಗುವುದು ಕಷ್ಟ. ಹೆಚ್ಚು ಆದಾಯ ಮೂಲ ಸೃಷ್ಟಿಸಿಕೊಳ್ಳಿ.
ಬಹು ಮೂಲಗಳು
ನಿಮ್ಮ ಪ್ರತೀ ದಿನದ ಖರ್ಚು ವೆಚ್ಚಗಳನ್ನು ಬರೆದಿಡಿ. ತಿಂಗಳಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ವ್ಯಯವಾಗಿದೆ ತಿಳಿಯಿರಿ. ತೀರಾ ಅನಗತ್ಯವಾದ ಖರ್ಚಿನಿಂದ ದೂರವಿರಿ.
ಅನಗತ್ಯ ವೆಚ್ಚ ಬೇಡ
ನೀವು ಕಷ್ಟಪಟ್ಟು ಉಳಿಸಿದ ಹಣವನ್ನು ಹೂಡಿಕೆ ಮಾಡಿ ಬೆಳೆಸದಿದ್ದರೆ ಪ್ರಯೋಜನ ಇಲ್ಲ. ಉತ್ತಮ ರಿಟರ್ನ್ ತರಬಲ್ಲ ಹಲವು ಒಳ್ಳೆಯ ಸ್ಕೀಮ್ಗಳಿವೆ. ಅವುಗಳನ್ನು ಪಡೆಯಿರಿ.
ಹೂಡಿಕೆ ಬೇಕು
ಲೈಫ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಇವೆರಡೂ ಮುಖ್ಯ. ಎಫ್ಡಿ ಮಾಡಿಸಿ ಅದನ್ನು ಎಮರ್ಜೆನ್ಸಿ ಫಂಡ್ ಆಗಿ ಪರಿಗಣಿಸಿ. ಮ್ಯುಚುವಲ್ ಫಂಡ್, ಚಿನ್ನ, ಬಾಂಡ್ಗಳಲ್ಲಿ ಹೂಡಿಕೆ ಮಾಡಿ.
ಇವು ಮುಖ್ಯ...
ಸಾಲ ಶೂಲವಿದ್ದಂತೆ ಎಂಬುದು ಗೊತ್ತಿರಲಿ. ತೀರಾ ಅಗತ್ಯಬಿದ್ದರಷ್ಟೇ ಸಾಲಕ್ಕೆ ಮೊರೆಹೋಗಿ. ಸಾಲ ಮಾಡಿದರೆ ಅದನ್ನು ಸಾಧ್ಯವಾದಷ್ಟೂ ಬೇಗ ತೀರಿಸುವತ್ತ ಗಮನ ಇರಲಿ.
ಸಾಲ ಶೂಲ
ನೀವು ಆದಾಯ ಮೂಲ ಸೃಷ್ಟಿಸಲು ಅಥವಾ ವೃತ್ತಿಯಲ್ಲಿ ಏಳ್ಗೆ ಪಡೆಯಲು ನಿಮ್ಮ ಕೌಶಲ್ಯವೃದ್ದಿ ಅಥವಾ ಹೊಸ ವಿದ್ಯೆಗಳ ಕಲಿಕೆ ಮುಖ್ಯ. ಸದಾ ಅನ್ವೇಷಿಸುವ ಸ್ವಭಾವ ನಿಮ್ಮದಾಗಲಿ.
ಕಲಿಕೆ ಮುಖ್ಯ
Next Story: ಭವಿಷ್ಯಕ್ಕೆ ಬುನಾದಿ ಹಾಕುವ ಹಣಕಾಸು ಧೋರಣೆಗಳು
ಧನ್ಯವಾದಗಳು..!
ಕ್ಲಿಕ್ ಮಾಡಿ