ಆನ್​ಲೈನ್ ವಂಚಕರ ಪತ್ತೆ ಹೇಗೆ?

08 July 2024

Pic credit: Google

Vijayasarathy SN

ಆನ್​ಲೈನ್​ನಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಾ ಸುಲಿಗೆ ನಡೆಸುವ ದುರುಳರು ಇರುತ್ತಾರೆ. ಇಂಥವರಿಂದ ದೂರವಾಗುವುದು ಹೇಗೆಂದು ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಸಲಹೆಗಳ ಪಟ್ಟಿ ಮಾಡಿದೆ.

ಐಸಿಐಸಿಐ ಬ್ಯಾಂಕ್ ಸಲಹೆ

Pic credit: Google

ವಂಚಕರು ಕರೆ ಮಾಡಿದಾಗ ವಿವಿಧ ರೀತಿಯಲ್ಲಿ ಒತ್ತಡ ಹಾಕುತ್ತಾರೆ. ಹಣಕ್ಕಾಗಿ ಬೆದಕರಿಕೆ ಹಾಕಬಹುದು. ಇಂಥ ಒತ್ತಡಗಳಿಗೆ ಬಲಿಯಾಗಬೇಡಿ. ಕರೆಗೆ ಸ್ಪಂದಿಸದೆಯೇ ಕಟ್ ಮಾಡಿ.

ಸ್ಪಂದಿಸದಿರಿ...

Pic credit: Google

ಯಾವುದಾದರೂ ಕಾರಣ ಹೇಳಿ ಗಿಫ್ಟ್, ಹ್ಯಾಂಪರ್ಸ್, ವೋಚರ್ಸ್ ಇತ್ಯಾದಿ ಅಸ್ವಾಭಾವಿಕ ವಿಧಾನಗಳಿಂದ ಹಣ ಪಾವತಿಗೆ ಕೇಳಬಹುದು. ಹೀಗಿದ್ದಾಗ ಜಾಗ್ರತೆಯಿಂದಿರಿ. ಯಾವುದೇ ವಹಿವಾಟು ಮಾಡಬೇಡಿ.

ಹಣ ಪಾವತಿಸದಿರಿ...

Pic credit: Google

ಕರೆ ಮಾಡಿದಾತ ತಾನು ಇಂಥ ಸಂಸ್ಥೆಗೆ ಸೇರಿದವನೆಂದು ಹೇಳಿ ಸಂಪರ್ಕಿಸಲು ನಂಬರ್ ಕೊಡಬಹುದು. ಆದರೆ, ಆ ಸಂಸ್ಥೆಯ ಅಧಿಕೃತ ಕಸ್ಟಮರ್ ಕೇರ್​ಗೆ ಕರೆ ಮಾಡಿ ವಿಚಾರಿಸಿ ನೋಡಿ.

ಸಂಪರ್ಕಿಸುವ ಮುನ್ನ...

Pic credit: Google

ವಂಚಕರು ಇಮೇಲ್ ಅಥವಾ ಟೆಕ್ಸ್ಟ್ ಮೆಸೇಜ್ ಮೂಲಕ ನಿಮ್ಮನ್ನು ಸೆಳೆಯಲು ಯತ್ನಿಸುತ್ತಾರೆ. ನೀವು ಆ ಸಂದೇಶಗಳಿಗೆ ಸ್ಪಂದಿಸಿದರೆ ಸುಲಿಗೆಗೆ ತೊಡಗುವ ಅಪಾಯ ಹೆಚ್ಚಿರುತ್ತದೆ.

ಮೆಸೇಜ್​ಗೆ ಸ್ಪಂದಿಸದಿರಿ...

Pic credit: Google

ಯಾವುದೇ ಅಪರಿಚಿತರಿಗೆ ನಿಮ್ಮ ಡಿಎಲ್, ಪಾಸ್​ಪೋರ್ಟ್, ಆಧಾರ್, ಬ್ಯಾಂಕ್ ಅಕೌಂಟ್ ಮಾಹಿತಿ ಕೊಡಬೇಡಿ. ಕ್ರೆಡಿಟ್ ಕಾರ್ಡ್ ಕೊಡಬೇಡಿ, ಅಥವಾ ಹಣ ಕಳುಹಿಸಬೇಡಿ.

ಖಾಸಗಿ ಮಾಹಿತಿ ಬೇಡ

Pic credit: Google

ಇಮೇಲ್ ಬಗ್ಗೆ ಅನುಮಾನ ಬಂದಲ್ಲಿ, ಅದರಲ್ಲಿರುವ ಅಟ್ಯಾಚ್​ಮೆಂಟ್ ಡೌನ್​ಲೋಡ್ ಮಾಡಬೇಡಿ. ಶಂಕಾಸ್ಪದ ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ. ಇವು ಮೊಬೈಲ್ ಅಥವಾ ಕಂಪ್ಯೂಟರ್​ಗೆ ವೈರಸ್ ತರಬಹುದು.

ಇಮೇಲ್ ವಂಚನೆ

Pic credit: Google