E100 ಇಂಧನ ಪೆಟ್ರೋಲ್​ಗಿಂತ ಎಷ್ಟು ಭಿನ್ನ?

03 Sep 2024

Pic credit: Google

Vijayasarathy SN

ಇಥನಾಲ್ ಇಂಧನ

ಇಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಸರ್ಕಾರ ಕೆಲವಾರು ವರ್ಷಗಳಿಂದ ಉತ್ತೇಜಿಸುತ್ತಾ ಬರುತ್ತಿದೆ. ಅದರ ಪರಿಣಾಮವಾಗಿ ಇ15, ಇ20, ಮತ್ತು ಈಗ ಇ100 ಇಂಧನ ಸಿದ್ಧವಾಗಿದೆ.

Pic credit: Google

ಸರ್ಕಾರಕ್ಕೆ ಉಳಿತಾಯ

ಪೆಟ್ರೋಲ್ ಮತ್ತು ಡೀಸಲ್ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಯಲು ಮತ್ತು ಆಮದುವೆಚ್ಚ ಕಡಿಮೆ ಮಾಡಲು ಸರ್ಕಾರ ಎಥನಾಲ್ ಪ್ರಯೋಗ ಮಾಡುತ್ತಿದೆ.

Pic credit: Google

500 ಬಂಕ್​ಗಳಲ್ಲಿ ಲಭ್ಯ

ಇಥನಾಲ್100 ಅಥವಾ ಇ100 ಇಂಧನವನ್ನು ಮಾರ್ಚ್ ತಿಂಗಳಲ್ಲಿ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ದೇಶಾದ್ಯಂತ ಸುಮಾರು 500 ಪೆಟ್ರೋಲ್ ಔಟ್​ಲೆಟ್​ಗಳಲ್ಲಿ ಇ100 ಲಭ್ಯ ಇದೆ.

Pic credit: Google

ಎಥನಾಲ್ ಇಂಧನವೇನು?

ಇ15 ಇಂಧನದಲ್ಲಿ ಇಥನಾಲ್ ಅಂಶ ಶೇ. 15ರಷ್ಟು ಇರುತ್ತದೆ. ಪೆಟ್ರೋಲ್ ಅಂಶ ಶೇ. 85 ಇರುತ್ತದೆ. ಇ20 ಇಂಧನದಲ್ಲಿ ಇಥನಾಲ್ ಅಂಶ ಶೇ. 20ರಷ್ಟು ಇದ್ದರೆ ಪೆಟ್ರೋಲ್ ಶೇ. 80 ಇರುತ್ತದೆ.

Pic credit: Google

ಇ100ನಲ್ಲಿ ಎಷ್ಟು?

ಇ100 ಇಂಧನದಲ್ಲಿ ನೂರಕ್ಕೆ ನೂರು ಇಥನಾಲ್ ಇರುವುದಿಲ್ಲ. ಶೇ. 93 ಅಥವಾ 93.5ರಷ್ಟು ಇಥನಾಲ್ ಇರುತ್ತೆ. ಶೇ. 5 ಪೆಟ್ರೋಲ್, ಮತ್ತು ಶೇ. 1.5ರಷ್ಟು ಕೋ ಸಾಲ್ವೆಂಟ್ ಇರುತ್ತೆ.

Pic credit: Google

ಪೂರ್ತಿ ಇಥನಾಲ್ ಯಾಕಿಲ್ಲ?

ಪೂರ್ಣ ಇಥನಾಲ್ ಅನ್ನು ಇಂಧನವಾಗಿ ಬಳಸಬಹುದು. ಆದರೆ, ಸುರಕ್ಷತೆ ದೃಷ್ಟಿಯಿಂದ ಬಳಸುತ್ತಿಲ್ಲ. ಬೆಂಕಿ ಹೊತ್ತಿಕೊಂಡಾಗ ನೀವು ಕಾರಿನೊಳಗೆ ಹೋಗುವವರೆಗೂ ಜ್ವಾಲೆ ಕಾಣುವುದಿಲ್ಲ.

Pic credit: Google

ಪೆಟ್ರೋಲ್ ಮಿಶ್ರಣ

ಇಥನಾಲ್​ಗೆ ಸ್ವಲ್ಪ ಪೆಟ್ರೋಲ್ ಬೆರೆಸಿದಾಗ ಬೆಂಕಿ ಜ್ವಾಲೆ ಹಳದಿ ಬಣ್ಣದಲ್ಲಿ ಕಾಣುತ್ತದೆ. ಹೀಗಾಗಿ, ಇ100 ಇಂಧನದಲ್ಲಿ ಶೇ. 5ರಷ್ಟು ಪೆಟ್ರೋಲ್ ಬೆರೆಸಲಾಗುತ್ತದೆ.

Pic credit: Google