By: Vijayasarathy SN
ಪೂರ್ಣ ಪ್ರಮಾಣದ ಬಜೆಟ್ ಯಾವಾಗ ಆಗುತ್ತೆ?
25 Jan 2024
ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ (Interim Budget) ಮಂಡನೆ ಮಾಡಲಿದ್ದಾರೆ.
ಮಧ್ಯಂತರ ಬಜೆಟ್
(Pic credit: Google)
ಲೋಕಸಭೆ ಚುನಾವಣೆಗೆ ಪೂರ್ಣಪ್ರಮಾಣದ ಬಜೆಟ್ ಮಂಡನೆ ಮಾಡುವಂತಿಲ್ಲ. ಮಧ್ಯಂತರ ಬಜೆಟ್ಗೆ ಮಾತ್ರ ಅವಕಾಶ ಇರುತ್ತದೆ.
ಪೂರ್ಣ ಬಜೆಟ್ ಇಲ್ಲ
(Pic credit: Google)
ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಖರ್ಚು ವೆಚ್ಚ ಹಾಗೂ ಆಡಳಿತ ನಿರ್ವಹಣೆಗೆ ಸರ್ಕಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಮಧ್ಯಂತರ ಬಜೆಟ್ ಯಾಕೆ?
(Pic credit: Google)
ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ಮುಗಿಯಲಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜುಲೈನಲ್ಲಿ ಅಧಿಕೃತ ಬಜೆಟ್ ಮಂಡನೆ ಆಗಬಹುದು.
ಜುಲೈನಲ್ಲಿ ಅಧಿಕೃತ ಬಜೆಟ್
(Pic credit: Google)
ಚುನಾವಣೆ ಸಮೀಪ ಇರುವುದರಿಂದ ಮತದಾರರನ್ನು ಪ್ರಭಾವಗೊಳಿಸುವಂತಹ ಪ್ರಲೋಬನೆಗಳನ್ನು ಸರ್ಕಾರ ಬಜೆಟ್ ಮೂಲಕ ಮಂಡಿಸುವ ಸಾಧ್ಯತೆ ಇರುತ್ತದೆ.
ಮಧ್ಯಂತರ ಬಜೆಟ್ ಮಿತಿ?
(Pic credit: Google)
ಸರ್ಕಾರದ ನೀತಿಯಲ್ಲಿ ಗಮನಾರ್ಹ ಬದಲಾವಣೆಯಾಗಲೀ, ದೊಡ್ಡ ಘೋಷಣೆಗಳನ್ನಾಗಲೀ, ದೊಡ್ಡ ಮಟ್ಟದ ತೆರಿಗೆ ಬದಲಾವಣೆ ಇತ್ಯಾದಿ ಮಾಡುವಂತಿಲ್ಲ.
ದೊಡ್ಡ ಬದಲಾವಣೆ ಇಲ್ಲ
(Pic credit: Google)
ಈ ಮಧ್ಯಂತರ ಬಜೆಟ್ನಲ್ಲಿ ದೊಡ್ಡ ಘೋಷಣೆ ಅಥವಾ ನಿರ್ಧಾರಗಳು ಬರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸುಳಿವು ನೀಡಿದ್ದಾರೆ.
ಹಣಕಾಸು ಸಚಿವೆ ಸುಳಿವು
(Pic credit: Google)
ಈ ಮಧ್ಯಂತರ ಬಜೆಟ್ ಲೋಕಸಭೆಗೆ ಚುನಾವಣೆಗೆ ಮುನ್ನ ಲೇಖಾನುದಾನ ಅಥವಾ ವೋಟ್ ಆನ್ ಅಕೌಂಟ್ಗಾಗಿ ಮಾತ್ರವೇ ಇರುತ್ತದೆ ಎಂದು ಸಚಿವೆ ಸ್ಪಷ್ಟಪಡಿಸಿರುವುಂಟು.
ಲೇಖಾನುದಾನ
(Pic credit: Google)
ನಿರ್ಮಲಾ ಸೀತಾರಾಮನ್ ಐದು ಬಾರಿ ಪೂರ್ಣ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಇದು ಮೊದಲ ಮಧ್ಯಂತರ ಬಜೆಟ್. 2019ರಲ್ಲಿ ಪೀಯುಶ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ್ದರು.
ಐದು ಬಾರಿ ಬಜೆಟ್
(Pic credit: Google)
Next: ಬಜೆಟ್ ಮಂಡನೆ; ಸೂಟ್ಕೇಸ್ ಕೈಬಿಟ್ಟ ಕಥೆ
ಇನ್ನಷ್ಟು ನೋಡಿ