ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ಅಲ್ಲಿನ ತಂತ್ರಜ್ಞಾನ ದಿಗ್ಗಜರೊಂದಿಗೆ ಸಭೆ ನಡೆಸಿದರು. 15 ಟಾಪ್ ಕಂಪನಿಗಳ ಸಿಇಒಗಳ ಜೊತೆ ಮೋದಿ ಸಂವಾದ ನಡೆಸಿದರು.
ಅಮೆರಿಕ ಭೇಟಿ
Pic credit: PTI
ಭಾರತದಲ್ಲಿ ಕೌಶಲ್ಯವಂತ ಉದ್ಯೋಗಿಗಳ ಲಭ್ಯತೆ, ಬೆಳೆಯುತ್ತಿರುವ ಮಾರುಕಟ್ಟೆ, ಪ್ರಜಾತಂತ್ರ ಚೌಕಟ್ಟು ಇವುಗಳ ಸಂಯೋಜನೆ ಇದೆ ಎಂದು ನ್ಯೂಯಾರ್ಕ್ನಲ್ಲಿ ಟೆಕ್ ಸಿಇಒಗಳಿಗೆ ಮೋದಿ ಹೇಳಿದರು.
ಹೂಡಿಕೆಗೆ ಪ್ರಶಸ್ತ
Pic credit: PTI
ನರೇಂದ್ರ ಮೋದಿ ಹಾಗೂ ಭಾರತ ದೇಶದ ಬಗ್ಗೆ ಅಮೆರಿಕನ್ ತಂತ್ರಜ್ಞಾನ ಉದ್ಯಮಿಗಳು ಶ್ಲಾಘಿಸಿದರು. ದೇಶದ ಬೆಳವಣಿಗೆ ಬಗ್ಗೆ ಮೋದಿ ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೋದಿ ಬಗ್ಗೆ ಮೆಚ್ಚುಗೆ
Pic credit: PTI
ಭಾರತದಲ್ಲಿ ಉತ್ಪಾದನೆ ಮತ್ತು ಚಿಪ್ ಡಿಸೈನಿಂಗ್ ಮಾಡಲು ನಮಗೆ ನರೇಂದ್ರ ಮೋದಿ ಇನ್ನಷ್ಟು ಉತ್ತೇಜನ ನೀಡಿದರು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದರು.
Pic credit: PTI
ಯಂತ್ರ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಜೆನ್ಸ್ ತಂತ್ರಜ್ಞಾನ ದೇಶದ ಜನರಿಗೆ ಅನುಕೂಲ ಆಗಬೇಕು ಎನ್ನುವುದು ಮೋದಿ ಅವರ ಇಂಗಿತ ಎಂದು ಗೂಗಲ್ ಸಿಇಒ ತಿಳಿಸಿದರು.
ಸುಂದರ್ ಪಿಚೈ
Pic credit: PTI
ನರೇಂದ್ರ ಮೋದಿ ಅದ್ಭುತ ವಿದ್ಯಾರ್ಥಿ. ಪ್ರತೀ ಬಾರಿ ಅವರನ್ನು ಭೇಟಿಯಾದಾಗೆಲ್ಲಾ ತಂತ್ರಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ತವಕಿಸುತ್ತಾರೆ ಎಂದು ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹೇಳಿದರು.
Pic credit: PTI
ಎಐ ಹೊಸ ಉದ್ಯಮ. ಭಾರತದ ಜೊತೆ ಗಾಢ ಹೊಂದಾಣಿಕೆ ಬಯಸುತ್ತೇನೆ. ಭಾರತದ ಹಲವು ಕಂಪನಿಗಳು ಮತ್ತು ಐಐಟಿಗಳ ಜೊತೆ ನಾವು ಜೊತೆಗಾರಿಕೆ ಹೊಂದುತ್ತಿದ್ದೇವೆ ಎಂದು ಹುವಾಂಗ್ ಮಾಹಿತಿ ನೀಡಿದರು.