ಬಿಲ್ ಗೇಟ್ಸ್ ಮಾಜಿ ಪತ್ನಿ ಮೆಲಿಂಡಾಗೆ 'ಸೆಕ್ಸಿಸಂ' ಕಿರಿಕಿರಿ
18 Sep 2024
Pic: Getty images
Vijayasarathy SN
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಜೊತೆ 25ಕ್ಕೂ ಹೆಚ್ಚು ವರ್ಷ ಸಂಸಾರ ಮಾಡಿ ಇತ್ತೀಚೆಗೆ ಡಿವೋರ್ಸ್ ಪಡೆದವರು ಮೆಲಿಂಡಾ ಗೇಟ್ಸ್. ಸ್ವತಂತ್ರವಾಗಿರುವುದು ಸೂಕ್ತ ಎನ್ನುವುದು ಬಿಟ್ಟರೆ ಈಕೆ ಬೇರ್ಪಡಲು ಬೇರೆ ಕಾರಣ ಕೊಟ್ಟಿಲ್ಲ.
Pic: Getty images
ಮೆಲಿಂಡಾ ಗೇಟ್ಸ್ ತಮ್ಮ ಸಂಪತ್ತನ್ನು ಸಮಾಜಸೇವೆ ಇತ್ಯಾದಿ ದಾನಕಾರ್ಯಗಳಿಗೆ ಬಳಸುತ್ತಿದ್ದಾರೆ. ಬಿಲ್ ಗೇಟ್ಸ್ ಕೂಡ ಫಿಲಾಂಟ್ರೋಪಿ ಕಾರ್ಯ ನಡೆಸುತ್ತಾರೆ. ಇಬ್ಬರೂ ಸೇರಿ ಮೆಲಿಂಡಾ ಬಿಲ್ ಗೇಟ್ಸ್ ಫೌಂಡೇಶನ್ ಮೂಲಕ ಸಮಾಜಸೇವೆ ಮಾಡುತ್ತಿದ್ದರು.
Pic: Getty images
ಈಗ ಮೆಲಿಂಡಾ ತಮ್ಮದೇ ಪ್ರತ್ಯೇಕ ಟ್ರಸ್ಟ್ ಸ್ಥಾಪಿಸಿ ಸ್ವತಂತ್ರವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಮಧ್ಯೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮೆಲಿಂಡಾ ಅವರು ‘ಸೆಕ್ಸಿಸಂ’ ವರ್ತನೆಯಿಂದ ನೊಂದಿರುವುದಾಗಿ ಹೇಳಿದ್ದಾರೆ.
Pic: Getty images
ಸೆಕ್ಸಿಸಂ ಎಂದರೆ ಒಂದು ಲಿಂಗ ವರ್ಗದ ಬಗ್ಗೆ ಪೂರ್ವಗ್ರಹ ನಿಲುವು ಅಥವಾ ಭಾವನೆ ಹೊಂದಿರುವುದು ಎಂದರ್ಥ. ಹೆಣ್ಣೆಂದರೆ ಅಡುಗೆ ಮನೆಗೆ ಲಾಯಕ್ಕು ಎಂದು ಹಿಂದೆಲ್ಲಾ ಭಾವಿಸಿದ್ದರಲ್ಲಾ ಅದು ಸೆಕ್ಸಿಸಂ.
Pic: Getty images
ಬಿಲ್ ಗೇಟ್ಸ್ ಜೊತೆ ಸರಿಸಮಾನವಾಗಿ ನಾನು 25 ವರ್ಷ ಸಮಾಜಸೇವೆ ಮಾಡಿದ್ದೇನೆ. ಆದರೂ ಕೂಡ ಮೀಟಿಂಗ್ಗೆ ಹೋದಾಗ ನನಗೇನೂ ಗೊತ್ತೇ ಇಲ್ಲ ಎನ್ನುವಂತೆ ಜನರು ನೋಡುತ್ತಾರೆ ಎಂಬುದು ಮೆಲಿಂಡಾ ಆರೋಪ.
Pic: Getty images
‘ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಟ್ಟಿ ಹೆಸರು ಸಂಪಾದಿಸಿರುವುದು ಹೌದು. ಆದರೆ, ಫಿಲಾಂಟ್ರೋಫಿ ಕಾರ್ಯದಲ್ಲಿ ನಾನೇನೂ ಕಡಿಮೆ ಇಲ್ಲ. ಆದರೂ ಜನರು ನನ್ನನ್ನು ನಿರ್ಲಕ್ಷಿಸುತ್ತಿದ್ದರು. ಅದುವೇ ಸೆಕ್ಸಿಸಂ’ ಎನ್ನುತ್ತಾರೆ ಮೆಲಿಂಡಾ.
Pic: Getty images
60 ವರ್ಷದ ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರು ಮಾಜಿ ಪತಿಯ ನೆರಳಿಲ್ಲದೇ ಸ್ವತಂತ್ರವಾಗಿ ಸಮಾಜಸೇವೆ ಮಾಡುತ್ತಿದ್ದಾರೆ. ತಮ್ಮ ಸಂಪನ್ಮೂಲದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ಮಟ್ಟಿಗೆ ಸಮಾಧಾನವಾಗಿದ್ದಾರೆ ಮೆಲಿಂಡಾ.