By: Vijayasarathy SN

ಪ್ರಧಾನಿ ಮೋದಿಯಿಂದ ಶ್ಲಾಘನೆಗೊಳಗಾದ ಬಾಲಾಜಿ ಶ್ರೀನಿವಾಸನ್ ಯಾರು?

27 Nov 2023

ಬಾಲಾಜಿ ಶ್ರೀನಿವಾಸನ್ ಅವರು ತಮ್ಮ ಸುದೀರ್ಘ ಎಕ್ಸ್ ಪೋಸ್ಟ್​ನಲ್ಲಿ ಭಾರತ ಮತ್ತು ಭಾರತೀಯರ ಉದ್ಯಮಶೀಲತೆಯ ಸಾಮರ್ಥ್ಯವನ್ನು ಪ್ರಶಂಸಿಸಿದ್ದರು.

ಬಾಲಾಜಿ X ಪೋಸ್ಟ್

(Pic credit: Google)

ಬಾಲಾಜಿ ಅವರ ಈ ಪೋಸ್ಟ್​ಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಬಗ್ಗೆ ತಮಗಿರುವ ಭರವಸೆ ತನಗಿಷ್ಟವಾಯಿತು ಎಂದಿದ್ದಾರೆ.

ಪ್ರಧಾನಿ ಸ್ಪಂದನೆ

(Pic credit: Google)

ಬಾಲಾಜಿ ಎಸ್ ಶ್ರೀನಿವಾಸನ್ ಅಮೆರಿಕದಲ್ಲಿರುವ ಭಾರತ ಮೂಲದ ಸಮುದಾಯದವರು. ಸದ್ಯ ಏಂಜೆಲ್ ಇನ್ವೆಸ್ಟರ್ ಹಾಗು ಆಂಟ್ರಪ್ರೆನ್ಯೂರ್ ಆಗಿದ್ದಾರೆ.

ಬಾಲಾಜಿ ಯಾರು?

(Pic credit: Google)

ಬಾಲಾಜಿ ಶ್ರೀನಿವಾಸನ್ ಸ್ವತಃ ಹಲವು ಉದ್ದಿಮೆಗಳನ್ನು ಸ್ಥಾಪಿಸಿದವರು. ಕ್ರಿಪ್ಟೋಕರೆನ್ಸಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ.

ಅನುಭವಸ್ಥ ವ್ಯಕ್ತಿ

(Pic credit: Google)

ಕ್ರಿಪ್ಟೋ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್ ಕಾಯಿನ್​ಬೇಸ್, ಜಿನೋಮಿಕ್ಸ್ ಸ್ಟಾರ್ಟಪ್ ಕೌನ್ಸಿಲ್​ನಲ್ಲಿ ಸಿಟಿಒ ಆಗಿ ಕೆಲಸ ಮಾಡಿದ್ದವರು ಬಾಲಾಜಿ.

ತಾಂತ್ರಿಕ ನಿಪುಣ

(Pic credit: Google)

ಅರ್ನ್ ಡಾಟ್ ಕಾಮ್, ಕೌನ್ಸಿಲ್ (Counsyl), ಟೆಲಿಪೋರ್ಟ್, ಕಾಯಿನ್ ಸೆಂಟರ್ ಮೊದಲಾದ ಸ್ಟಾರ್ಟಪ್​ಗಳನ್ನು ಹುಟ್ಟುಹಾಕಿದವರು ಅವರು.

ಹಲವು ಸ್ಟಾರ್ಟಪ್ ಸ್ಥಾಪಕ

(Pic credit: Google)

ದಿ ನೆಟ್ವರ್ಕ್ ಸ್ಟೇಟ್ ಎಂಬ ಬೆಸ್ಟ್ ಸೆಲ್ಲರ್ ಪುಸ್ತಕ ಬರೆದಿರುವ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್​ನಲ್ಲಿ ಎಂಎಸ್ ಮಾಡಿದ್ದಾರೆ.

ನೆಟ್ವರ್ಕ್ ಸ್ಟೇಟ್

(Pic credit: Google)

ಭಾರತದ ಟ್ವಿಟ್ಟರ್ ಎನಿಸಿದ್ದ ಕೂ ಎಂಬ ಸೋಷಿಯಲ್ ಮೀಡಿಯಾ ಸಂಸ್ಥೆಯಲ್ಲೂ ಬಾಲಾಜಿ ಶ್ರೀನಿವಾಸನ್ ಹೂಡಿಕೆ ಮಾಡಿದ್ದರು.

ಬಾಲಾಜಿ ಕೂ

(Pic credit: Google)