ಸಿಂಘಾನಿಯಾ ಕುಟುಂಬದ ಹಾದಿರಂಪ ಬೀದಿರಂಪ
24 Nov 2023
By: Vijayasarathy SN
ರೇಮಂಡ್ ಸಂಸ್ಥೆಯ ಮಾಲೀಕ ಗೌತಮ್ ಸಿಂಘಾನಿಯಾ ಅವರ ಕುಟುಂಬ ಕಲಹ ಎಲ್ಲರ ಬಾಯಿಗೆ ಸಿಲುಕಿದೆ. ಪತ್ನಿಯ ಮೇಲೆ ಹಲ್ಲೆ ಎಸಗಿದ ಆರೋಪ ಅವರ ಮೇಲಿದೆ.
ಕುಟುಂಬ ಕಲಹ
(Pic credit: Google)
ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಅವರ 32 ವರ್ಷದ ದಾಂಪತ್ಯ ಅಂತ್ಯಗೊಂಡಿದೆ. ನವಾಜ್ರಿಂದ ದೂರವಾಗಿರುವುದಾಗಿ ಗೌತಮ್ ಹೇಳಿದ್ದಾರೆ.
ಪತ್ನಿ ವಿರಸ
(Pic credit: Google)
2023ರ ಸೆ. 10ರಂದು ಗೌತಮ್ ಸಿಂಘಾನಿಯಾ ಜನ್ಮದಿನ ಕಾರ್ಯಕ್ರಮದ ವೇಳೆ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ಎಸಗಿದ್ದರೆನ್ನಲಾಗಿದೆ.
ಹಲ್ಲೆ ಆರೋಪ
(Pic credit: Google)
ಅಂಬಾನಿ ಕುಟುಂಬದವರು ಮಧ್ಯಪ್ರವೇಶಿಸಿದ್ದರಿಂದ ಪೊಲೀಸರು ಗೌತಮ್ ಸಿಂಘಾನಿಯಾ ಮೇಲೆ ಪ್ರಕರಣ ದಾಖಲಿಸಲು ಸಾಧ್ಯವಾಯಿತು.
ಅಂಬಾನಿ ಎಂಟ್ರಿ
(Pic credit: Google)
ಫಿಟ್ನೆಸ್ ಟ್ರೈನರ್ ಆಗಿರುವ ನವಾಜ್ ಮೋದಿ ಜೀವನಾಂಶಕ್ಕಾಗಿ ಪತಿಯ ಆಸ್ತಿಯಲ್ಲಿ ಶೇ. 75ರಷ್ಟು ಪಾಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಜೀವನಾಂಶ
(Pic credit: Google)
ಗೌತಮ್ ಸಿಂಘಾನಿಯಾ ವೈಯಕ್ತಿಕ ಬದುಕು ವಿವಾದಕ್ಕೆ ಒಳಗಾಗಿದ್ದು ಇದೇ ಮೊದಲಲ್ಲ. ಅವರ ತಂದೆ ಜೊತೆಗಿನ ಆಸ್ತಿ ಹಂಚಿಕೆ ವಿಚಾರ ದೊಡ್ಡ ವಿವಾದವಾಗಿದೆ.
ಇದೇ ಮೊದಲಲ್ಲ
(Pic credit: Google)
ಗೌತಮ್ ಅವರ ತಂದೆ ವಿಜಯಪತ್ ಸಿಂಘಾನಿಯಾ ರೇಮಂಡ್ ಕಂಪನಿಯ ಸಂಸ್ಥಾಪಕರು. ತಮ್ಮ ಆಸ್ತಿ, ಅಧಿಕಾರ ಎಲ್ಲವನ್ನೂ 2015ರಲ್ಲಿ ಮಗನಿಗೆ ಬಿಟ್ಟುಕೊಟ್ಟರು.
ಅಪ್ಪನ ಆಸ್ತಿ
(Pic credit: Google)
ಅಧಿಕಾರ ಸಿಗುತ್ತಿದ್ದಂತೆಯೇ ಗೌತಮ್ ಸಿಂಘಾನಿಯಾ ತಮ್ಮ ತಂದೆಯನ್ನು ಕಂಪನಿಯಿಂದ, ಮನೆಯಿಂದ ಹೊರಗೆ ಕಳುಹಿಸಿದರೆನ್ನಲಾಗಿದೆ.
ಅಪ್ಪನಿಗೆ ಮೋಸ
(Pic credit: Google)
ಒಂದು ಕಾಲದಲ್ಲಿ ಭಾರೀ ಶ್ರೀಮಂತ ಎನಿಸಿದ್ದ ವಿಜಯ್ಪತ್ ಸಿಂಘಾನಿಯಾ ಇವತ್ತು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಮಗನಿಗೆ ಎಲ್ಲಾ ಆಸ್ತಿ ಕೊಟ್ಟು ಪಶ್ಚಾತಾಪ ಪಡುತ್ತಿದ್ದಾರೆ.
ಸಾಮಾನ್ಯ ಬದುಕು
(Pic credit: Google)
Next: ಓದಿ ಕಲಿತದ್ದು ಏನಿಲ್ಲ; ಹಾಗಾದ್ರೆ ಪಿಂಕಿ ಕೋಲ್ ಸಿಇಒ ಆಗಿದ್ದು ಹೇಗೆ?
ಇನ್ನಷ್ಟು ಸ್ಟೋರಿ