ಓದಿ ಕಲಿತಿದ್ದು ಏನಿಲ್ಲ; ಹಾಗಾದ್ರೆ ಪಿಂಕಿ ಕೋಲ್ ಸಿಇಒ ಆಗಿದ್ದು ಹೇಗೆ?
23 Nov 2023
By: Vijayasarathy SN
ಓದೇ ಎಲ್ಲ ಅಲ್ಲ
ಶಾಲೆ, ಟ್ಯೂಷನ್, ಕೋಚಿಂಗ್ ಹೋಗಿ, ರಾತ್ರಿ ಹಗಲೂ ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಬರುವವರಿದ್ದಾರೆ. ಅವರಲ್ಲಿ ವೃತ್ತಿಜೀವನದಲ್ಲಿ ಬೆಳೆಯುವವರೆಷ್ಟು?
(Pic credit: Google)
ಪಿಂಕಿ ಪಿಂಕಿ
ಸ್ಲಟ್ಟಿ ವೆಗನ್ (Slutty Vegan) ಎಂಬ ಬರ್ಗರ್ ಕಂಪನಿಯ ಸಿಇಒ 35 ವರ್ಷದ ಪಿಂಕಿ ಕೋಲ್ ಅವರ ಶಾಲೆ, ಕಾಲೇಜು ಅನುಭವ ಬಹಳ ಕುತೂಹಲ ಮೂಡಿಸುತ್ತದೆ.
(Pic credit: Google)
ಓದಿದ್ದು ನೆನಪಿಲ್ಲ
ಶಾಲೆ ಮತ್ತು ಕಾಲೇಜಿನಲ್ಲಿ ಏನು ಓದಿದ್ದೆನೋ ಅದ್ಯಾವುದೂ ನೆನಪೇ ಇಲ್ಲ ಎಂದು ಪಿಂಕಿ ಕೋಲ್ ಹೇಳುತ್ತಾರೆ. ಹಾಗಾದರೆ, ಅವರು ದೊಡ್ಡ ಮಟ್ಟಕ್ಕೆ ಬೆಳೆದದ್ದು ಹೇಗೆ?
(Pic credit: Google)
ಸಂಪರ್ಕ ಕೊಂಡಿ
ಕಾಲೇಜಿನಲ್ಲಿ ನಾನು ಕಲಿತಿದ್ದು ಯಾವುದೂ ನೆನಪಿಲ್ಲ. ಆದರೆ, ಕಾಲೇಜಿನಲ್ಲಿ ಗಳಿಸಿದ್ದ ಸಂಪರ್ಕಗಳು ಉಳಿದುಕೊಂಡಿವೆ ಎನ್ನುತ್ತಾರೆ ಪಿಂಕಿ ಕೋಲ್.
(Pic credit: Google)
ಓದಿದ್ದು ಎಲ್ಲಿ?
ಪಿಂಕಿ ಕೋಲ್ ಅಮೆರಿಕದ ಕ್ಲಾರ್ಕ್ ಅಟ್ಲಾಂಟ ಯೂನಿವರ್ಸಿಟಿಯಲ್ಲಿ ಮಾಸ್ ಮೀಡಿಯಾದಲ್ಲಿ ಪದವಿ ಪಡೆದಿದ್ದಾರೆ. ಅವರ ಸಹಪಾಠಿಗಳನೇಕರು ಸಿಇಒಗಳಾಗಿದ್ದಾರೆ.
(Pic credit: Google)
ಬಿಸಿನೆಸ್ಗೆ ಇದು ಬೇಕು
ಪಿಂಕಿ ಕೋಲ್ಗೆ ತಮ್ಮ ಕಾಲೇಜು ಅನುಭವ ಅನನ್ಯ ಎನಿಸಲು ಕಾರಣ ಓದು ಅಲ್ಲ, ಬದಲಾಗಿ ಅಲ್ಲಿ ನಿರ್ಮಿಸಿದ್ದ ಸಂಪರ್ಕಗಳಂತೆ. ಅವರ ಬಿಸಿನೆಸ್ ಬೆಳೆಯಲು ಅದು ಕಾರಣ.
(Pic credit: Google)
ಪಿಂಕಿ ಟಿಪ್ಸ್
ನೀವು ಶಾಲೆ ಅಥವಾ ಕಾಲೇಜಿಗೆ ಸಂಬಂಧಗಳನ್ನು ಬೆಳೆಸಲು ಹೋಗಬೇಕು. ನಿಮ್ಮ ವೃತ್ತಿಜೀವನಕ್ಕೆ ಈ ಸಂಬಂಧಗಳೇ ಸಹಾಯಕ್ಕೆ ಬರುವುದು ಎನ್ನುತ್ತಾರೆ ಪಿಂಕಿ.
(Pic credit: Google)
ನೆಟ್ವರ್ಕ್ ಮುಖ್ಯ
ಪಿಂಕಿ ಅವರು ಅವಕಾಶ ಸಿಕ್ಕಾಗೆಲ್ಲಾ ಹಳೆಯ ಸಹಪಾಠಿ ಅಥವಾ ಹಳೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ನೆಟ್ವರ್ಕ್ ಬೆಳೆಸಿಕೊಳ್ಳುತ್ತಾ ಹೋಗುತ್ತಾರಂತೆ.
(Pic credit: Google)
Next: ಹಂದಿ ಕಡಿಯುವ ಸ್ಕ್ಯಾಮ್ಗೆ ಬಲಿಯಾಗಬೇಡಿ; ಟಿಪ್ಸ್
ಇನ್ನಷ್ಟು ನೋಡಿ