ಲಕ್ಷದ್ವೀಪ ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತೆ? ಹೀಗೊಂದು ಗೈಡ್

By: Vijayasarathy SN

08 Jan 2024

ಮೋದಿ ಹವಾ

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಲಕ್ಷದ್ವೀಪದ ಬಗ್ಗೆ ಭಾರತೀಯರ ಕುತೂಹಲ ಬಹಳ ಹೆಚ್ಚಾಗಿದೆ. ಇಂಟರ್ನೆಟ್​ನಲ್ಲಿ ಸರ್ಚ್ ಹೆಚ್ಚುತ್ತಿದೆ.

(Pic credit: Google)

ಲಕ್ಷದ್ವೀಪ ಎಲ್ಲಿದೆ?

ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕೇರಳದ ಕೊಚ್ಚಿ ನಗರದಿಂದ ಸುಮಾರು 400 ಕಿಮೀ ಆಚೆ ಇದೆ. ಸ್ವಚ್ಛ ನೀರು, ಪರಿಸರ, ಸುಂದರ ಬೀಚ್​ಗಳಿವೆ.

(Pic credit: Google)

ಲಕ್ಷದ್ವೀಪ ಹೆಸರು ಯಾಕೆ?

ಲಕ್ಷದ್ವೀಪ ಎಂದರೆ ಲಕ್ಷ ದ್ವೀಪಗಳ ಸಮೂಹ. ಸದ್ಯ 36 ದ್ವೀಪಗಳು ಇಲ್ಲಿವೆ. ಮಾಲ್ಡೀವ್ಸ್​ನವು ಕೂಡ ಈ ದ್ವೀಪ ಸಮೂಹಕ್ಕೆ ಸೇರಿದ್ದಾಗಿವೆ.

(Pic credit: Google)

ಲಕ್ಷದ್ವೀಪಕ್ಕೆ ಹೋಗೋದು?

ಲಕ್ಷದ್ವೀಪದ ಅಗಟ್ಟಿ ದ್ವೀಪದಲ್ಲಿ ಏರ್​ಪೋರ್ಟ್ ಇದೆಯಾದರೂ ಅಲ್ಲಿಗೆ ಕೇರಳದ ಕೊಚ್ಚಿ ನಗರದಿಂದ ಮಾತ್ರವೇ ಫ್ಲೈಟ್ ಇರುವುದು.

(Pic credit: Google)

ಹಡಗು ಇವೆ

ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ಹಡಗುಗಳ ಮೂಲಕವೂ ಹೋಗಬಹುದು. ಇದಕ್ಕೆ 14ರಿಂದ 20 ಕಿಮೀ ಪ್ರಯಾಣದ ಅವಧಿ ಇರುತ್ತದೆ.

(Pic credit: Google)

ಪ್ರಯಾಣ ದರ?

ಫ್ಲೈಟ್ ಟಿಕೆಟ್​ಗೆ ಒಬ್ಬರಿಗೆ ಸುಮಾರು 5-6 ಸಾವಿರ ರೂ ಆಗಬಹುದು. ಹಡಗಿನಲ್ಲಾದರೆ ಸುಮಾರು 2,500 ರೂ ಆಗಬಹುದು.

(Pic credit: Google)

ಮಂಗಳೂರಿಂದಲೂ ಹೋಗಿ

ಲಕ್ಷದ್ವೀಪಕ್ಕೆ ಕೊಚ್ಚಿಗಿಂತ ಮಂಗಳೂರು ಹತ್ತಿರ. ಸದ್ಯದಲ್ಲೇ ಮಂಗಳೂರಿನಿಂದ ಪ್ರಯಾಣಿಕ ಹಡುಗುಗಳ ಸೇವೆ ಪುನಾರಂಭವಾಗಲಿದೆ.

(Pic credit: Google)

ಜಲಕ್ರೀಡೆಗಳು...

ಲಕ್ಷದ್ವೀಪದಲ್ಲಿ ಸ್ನಾರ್ಕೆಲಿಂಗ್, ಸ್ಕೂಬಾ ಡೈವಿಂಗ್, ಕಯಾಕಿಂಗ್ ಇತ್ಯಾದಿ ಸಾಕಷ್ಟು ವೈವಿಧ್ಯಮಯ ಜಲಕ್ರೀಡೆ ಮತ್ತು ಸಾಹಸಗಳಿಗೆ ಅವಕಾಶ ಇದೆ.

(Pic credit: Google)

ರಮ್ಯ ದ್ವೀಪಗಳು

ಇಲ್ಲಿರುವ ಪ್ರಮುಖ ದ್ವೀಪಗಳಲ್ಲಿ ಅಗಟ್ಟಿ, ಬಂಗಾರಂ, ಮಿನಿಕೋಯ್, ತಿಣ್ಣಕರ, ಕವರಟ್ಟಿ, ಕಾಡಮಟ್ ಮೊದಲಾದವಿವೆ.

(Pic credit: Google)

ಸ್ಥಳೀಯ ಬೋಟ್​ಗಳಿವೆ

ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೋಗಲು ಬೋಟ್, ಹಡಗುಗಳ ಸೇವೆ ಇರುತ್ತದೆ. ಇಂಟರ್ನೆಟ್ ಕನೆಕ್ಟಿವಿಟಿ ತುಸು ಕಡಿಮೆ ಇದೆ.

(Pic credit: Google)

ಪ್ಯಾಕೇಜ್ ಟೂರ್

ಲಕ್ಷದ್ವೀಪಕ್ಕೆ ಪ್ಯಾಕೇಜ್ ಟೂರ್​ಗಳಿವೆ. ಇವುಗಳ ಬೆಲೆ 22,000 ರೂನಿಂದ ಆರಂಭವಾಗುತ್ತದೆ. ಆದರೆ, ಲಕ್ಷದ್ವೀಪದವರೆಗೆ ನಾವೇ ಪ್ರಯಾಣಿಸಬೇಕು.

(Pic credit: Google)