ಪಿಂಚಣಿದಾರರೇ ಗಮನಿಸಿ..! ಗಡುವಿನೊಳಗೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಿ

By: Vijayasarathy SN

28 Nov 2023

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರಿಯಲ್ಲಿದ್ದು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು.

ಲೈಫ್ ಸರ್ಟಿಫಿಕೇಟ್

(Pic credit: Google)

ಪ್ರತಿಯೊಬ್ಬ ಪಿಂಚಣಿದಾರ ಕೂಡ ಪ್ರತೀ ವರ್ಷ ತಪ್ಪದೇ ಲೈಫ್ ಸರ್ಟಿಫಿಕೇಟ್ ಅಥವಾ ಜೀವನ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.

ಸಲ್ಲಿಕೆ ಕಡ್ಡಾಯ

(Pic credit: Google)

ಪಿಂಚಣಿದಾರ ಜೀವಂತ ಇದ್ದಾರಾ ಎಂದು ಖಾತ್ರಿಪಡಿಸಲು ಲೈಫ್ ಸರ್ಟಿಫಿಕೇಟ್ ಪಡೆಯಲಾಗುತ್ತದೆ. ಪ್ರತೀ ವರ್ಷ ಈ ದಾಖಲೆ ಅಪ್​ಡೇಟ್ ಮಾಡಬೇಕು.

ಜೀವಂತಕ್ಕೆ ಸಾಕ್ಷ್ಯ

(Pic credit: Google)

ಈ ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ 30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇವತ್ತು ನ. 28, ಇನ್ನು, ಎರಡನೇ ದಿನ ಬಾಕಿ ಇದೆ. ತ್ವರಿ ಮಾಡಿ..!

ಎರಡೇ ದಿನ..!

(Pic credit: Google)

ಗಡುವಿನೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದೇ ಹೋದರೆ ಪಿಂಚಣಿ ಬರುವುದು ನಿಂತು ಹೋಗುತ್ತದೆ. ನೀವು ಸರ್ಟಿಫಿಕೇಟ್ ಕೊಡುವವರೆಗೂ ಪೆನ್ಷನ್ ಸಿಕ್ಕೋದಿಲ್ಲ.

ಸಲ್ಲಿಸದಿದ್ದರೆ ಏನಾಗುತ್ತೆ?

(Pic credit: Google)

ಒಂದು ವೇಳೆ, ನ. 30ರ ಬಳಿಕ ಪ್ರಮಾಣಪತ್ರ ಸಲ್ಲಿಸಿದರೆ ಡಿಸೆಂಬರ್​ನ ಪಿಂಚಣಿ ಸಿಕ್ಕೋದಿಲ್ಲ. ಆದರೆ, ಮುಂದಿನ ಪೆನ್ಷನ್ ಪಾವತಿಯಲ್ಲಿ ಹಿಂದಿನ ಬಾಕಿ ಹಣ ಸೇರಿಸಿ ಬರುತ್ತದೆ.

ಅರಿಯರ್ಸ್ ಸಿಗುತ್ತೆ

(Pic credit: Google)

ಮೂರು ವರ್ಷ ಲೈಫ್ ಸರ್ಟಿಫಿಕೇಟ್ ಸಲ್ಲಿಸದೇ ಹೋದರೆ ಪೆನ್ಷನ್ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಅದಕ್ಕೆ ಅರ್ಜಿ ಸಲ್ಲಿಸುವ ಪ್ರತ್ಯೇಕ ಪ್ರಕ್ರಿಯೆ ಇರುತ್ತದೆ.

ಪ್ರಾಧಿಕಾರದ ಅನುಮತಿ

(Pic credit: Google)

ಪಿಂಚಣಿದಾರ ತಾನು ಪೆನ್ಷನ್ ಹಣ ಪಡೆಯುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ಗೆ ಹೋಗಿ ಅಲ್ಲಿ ಜೀವ ಪ್ರಮಾಣಪತ್ರ ಸಲ್ಲಿಸಬಹುದು. ಆನ್​ಲೈನ್​ನಲ್ಲೂ ಅವಕಾಶ ಇದೆ.

ಎಲ್ಲಿ ಸಲ್ಲಿಸುವುದು?

(Pic credit: Google)