ಮೇ 31ರೊಳಗೆ ಆಧಾರ್, ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತೆ?
29 May 2024
ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಆಧಾರ್ಗೆ ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಇದೆ. ಹಲವು ಡೆಡ್ಲೈನ್ ಆಗಿ ಹೋಗಿವೆ.
ಇನ್ನೂ ಲಿಂಕ್ ಮಾಡಿಲ್ಲವಾ?
(Pic credit: Google)
ಆಧಾರ್ಗೆ ಲಿಂಕ್ ಆಗದೇ ಇರುವ ಪ್ಯಾನ್ ನಂಬರ್ 2024 ಮೇ 31ರ ಬಳಿಕ ಇನಾಪರೇಟಿವ್ ಆಗುತ್ತದೆ. ಅಂದರೆ ಅದು ನಿಷ್ಕ್ರಿಯ ಗೊಂಡು ಉಪಯೋಗಕ್ಕೆ ಬಾರದಂತಾಗುತ್ತದೆ.
ಪ್ಯಾನ್ ನಿಷ್ಕ್ರಿಯ
(Pic credit: Google)
ಇನಾಪರೇಟಿವ್ ಆಗಿರುವ ಪ್ಯಾನ್ ಇದ್ದೂ ಇಲ್ಲದಂತೆಯೇ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206ಎಎ ಮತ್ತು 206ಸಿಸಿ ಪ್ರಕಾರ ಪ್ಯಾನ್ ಇಲ್ಲದೆ ನಡೆಸುವ ವ್ಯವಹಾರಕ್ಕೆ ಹೆಚ್ಚು ತೆರಿಗೆ ಇರುತ್ತದೆ.
ಇನಾಪರೇಟಿವ್ ಪಾನ್
(Pic credit: Google)
ಪ್ಯಾನ್ ಇಲ್ಲದೇ ನಡೆಸುವ ವ್ಯವಹಾರದಿಂದ ಬಂದ ಆದಾಯಕ್ಕೆ ಶೇ. 20ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ನಿಮಗೆ ಒಂದು ಲಕ್ಷ ರೂ ಆದಾಯ ಬಂದರೆ 20,000 ರೂ ಟ್ಯಾಕ್ಸ್ ಇರುತ್ತದೆ.
ಶೇ. 20 ಟಿಡಿಎಸ್
(Pic credit: Google)
ಇಷ್ಟು ಪ್ರಮಾಣದಲ್ಲಿ ಟಿಡಿಎಸ್ ಕಡಿತ ಆಗುವುದನ್ನು ತಪ್ಪಿಸಬೇಕೆಂದರೆ ನಿಮ್ಮ ಪ್ಯಾನ್ ನಂಬರ್ಗೆ ಆಧಾರ್ ಅನ್ನು ಲಿಂಕ್ ಮಾಡಬೇಕು. ಮೇ 31ರೊಳಗಡೆ ಮಾಡಬೇಕು.
ಮೇ 31ಕ್ಕೆ ಗಡುವು
(Pic credit: Google)
2017ರ ಜುಲೈ 1ರಿಂದ ವಿತರಿಸಲಾದ ಎಲ್ಲಾ ಪ್ಯಾನ್ ನಂಬರ್ಗೂ ಆಧಾರ್ ಲಿಂಕ್ ಆಗಿರುತ್ತದೆ. ಪ್ಯಾನ್ ಮಾಡಿಸುವಾಗ ಆಧಾರ್ ದಾಖಲೆ ಕೊಟ್ಟಿರುವುದರಿಂದ ಲಿಂಕ್ ಆಗಿರುತ್ತದೆ.
ಇವರಿಗೆ ಅವಶ್ಯಕವಿಲ್ಲ
(Pic credit: Google)
2017ರ ಜೂನ್ವರೆಗೆ ಮಾಡಿಸಲಾದ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಆಗಿರುವುದಿಲ್ಲ. ಅಂಥವರು ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯ.
ಇವರು ಮಾಡಬೇಕು
(Pic credit: Google)
ಒಂದೇ ಆಧಾರ್ ಅನ್ನು ವಿವಿಧ ಪ್ಯಾನ್ ಕಾರ್ಡ್ಗೆ ದಾಖಲೆಯಾಗಿ ಕೊಟ್ಟಿದ್ದು ಬೆಳಕಿಗೆ ಬಂದಿದ್ದರಿಂದ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಐಟಿ ಇಲಾಖೆ ಮುಂದಾಗಿದೆ.
ಯಾಕೆ ಲಿಂಕ್ ಮಾಡಬೇಕು?
(Pic credit: Google)
ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್ಸೈಟ್ಗೆ ಹೋದರೆ ಅಲ್ಲಿ ಮುಖ್ಯಪುಟದಲ್ಲಿ ಎಡಬದಿಯಲ್ಲಿ ಲಿಂಕ್ ಆಧಾರ್ ಎಂಬ ಲಿಂಕ್ ಇರುತ್ತದೆ. ಅಲ್ಲಿ ಆಧಾರ್ ಮತ್ತು ಪಾನ್ ಲಿಂಕ್ ಮಾಡಬಹುದು. ನಿರ್ದಿಷ್ಟ ಶುಲ್ಕ ಪಾವತಿಸಬೇಕು.