By: Vijayasarathy SN

ಕಡಿಮೆ ಬಡ್ಡಿಗೆ ಸಾಲ ಪಡೆಯುವುದು ಹೇಗೆ?

25 April 2024

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಲ ಮಾಡಬೇಕಾಗುತ್ತದೆ. ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಲು ಕೆಲ ಉಪಾಯಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಸಾಲಕ್ಕೆ ತಂತ್ರ

(Pic credit: Google)

ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು. 300ರಿಂದ 900ವರೆಗಿನ ಸ್ಕೋರ್​ನಲ್ಲಿ 750ಕ್ಕೂ ಹೆಚ್ಚು ಸ್ಕೋರ್ ಇರುವುದು ಉತ್ತಮ.

ಕ್ರೆಡಿಟ್ ಸ್ಕೋರ್

(Pic credit: Google)

ನಿಮ್ಮ ಹೆಚ್ಚಿನ ಆದಾಯದ ಹಣ ಸಾಲಕ್ಕೆ ಹೋಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಬ್ಯಾಂಕುಗಳು ನಿಮ್ಮ ಡೆಟ್ ಟು ಇನ್ಕಮ್ ಅನುಪಾತವನ್ನು ಗಮನಿಸುತ್ತವೆ.

ಆದಾಯ, ಸಾಲ

(Pic credit: Google)

ಆದಾಯ ಮತ್ತು ಸಾಲದ ನಡುವಿನ ಅನುಪಾತ ಶೇ. 35ಕ್ಕಿಂತ ಕಡಿಮೆ ಇರಬೇಕು. ಅಂದರೆ ನಿಮ್ಮ ಆದಾಯದಲ್ಲಿ ಎಷ್ಟು ಹಣ ಸಾಲಕ್ಕೆ ಹೋಗುತ್ತಿದೆ ಎಂಬುದು ಇದು.

ಅನುಪಾತ ಶೇ. 35

(Pic credit: Google)

ಒಂದು ಕ್ರೆಡಿಟ್ ಕಾರ್ಡ್​ಗೆ ನಿರ್ದಿಷ್ಟ ಕ್ರೆಡಿಟ್ ಮಿತಿ ನೀಡಲಾಗಿರುತ್ತದೆ. ಆ ಮಿತಿಯೊಳಗೆ ನೀವು ವೆಚ್ಚ ಮಾಡಬಹುದು. ಆ ಮಿತಿಯ ಶೇ. 30ಕ್ಕಿಂತ ಹೆಚ್ಚು ಹಣ ವ್ಯಯಿಸದಿರಿ.

ಕ್ರೆಡಿಟ್ ಕಾರ್ಡ್ ಬಳಕೆ

(Pic credit: Google)

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದು ಅದೆಲ್ಲದರ ಒಟ್ಟು ಕ್ರೆಡಿಟ್ ಮಿತಿ ಎಷ್ಟಿದೆ, ನಿಮ್ಮ ಶಾಪಿಂಗ್ ವೆಚ್ಚ ಶೇ. 30ರಷ್ಟರೊಳಗೆ ಇರುವಂತೆ ನೋಡಿಕೊಳ್ಳಿ.

ಶಾಪಿಂಗ್ ಮಿತಿ

(Pic credit: Google)

ನೀವು ಪರ್ಸನಲ್ ಲೋನ್ ಪಡೆಯುವುದಾದರೆ ಒಂದೇ ಬ್ಯಾಂಕ್ ಬದಲು ಬೇರೆ ಬೇರೆ ಬ್ಯಾಂಕುಗಳಲ್ಲಿ ಬಡ್ಡಿ ವಿಚಾರಿಸಿ. ಕಡಿಮೆ ಇರುವೆಡೆ ಸಾಲ ಮಾಡಿ.

ತುಲನೆ ನೋಡಿ

(Pic credit: Google)

ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಲ್ಲಿ, ಉತ್ತಮ ಸ್ಕೋರ್ ಇರುವವರ ಜೊತೆ ಜಂಟಿಯಾಗಿ ಸಾಲಕ್ಕೆ ಅರ್ಜಿ ಹಾಕಿರಿ. ಇದರಿಂದ ಕಡಿಮೆ ಬಡ್ಡಿಗೆ ಸಾಲ ಸಿಗಬಹುದು.

ಜಂಟಿ ಸಾಲ

(Pic credit: Google)

ಸಾಲ ಸಿಗುತ್ತೆಂದು ಸಾಲ ಮಾಡದಿರಿ. ನಿಮಗೆ ಎಷ್ಟು ಹಣದ ಅಗತ್ಯ ಇದೆಯೋ ಅಷ್ಟನ್ನೇ ಮಾತ್ರ ಸಾಲ ಪಡೆಯಿರಿ. ಅನವಶ್ಯಕವಾಗಿ ಬಡ್ಡಿ ಕಟ್ಟುವುದು ತಪ್ಪುತ್ತದೆ.

ಅಗತ್ಯದಷ್ಟು ಮಾತ್ರ

(Pic credit: Google)

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬಡ್ಡಿ ಹೆಚ್ಚಿರುತ್ತದೆ. ನಿಮ್ಮಲ್ಲಿ ಚಿನ್ನ ಬಳಕೆಯಾಗದೆ ಇದ್ದಲ್ಲಿ ಅದನ್ನು ಬಳಸಿ ಸಾಲ ಪಡೆಯಿರಿ. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.

ಗೋಲ್ಡ್ ಲೋನ್

(Pic credit: Google)