ನಮ್ಮ ಸಂಪಾದನೆಯಲ್ಲಿ ಎಷ್ಟು ಹಣ ಉಳಿಸಬೇಕು. ಅದರಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದು. ಆದರೂ ಶೇ 20ರಷ್ಟು ಆದಾಯವನ್ನು ಹೂಡಿಕೆಗೆ ಬಳಸಬಹುದು.
Pic: Getty images
ಒಂದು ವೇಳೆ ನಿಮಗೆ ಕೈಗೆ ಸಿಗುವ ಸಂಬಳ 25,000 ರೂ ಇದ್ದಲ್ಲಿ ಶೇ. 20 ಅಂದರೆ 5,000 ರೂ ಹಣವನ್ನು ನೀವು ನಿವೃತ್ತಿಯ ಪ್ಲಾನ್ಗೆ ಹೂಡಿಕೆ ಮಾಡಬಹುದು. ಯಾವುದಾದರೂ ಮ್ಯುಚುವಲ್ ಫಂಡ್ನಲ್ಲಿ ಎಸ್ಐಪಿ ಆರಂಭಿಸಿ.
Pic: Getty images
ಮ್ಯೂಚುವಲ್ ಫಂಡ್ಗಳು ಶೇ. 12ರಷ್ಟು ವಾರ್ಷಿಕ ರಿಟರ್ನ್ ನೀಡಬಹುದು ಎನ್ನುತ್ತಾರೆ. ಆದರೆ, ಶೇ. 10ರ ದರದಲ್ಲಿ ಹೂಡಿಕೆಗೆ ರಿಟರ್ನ್ ಸಿಗುತ್ತದೆ ಎಂದು ನಿರೀಕ್ಷಿಸುವುದು ಹೆಚ್ಚು ವಾಸ್ತವಿಕ. ಹೆಚ್ಚು ರಿಟರ್ನ್ ಸಿಕ್ಕರೆ ಅದೃಷ್ಟವೇ ಸರಿ.
Pic: Getty images
ಶೇ. 10ರ ದರವನ್ನೇ ನಿರೀಕ್ಷಿಸುತ್ತಾ ನೀವು ಮಾಸಿಕವಾಗಿ 5,000 ರೂ ಹಣವನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡಿದರೆ ಅದು 2 ಕೋಟಿ ರೂ ಆಗಲು 36 ವರ್ಷ ಬೇಕಾಗುತ್ತದೆ.
Pic: Getty images
ನೀವು ಇನ್ನೂ ಬೇಗನೇ ಎರಡು ಕೋಟಿ ರೂ ಕಾರ್ಪಸ್ ಸೃಷ್ಟಿಸಬೇಕಾದರೆ ಹೂಡಿಕೆ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ. ಹೋಗುತ್ತಾ ಹೋಗುತ್ತಾ ನಿಮ್ಮ ಆದಾಯ ಹೆಚ್ಚಿದಂತೆ ಹೂಡಿಕೆ ಮೊತ್ತ ಹೆಚ್ಚಿಸುತ್ತಾ ಹೋಗಬಹುದು.
Pic: Getty images
ಇದಕ್ಕೆ ನೀವು ಸ್ಟೆಪ್ ಅಪ್ ತಂತ್ರ ಮಾಡಬಹುದು. ವರ್ಷಕ್ಕೆ ನಿಮ್ಮ ಹೂಡಿಕೆ ಹಣವನ್ನು ಶೇ. 5ರಷ್ಟು ಹೆಚ್ಚಿಸಬಹುದು. ಈ ವರ್ಷ 5,000 ರೂ, ಮುಂದಿನ ವರ್ಷ 5,250 ರೂ ಹೀಗೆ ಎಸ್ಐಪಿ ಹೆಚ್ಚಿಸಬಹುದು.
Pic: Getty images
ಹೀಗೆ ಶೇ. 5ರಂತೆ ಹೂಡಿಕೆ ಹೆಚ್ಚಿಸುತ್ತಾ ಹೋದರೆ ನಿಮಗೆ 2 ಕೋಟಿ ರೂ ಕಾರ್ಪಸ್ ಸಿಗಲು 33-34 ವರ್ಷ ಬೇಕಾಗುತ್ತದೆ. ನೀವು ಸಾಧ್ಯವಾದಷ್ಟು ಹೆಚ್ಚು ಮೊತ್ತವನ್ನು ಹೂಡಿಕೆಗೆ ಬಳಸಿದರೆ ಗುರಿ ಸಾಧನೆ ಬೇಗ ಆಗುತ್ತದೆ.