ಮ್ಯೂಚುವಲ್ ಫಂಡ್​​ಗಳಲ್ಲಿ ದಾಖಲೆ ಹೂಡಿಕೆ

12 Nov 2024

Pic: Getty images

Vijayasarathy SN

ಭಾರತದಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಅಕ್ಟೋಬರ್ ತಿಂಗಳಲ್ಲಿ 41,887 ಕೋಟಿ ರೂನಷ್ಟು ಹೂಡಿಕೆ ಈಕ್ವಿಟಿ ಮ್ಯುಚುವಲ್ ಫಂಡ್​​ಗಳಿಗೆ ಹರಿದುಬಂದಿತ್ತು. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ. 22ರಷ್ಟು ಹೆಚ್ಚು.

Pic: Getty images

ಅಕ್ಟೋಬರ್ ತಿಂಗಳಲ್ಲಿ ಬಂದ ಹೂಡಿಕೆ ಹೊಸ ದಾಖಲೆಯೇ ಆಗಿದೆ. 2024ರ ಜೂನ್ ತಿಂಗಳಲ್ಲಿ 40,608 ಕೋಟಿ ರೂ ಹೂಡಿಕೆ ಆಗಿದ್ದು ದಾಖಲೆ ಎನಿಸಿತ್ತು. ಅಕ್ಟೋಬರ್​ನಲ್ಲಿ ಆ ದಾಖಲೆ ಮುರಿದುಬಿದ್ದಿದೆ.

Pic: Getty images

ಕಳೆದ ಕೆಲ ತಿಂಗಳುಗಳಿಂದ ಷೇರುಪೇಟೆ ಗಣನೀಯವಾಗಿ ಹಿನ್ನಡೆ ಕಾಣುತ್ತಿದ್ದಾಗ್ಯೂ ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಬಂಡವಾಳ 67.3 ಲಕ್ಷ ಕೋಟಿ ರೂಗೆ ಏರಿದೆ. ಇದರಲ್ಲಿ ಈಕ್ವಿಟಿ, ಡೆಟ್ ಫಂಡ್​​ಗಳೂ ಒಳಗೊಂಡಿವೆ.

Pic: Getty images

ಮಾರುಕಟ್ಟೆ ಬಿದ್ದರೂ ಮ್ಯುಚುವಲ್ ಫಂಡ್​ಗೆ ದಾಖಲೆ ಹೂಡಿಕೆ ಹರಿಯಲು ಏನು ಕಾರಣ? ತಜ್ಞರ ಪ್ರಕಾರ ಮಾರುಕಟ್ಟೆ ಕುಸಿದಾಗ ಹೂಡಿಕೆ ಮಾಡುವ ಬಯ್ ಆನ್ ಡಿಪ್ ತಂತ್ರವನ್ನು ಹೂಡಿಕೆದಾರರು ಅನುಸರಿಸಿದ್ದಾರೆ.

Pic: Getty images

ಕುತೂಹಲದ ಸಂಗತಿ ಎಂದರೆ ಸತತ 44 ತಿಂಗಳು ಮ್ಯೂಚುವಲ್ ಫಂಡ್​ಗಳ ಎಯುಎಂಗಳಿಗೆ ಬಂಡವಾಳ ಹೊರಹರಿವಿಗಿಂತ ಒಳಹರಿವು ಹೆಚ್ಚಿದೆ.

Pic: Getty images

ಮ್ಯೂಚುವಲ್ ಫಂಡ್​ಗೆ ಹೂಡಿಕೆ ಒಳಹರಿವು ಹೆಚ್ಚಲು ಪ್ರಮುಖ ಕಾರಣವೆಂದರೆ ಅದು ಎಸ್​ಐಪಿ. ನಿಯಮಿತವಾಗಿ ಹಣ ಹೂಡಿಕೆ ಮಾಡಲು ಅನುವು ಮಾಡಿಕೊಡುವ ಎಸ್​ಐಪಿ ಬಹಳಷ್ಟು ಹೂಡಿಕೆದಾರರ ಕೆಲಸವನ್ನು ಸುಲಭವಾಗಿಸಿದೆ.

Pic: Getty images

ಮಾಸಿಕವಾಗಿ ಎಸ್​ಐಪಿಯಲ್ಲಿ ಮಾಡುವ ಹೂಡಿಕೆ ಅಕ್ಟೋಬರ್​ನಲ್ಲಿ 25,323 ಕೋಟಿ ರೂಗೆ ಏರಿದೆ. ಯಾವುದೇ ತಿಂಗಳಲ್ಲಿ 25,000 ಕೋಟಿ ರೂ ಎಸ್​ಐಪಿ ಹೂಡಿಕೆ ಮಟ್ಟ ಮುಟ್ಟಿದ್ದು ಇದೇ ಮೊದಲು.

Pic: Getty images