ಮ್ಯೂಚುವಲ್ ಫಂಡ್ ಈಗ ಬಹಳ ಜನಪ್ರಿಯವಾಗಿರುವ ಹೂಡಿಕೆ ಆಯ್ಕೆ. ಕೆಲವೊಮ್ಮೆ ವರ್ಷಕ್ಕೆ ಶೇ. 45ರವರೆಗೂ ರಿಟರ್ನ್ ತಂದುಕೊಡಬಲ್ಲಂತಹ ಹೂಡಿಕೆ ಸ್ಥಳಗಳಿವು.
ರಿಸ್ಕ್ ತಿಳಿದಿರಲಿ
Pic credit: Getty
ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಲಾಭದಾಯಕ ಜೊತೆಗೆ ಬಹಳ ಸುಲಭ ಹೌದು. ಆದರೆ, ಅಲ್ಲಿಯೂ ಕೂಡ ಬಹಳಷ್ಟು ರಿಸ್ಕ್ ಅಂಶಗಳಿರುವುದನ್ನು ಮರೆಯಬಾರದು. ಕೆಲ ಪ್ರಮುಖ 5 ರಿಸ್ಕ್ ಅಂಶಗಳು ಮುಂದಿವೆ.
1. ಮಾರುಕಟ್ಟೆ ರಿಸ್ಕ್
Pic credit: Getty
ಮ್ಯೂಚುವಲ್ ಫಂಡ್ಗಳು ಹಣವನ್ನು ವಿವಿಧ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರುಕಟ್ಟೆ ಬಿದ್ದರೆ ಹೂಡಿಕೆ ಮೌಲ್ಯವೂ ಕುಸಿಯುತ್ತದೆ. ಇದು ಹೂಡಿಕೆದಾರರಿಗೆ ಮೊದಲೇ ಅರಿವಿನಲ್ಲಿ ಇರಬೇಕು.
2. ಬಡ್ಡಿದರ ಪ್ರಭಾವ
Pic credit: Getty
ಬಾಂಡ್ಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ಗಳ ಮೇಲೆ ಬಡ್ಡಿದರ ಪ್ರಭಾವ ಬೀರುತ್ತದೆ. ಬಡ್ಡಿದರ ಹೆಚ್ಚಾದರೆ ಈ ಬಾಂಡ್ ಫಂಡ್ಗಳ ಎನ್ಎವಿ ಅಥವಾ ಮೌಲ್ಯ ಕಡಿಮೆ ಆಗಬಹುದು.
3. ಕ್ರೆಡಿಟ್ ರಿಸ್ಕ್
Pic credit: Getty
ಬಾಂಡ್ ಹಾಗೂ ಇತರೆ ಡೆಟ್ ಸೆಕ್ಯೂರಿಟಿಯಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ನಲ್ಲಿ ಇನ್ನೊಂದು ರಿಸ್ಕ್ ಎಂದರೆ ಅದು ಡೀಫಾಲ್ಟ್ ಸಮಸ್ಯೆ. ಅಂದರೆ, ಬಾಂಡ್ ವಿತರಿಸಿದ ಸಂಸ್ಥೆ ದಿವಾಳಿ ಎದ್ದರೆ ಮ್ಯೂಚುವಲ್ ಫಂಡ್ಗೆ ಹೊಡೆತ ಬೀಳುತ್ತದೆ.
4. ಹಣದುಬ್ಬರ ಪರಿಣಾಮ
Pic credit: Getty
ಬೇರೆ ಬೇರೆ ಕಾರಣಗಳಿಗೆ ಕೆಲವೊಮ್ಮೆ ನಿರ್ದಿಷ್ಟ ಮ್ಯೂಚುವಲ್ ಫಂಡ್ಗಳು ತೀರಾ ಕಡಿಮೆ ರಿಟರ್ನ್ಸ್ ತರಬಹುದು. ಹಣದುಬ್ಬರ ದರಕ್ಕಿಂತ ಕಡಿಮೆ ವೃದ್ಧಿ ಕಂಡರೆ ನಿಮ್ಮ ಹೂಡಿಕೆ ನಿಷ್ಫಲ ಎನಿಸುತ್ತದೆ.
5. ಲಿಕ್ವಿಡಿಟಿ ಸಮಸ್ಯೆ
Pic credit: Getty
ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ಗಳು ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತವೆ. ಅಂದರೆ ಸಕಾಲಕ್ಕೆ ಹೂಡಿಕೆ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದು ಅಂತಿಮವಾಗಿ ಹೂಡಿಕೆದಾರರಿಗೆ ತಲೆನೋವಾಗುತ್ತದೆ.