ಕೇಂದ್ರ ಸರ್ಕಾರ ಆರಂಭಿಸಿರುವ ‘ನಮೋ ಡ್ರೋನ್ ದೀದಿ’ ಯೋಜನೆ ಗ್ರಾಮೀಣ ಭಾಗದಲ್ಲಿ ಜನಜೀವನಕ್ಕೆ ಬಹಳ ಉಪಯುಕ್ತವಾಗಿದೆ. ಮಹಿಳೆಯರಿಗೂ ಉದ್ಯೋಗಾವಕಾಶ ಕೊಟ್ಟಿದೆ.
Pic credit: Google
ನಮೋ ಡ್ರೋನ್ ದೀದಿ ಯೋಜನೆಯಲ್ಲಿ ಸರ್ಕಾರವು ಈವರೆಗೆ 1,000 ಮಹಿಳೆಯರಿಗೆ ಡ್ರೋನ್ ವಿತರಿಸಿದೆ. 15,000 ಮಂದಿಗೆ ಡ್ರೋನ್ ನೀಡುವ ಪ್ಲಾನ್ ಹೊಂದಿದೆ.
Pic credit: Google
ಡ್ರೋನ್ ಮೂಲಕ ರೈತರ ಜಮೀನಿಗೆ ಗೊಬ್ಬರ ಎರಚುವುದು, ಔಷಧಿ ಸಿಂಪಡಿಸುವುದು, ಜಮೀನು ಸರ್ವೇಕ್ಷಣೆ ಮಾಡುವುದು, ಬೆಳೆ ಪರಿಶೀಲಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡಬಹುದು. ಇದರಿಂದ ಉತ್ತಮ ಫಸಲು ಬರುತ್ತದೆ.
Pic credit: Google
ಮಹಿಳಾ ಸ್ವಸಹಾಯ ಸಂಘಗಳು ಈ ಡ್ರೋನ್ಗಳನ್ನು ಬಳಸಿಕೊಳ್ಳಬಹುದು. ಇದಕ್ಕೆ ಬೇಕಾದ ತರಬೇತಿ, ತಂತ್ರಜ್ಞಾನ ತಿಳಿವಳಿಕೆ, ಪರವಾನಗಿ ಎಲ್ಲವನ್ನೂ ಮಹಿಳೆಯರಿಗೆ ಒದಗಿಸಲಾಗುತ್ತದೆ.
Pic credit: Google
ಮಹಿಳೆಯರು ರೈತರಿಗೆ ಡ್ರೋನ್ ಬಳಸಿ ಸೇವೆಗಳನ್ನು ನೀಡಬಹುದು. ಜೆಸಿಬಿಗಳ ರೀತಿಯಲ್ಲಿ ಇವುಗಳನ್ನೂ ಕೂಡ ಗಂಟೆ ಲೆಕ್ಕದಲ್ಲಿ ಬಾಡಿಗೆ ದರ ನಿಗದಿ ಮಾಡಿ ಮಹಿಳೆಯರು ಆದಾಯ ಪಡೆಯಬಹುದು.
Pic credit: Google
ಒಂದು ಡ್ರೋನ್ ಖರೀದಿಸಿದರೆ ಶೇ. 80ರಷ್ಟು ಮೊತ್ತವನ್ನು ಸರ್ಕಾರವೇ ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಗರಿಷ್ಠ 8 ಲಕ್ಷ ರೂವರೆಗೂ ಸಬ್ಸಿಡಿ ಪಡೆಯಬಹುದು. ಉಳಿದ ಮೊತ್ತಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ.
Pic credit: Google
ಒಂದು ಡ್ರೋನ್ನಿಂದ ಮಹಿಳೆಯರು ವರ್ಷದಲ್ಲಿ ಕನಿಷ್ಠ ಒಂದು ಲಕ್ಷ ರೂ ಆದಾಯ ಪಡೆಯಬಹುದು. ಪೀಕ್ ಸೀಸನ್ನಲ್ಲಿ ಒಂದು ದಿನದಲ್ಲಿ 5,000 ರೂ ಸಂಪಾದಿಸುವ ಅವಕಾಶ ಇರುತ್ತದೆ.