11 July 2024
Pic credit: Google
Vijayasarathy SN
ಇಲಾನ್ ಮಸ್ಕ್ ಮಾಲಕತ್ವದ ನ್ಯೂರಾಲಿಂಕ್ ಸಂಸ್ಥೆ ತನ್ನ ಎಐ ಬ್ರೇನ್ ಚಿಪ್ ಸಾಹಸ ಮುಂದುವರಿಸಿದೆ. ಎರಡನೇ ವ್ಯಕ್ತಿಯ ಮೇಲೆ ಹೊಸ ಪ್ರಯೋಗ ನಡೆಸಲಿದೆ.
Pic credit: Google
ಅಮೆರಿಕದ ಅರಿಜೋನಾದ ನೋಲಾಂಡ್ ಆರ್ಬಾಗ್ ಎಂಬುವವರ ಮೇಲೆ ಮೊದಲ ಪ್ರಯೋಗ ನಡೆದಿತ್ತು. ಅದರಿಂದ ಸಕಾರಾತ್ಮಕ ಅಂಶಗಳು ನ್ಯೂರಾಲಿಂಕ್ಗೆ ಇನ್ನಷ್ಟು ಉತ್ತೇಜನ ನೀಡಿವೆ.
Pic credit: Google
ನೋಲ್ಯಾಂಡ್ ಅಪಘಾತವೊಂದರಲ್ಲಿ ಭುಜದಿಂದ ಕೆಳಗೆ ಪಾರ್ಶ್ವವಾಯು ಹೊಡೆತದಿಂದ ನಿಶ್ಚೇಷ್ಟಗೊಂಡಿದ್ದರು. ಅವರ ಮಿದುಳಿಗೆ ನ್ಯೂರಾಲಿಂಕ್ನ ವಿಶೇಷ ಚಿಪ್ ಹಾಕಲಾಗಿತ್ತು.
Pic credit: Google
ಮಿದುಳಿಗೆ ಚಿಪ್ ಹಾಕಿದ ಬಳಿಕ ನೋಲ್ಯಾಂಡ್ ಚೇತರಿಸಿಕೊಂಡಿದ್ದರು. ತಮ್ಮ ಆಲೋಚನೆಯಿಂದಲೇ ಅವರು ಕಂಪ್ಯೂಟರ್ ಕ್ರಿಯೆ ಮಾಡಬಲ್ಲವರಾಗಿದ್ದರು. ಚೆಸ್ ಆಡಬಲ್ಲವರಾಗಿದ್ದರು.
Pic credit: Google
ಒಂದು ತಿಂಗಳ ಬಳಿಕ ನೋಲ್ಯಾಂಡ್ ಮಿದುಳಿಗೆ ಅಳವಡಿಸಿದ್ದ ಚಿಪ್ ಕಾರ್ಯನಿರ್ವಹಣೆ ಕಡಿಮೆ ಆಗಿತ್ತು. ಸಾಫ್ಟ್ವೇರ್ ಅಪ್ಡೇಟ್ ಬಳಿಕ ಮತ್ತೆ ಒಂದಷ್ಟು ಚೇತರಿಸಿಕೊಂಡಿದ್ದರು.
Pic credit: Google
ಮೊದಲ ಪ್ರಯೋಗದಲ್ಲಿ ಮಿದುಳಿನ ಜೀವಕೋಶದಿಂದ ಎಲೆಕ್ಟ್ರೋಡ್ ಥ್ರೆಡ್ ಜಾರಿ ಬರುತ್ತಿತ್ತು. ಈಗ ಎರಡನೇ ಪ್ರಯೋಗದಲ್ಲಿ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವ ಉದ್ದೇಶ ಇದೆ.
Pic credit: Google
ಪಾರ್ಶ್ವವಾಯು, ಸ್ಮರಣಾ ನಷ್ಟ ಇತ್ಯಾದಿ ಮಿದುಳು ಸಮಸ್ಯೆಗಳಿಗೆ ಪರಿಹಾರ ಸದ್ಯದ ಗುರಿ. ಮನುಷ್ಯನ ಜಾಣ್ಮೆ ಮತ್ತು ಡಿಜಿಟಲ್ ಜಾಣ್ಮೆ ಎರಡನ್ನೂ ಮಿಳಿತಗೊಳಿಸಿ, ಸೂಪರ್ ಪವರ್ ಶಕ್ತಿ ಕೊಡುವುದು ಅಂತಿಮ ಗುರಿ.
Pic credit: Google