By: Vijayasarathy SN

‘ಡೋಂಟ್ ಕೇರ್’ ಫಿನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್

25 June 2024

ಈಗ ಬಜೆಟ್ ಕಾಲಘಟ್ಟ. ಎಲ್ಲರ ಕಣ್ಣು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ನೆಟ್ಟಿದೆ. ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ಕಾರ್ಪೊರೇಟ್​ಗಳು ನಿರ್ಮಲಾ ತಾಯ್​ನತ್ತ ನೋಡುತ್ತಿದ್ದಾರೆ.

ಬಜೆಟ್ ಮಿನಿಸ್ಟರ್

(Pic credit: Google)

ನಿರ್ಮಲಾ ಸೀತಾರಾಮನ್ ಬಹಳ ಖಡಕ್ ಮಂತ್ರಿ. ಸರ್ಕಾರಕ್ಕೆ ಆದಾಯ ಹೆಚ್ಚಬೇಕೆಂದರೆ ಮುಲಾಜಿಲ್ಲದೇ ತೆರಿಗೆ ಹೆಚ್ಚಿಸುತ್ತಾರೆ. ಅಂತೆಯೇ, ಈಕೆ ಟ್ಯಾಕ್ಸ್ ಮಿನಿಸ್ಟರ್ ಎಂಬ ಖ್ಯಾತಿ, ಅಪಖ್ಯಾತಿ ಹೊಂದಿದ್ದಾರೆ.

ಡೋಂಟ್ ಕೇರ್

(Pic credit: Google)

ನಿರ್ಮಲಾ ಸೀತಾರಾಮನ್ ಹುಟ್ಟಿದ್ದು ತಮಿಳುನಾಡಿನಲ್ಲಿ, ಮದುವೆಯಾಗಿದ್ದು ಆಂಧ್ರದವರನ್ನು, ರಾಜ್ಯಸಭೆಗೆ ಹೆಚ್ಚಾಗಿ ಪ್ರವೇಶಿಸಿದ್ದು ಕರ್ನಾಟಕದಿಂದ. ದಕ್ಷಿಣದ ಮೂರು ರಾಜ್ಯಗಳ ನಂಟು ನಿರ್ಮಲಾ ತಾಯ್​ಗೆ ಇದೆ.

ದಕ್ಷಿಣ ರಾಜ್ಯಗಳ....

(Pic credit: Google)

ಜೆಎನ್​ಯು ವಿವಿಯಲ್ಲಿ ಇವರು ಓದಿದ್ದು. ಮದುವೆಯಾಗಿದ್ದು ಕಾಂಗ್ರೆಸ್ ಬೆಂಬಲಿಗ ಪರಕಾಲ ಪ್ರಭಾಕರ್ ಅವರನ್ನು. ಬ್ರಿಟನ್​ನಲ್ಲಿ ಕಾರ್ಪೊರೇಟ್ ಕೆಲಸದಲ್ಲಿದ್ದ ಇವರು 2008ರಲ್ಲಿ ಬಿಜೆಪಿ ಮೂಲಕ ರಾಜಕೀಯಕ್ಕೆ ಅಡಿ ಇಟ್ಟರು.

ನಿರ್ಮಲಾ ವೈಯಕ್ತಿಕ ಸಂಗತಿ

(Pic credit: Google)

2014ರಿಂದ ಇಲ್ಲಿಯವರೆಗೆ ಸತತ ಮೂರು ಸರ್ಕಾರಗಳಲ್ಲಿ ಸಚಿವೆಯಾಗಿದ್ದಾರೆ. 2014ರಲ್ಲಿ ಕಿರಿಯ ಸಚಿವೆಯಾಗಿದ್ದು. 2017ರಲ್ಲಿ ಕ್ಯಾಬಿನೆಟ್ ದರ್ಜೆ ಸಚಿವೆಯಾದರು. 2019ರಿಂದ ಫಿನಿನಾನ್ಸ್ ಮಿನಿಸ್ಟರ್ ಆಗಿದ್ದಾರೆ.

ಮೂರು ಸರ್ಕಾರಗಳಲ್ಲಿ ಸಚಿವೆ

(Pic credit: Google)

2014ರಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ಅಫೇರ್ಸ್ ಖಾತೆಯಲ್ಲಿ ಜೂನಿಯರ್ ಮಿನಿಸ್ಟರ್ ಆಗಿದ್ದರು. ಬಳಿಕ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯದಲ್ಲಿ ಸ್ವತಂತ್ರ ಖಾತೆಗೆ ಬಡ್ತಿ ಪಡೆದರು. 2017ರಲ್ಲಿ ರಕ್ಷಣಾ ಸಚಿವಾಲಯದಲ್ಲಿ ಕ್ಯಾಬಿನೆಟ್ ಮಿನಿಸ್ಟರ್ ಆದರು.

ಹಂತಹಂತವಾಗಿ ಬಡ್ತಿ

(Pic credit: Google)

ಹಣಕಾಸು ಸಚಿವ ಅರುಣ್ ಜೇಟ್ಲಿ ವಿಧಿವಶಗೊಂಡಿದ್ದರಿಂದ 2019ರಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವ ಸ್ಥಾನ ಪಡೆದರು. ಈಗ ಸತತ ಎರಡನೇ ಬಾರಿ ಆ ಖಾತೆ ನಿರ್ವಹಿಸುತ್ತಿದ್ದಾರೆ. ಸತತ ಏಳನೇ ಬಾರಿ ಮುಂಗಡ ಪತ್ರ ಮಂಡಿಸುತ್ತಿದ್ದಾರೆ.

ಏಳನೇ ಬಾರಿ ಬಜೆಟ್

(Pic credit: Google)

2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿತ್ತು. ಈ ಸರ್ಜಿಕಲ್ ಸ್ಟ್ರೈಕ್ ನಡೆದಾಗ ರಕ್ಷಣಾ ಸಚಿವರಾಗಿದ್ದು ಇದೇ ನಿರ್ಮಲಾ ಸೀತಾರಾಮನ್. ಬಹಳ ಖಡಕ್ ಎನ್ನುವ ಛಾತಿ ಇವರಿಗೆ ಸಿಕ್ಕಿದೆ.

ಬಾಲಾಕೋಟ್ ಸ್ಟ್ರೈಕ್

(Pic credit: Google)

ಇಂದಿರಾ ಗಾಂಧಿ ಬಳಿಕ ರಕ್ಷಣಾ ಖಾತೆ ಮತ್ತು ಹಣಕಾಸು ಖಾತೆ ನಿರ್ವಹಿಸಿದ ಎರಡನೇ ಮಹಿಳೆ ಇವರು. ಹಾಗೆಯೇ, ಪೂರ್ಣಪ್ರಮಾಣದ ಹಣಕಾಸು ಸಚಿವ ಸ್ಥಾನ ನಿರ್ವಹಿಸಿದ ಮೊದಲ ಮಹಿಳೆ ಇವರು.

ಮೊದಲ ಮಹಿಳೆ...

(Pic credit: Google)