ಬಜೆಟ್ ಸುತ್ತಲ ಸ್ವಾರಸ್ಯಕರ ಸಂಗತಿ

By: Vijayasarathy SN

21 June 2024

ಮೊದಲ ಬಜೆಟ್

ಆಧುನಿಕ ಶೈಲಿಯ ಬಜೆಟ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಮಂಡನೆ ಮಾಡಿದ್ದು ಈಸ್ಟ್ ಇಂಡಿಯಾ ಕಂಪನಿಯ ಜೇಮ್ಸ್ ವಿಲ್ಸನ್ 1860ರ ಏಪ್ರಿಲ್ 7ರಂದು.

(pic credit: Google)

ಸ್ವಾತಂತ್ರ್ಯಾನಂತರ...

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಜೆಟ್ ಮಂಡನೆ ಆಗಿದ್ದು 1947ರ ನವೆಂಬರ್ 26ರಂದು. ಅಂದಿನ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮೊದಲ ಬಜೆಟ್ ಮಂಡಿಸಿದ್ದು.

(pic credit: Google)

ಅತಿಹೆಚ್ಚು ಬಜೆಟ್

ಮೊರಾರ್ಜಿ ದೇಸಾಯಿ 10, ಪಿ ಚಿದಂಬರಂ 9, ಮತ್ತು ಪ್ರಣಬ್ ಮುಖರ್ಜಿ 8 ಬಜೆಟ್​ಗಳನ್ನು ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು 7ನೇ ಬಜೆಟ್. ಸತತ 7 ಬಾರಿ ಮಂಡಿಸಿದ ದಾಖಲೆ ಅವರದ್ದು.

(pic credit: Google)

ಬ್ಲ್ಯಾಕ್ ಬಜೆಟ್

ಯಶವಂತರಾವ್ ಚವಾಣ್ ಮಂಡಿಸಿದ 1973-74ರ ಬಜೆಟ್ ಮಂಡಿಸಿದಾಗ 550 ಕೋಟಿ ರೂ ವಿತ್ತೀಯ ಕೊರತೆ ಇತ್ತು. ಆಗ ಅದನ್ನು ಬ್ಲ್ಯಾಕ್ ಬಜೆಟ್ ಎಂದು ಟೀಕಿಸಲಾಗಿತ್ತು.

(pic credit: Google)

ಕ್ಯಾರಟ್, ಸ್ಟಿಕ್ ಬಜೆಟ್

1986ರ ಫೆ. 28ರಂದು ವಿಪಿ ಸಿಂಗ್ ಮಂಡಿಸಿದ ಬಜೆಟ್ ಅನ್ನು ಕ್ರಾಂತಿಕಾರಿ ಎಂದು ಕರೆಯಲಾಗಿತ್ತು. ಒಂದು ಕಡೆ ತೆರಿಗೆ ಹೊರೆ ಇಳಿಸಿತ್ತು. ಇನ್ನೊಂದೆಡೆ ತೆರಿಗೆಗಳ್ಳರಿಗೆ ಭಯ ಹುಟ್ಟಿಸಿತ್ತು.

(pic credit: Google)

ಡ್ರೀಮ್ ಬಜೆಟ್

1997-98ರಲ್ಲಿ ಪಿ ಚಿದಂಬರಂ ಪ್ರಸ್ತುತಪಡಿಸಿದ ಮುಂಗಡಪತ್ರವನ್ನು ಡ್ರೀಮ್ ಬಜೆಟ್ ಎನ್ನಲಾಗುತ್ತದೆ. ಅದರಲ್ಲಿ ಬಹಳಷ್ಟು ತೆರಿಗೆ ಸುಧಾರಣೆಗಳನ್ನು ಮಾಡಲಾಗಿತ್ತು.

(pic credit: Google)

ಮಿಲ್ಲೇನಿಯಂ ಬಜೆಟ್

2000ರಲ್ಲಿ ಯಶವಂತ್ ಸಿನ್ಹಾ ಮಂಡಿಸಿದ ಬಜೆಟ್ ಅನ್ನು ಮಿಲ್ಲೆನಿಯಂ ಬಜೆಟ್ ಎನ್ನಲಾಗಿದೆ.  21 ಕಂಪ್ಯೂಟರ್ ವಸ್ತುಗಳಿಗೆ ಆಮದು ಸುಂಕ ಕಡಿಮೆ ಮಾಡಲಾಯಿತು.

(pic credit: Google)

ರೋಲ್​ಬ್ಯಾಕ್ ಬಜೆಟ್

2002-03ರಲ್ಲಿ ಯಶವಂತ್ ಸಿನ್ಹಾ ಮಂಡಿಸಿದ ಬಜೆಟ್​ನಲ್ಲಿ ಹಲವು ಪ್ರಸ್ತಾಪಗಳನ್ನು ಹಿಂಪಡೆಯಲಾಯಿತು. ಅಂತೆಯೇ ಅದು ರೋಲ್​ಬ್ಯಾಕ್ ಬಜೆಟ್ ಎಂದು ಹೆಸರಾಗಿದೆ.

(pic credit: Google)

ಶತಮಾನದ ಬಜೆಟ್

2021ರಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಅನ್ನು ಶತಮಾನದ ಬಜೆಟ್ ಎಂದು ಬಣ್ಣಿಸಿದ್ದರು. ಹೂಡಿಕೆ, ತೆರಿಗೆ ಸಂಗ್ರಹ ಹೆಚ್ಚಳ, ಖಾಸಗಿಕರಣ ಇತ್ಯಾದಿ ಮೂಲಕ ಆರ್ಥಿಕತೆಗೆ ಪುಷ್ಟಿ ಕೊಡಲಾಗಿತ್ತು.

(pic credit: Google)

ಇಪೋಕಲ್ ಬಜೆಟ್

1991ರಲ್ಲಿ ಮನಮೋಹನ್ ಸಿಂಗ್ ಮಂಡಿಸಿದ ಬಜೆಟ್ ಅನ್ನು ಶ್ರೇಷ್ಠ ಬಜೆಟ್ ಎಂದು ಪರಿಗಣಿಸಲಾಗುತ್ತದೆ. ಆ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ಕುಸಿತದ ಅಂಚಿನಲ್ಲಿತ್ತು. ಸಿಂಗ್ ಬಜೆಟ್ ದೊಡ್ಡ ಪರಿವರ್ತನೆಯೇ ತಂದಿತು.

(pic credit: Google)