ಕೇಂದ್ರ ಬಜೆಟ್ ಅಂದರೇನು?

By: Vijayasarathy SN

17 June 2024

ಆಯ+ವ್ಯಯ

ಬಜೆಟ್ ಎಂದರೆ ಒಂದು ವರ್ಷದ ಹಣಕಾಸು ವರದಿ ಆಗಿರುತ್ತದೆ. ಇದನ್ನು ಆಯವ್ಯಯ ಪತ್ರ ಎಂದೂ ಕರೆಯುತ್ತಾರೆ. ಆದಾಯ ಮತ್ತು ವೆಚ್ಚಗಳ ಮುನ್ನೋಟ.

(Pic credit: Google)

ಬಜೆಟ್ ವಿವರಣೆ

ಸಂವಿಧಾನದ ಪರಿಚ್ಛೇದ 112ರ ಪ್ರಕಾರ ಕೇಂದ್ರ ಬಜೆಟ್ ಎಂದರೆ ಪ್ರಸಕ್ತ ಹಣಕಾಸು ವರ್ಷಕ್ಕೆ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚಗಳ ಲೆಕ್ಕ.

(Pic credit: Google)

ಹಣಕಾಸು ವರ್ಷ

ಹಣಕಾಸು ವರ್ಷ ಎಂಬುದು ಏಪ್ರಿಲ್ 1ರಿಂದ ಆರಂಭವಾಗಿ ಮುಂದಿನ ವರ್ಷದ ಮಾರ್ಚ್ 31ರವರೆಗೂ ಇರುತ್ತದೆ. ಕ್ಯಾಲಂಡರ್ ವರ್ಷ ಎಂಬುದು ಜ. 1ರಿಂದ ಡಿ. 31ರವರೆಗೆ ಇರುತ್ತದೆ.

(Pic credit: Google)

ಆದಾಯ, ಸಾಲ

ಕೇಂದ್ರ ಮುಂಗಡ ಪತ್ರದಲ್ಲಿ ಅಥವಾ ಬಜೆಟ್​ನಲ್ಲಿ ಎರಡು ಪ್ರಮುಖ ವಿಭಾಗಗಳಿರುತ್ತವೆ. ರೆವೆನ್ಯೂ ಬಜೆಟ್ ಮತ್ತು ಕ್ಯಾಪಿಟಲ್ ಬಜೆಟ್ ಎಂದು ವಿಭಾಗಿಸಬಹುದು.

(Pic credit: Google)

ಆದಾಯ ವಿನಿಯೋಗ

ರೆವೆನ್ಯೂ ಬಜೆಟ್ ಎಂಬುದು ಆದಾಯಗಳ ಅಂದಾಜು. ಸರ್ಕಾರಕ್ಕೆ ಬರುವ ಆದಾಯ ಇದು. ಆದಾಯಗಳ ಸ್ವೀಕೃತಿ ಮತ್ತು ಆದಾಯಗಳ ವೆಚ್ಚ ಎಂದು ಮತ್ತೆ ವರ್ಗೀಕರಿಸಬಹುದು.

(Pic credit: Google)

ತೆರಿಗೆ, ತೆರಿಗೆಯೇತರ

ಸರ್ಕಾರಕ್ಕೆ ತೆರಿಗೆ ಮತ್ತು ತೆರಿಗೆಯೇತರ ಆದಾಯಗಳು ಹರಿದುಬರುತ್ತವೆ. ಈ ಆದಾಯವನ್ನು ಸರ್ಕಾರ ಹೇಗೆ ಬಳಸುತ್ತದೆ ಎಂಬುದು ರೆವೆನ್ಯೂ ಎಕ್ಸ್​ಪೆಂಡಿಚರ್ ಆಗುತ್ತದೆ.

(Pic credit: Google)

ಕ್ಯಾಪಿಟಲ್ ಬಜೆಟ್?

ಕ್ಯಾಪಿಟಲ್ ಬಜೆಟ್ ಎಂದರೆ ಸರ್ಕಾರಕ್ಕಿರುವ ಋಣಭಾರ, ಅಥವಾ ಸಾಲಗಳು. ಸಾರ್ವಜನಿಕರು, ಆರ್​ಬಿಐ, ವಿದೇಶಗಳಿಂದ ಸರ್ಕಾರ ನಿರೀಕ್ಷಿಸುವ ಸಾಲದ ಲೆಕ್ಕ ಇಲ್ಲಿರುತ್ತದೆ.

(Pic credit: Google)

ಕ್ಯಾಪಿಟಲ್ ಎಂದರೆ?

ಇಲ್ಲಿಯೂ ಕೂಡ ಕ್ಯಾಪಿಟಲ್ ರೆಸಿಪ್ಟ್ಸ್ ಮತ್ತು ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಎಂದು ವರ್ಗೀಕರಿಸಲಾಗುತ್ತದೆ. ರೆಸಿಪ್ಟ್ಸ್ ಅಥವಾ ಸ್ವೀಕೃತಿ ಎಂಬುದು ಸಾಲದ ಅಂದಾಜು ಒಳಹರಿವು.

(Pic credit: Google)

ಸಾಲದ ವಿನಿಯೋಗ

ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಎಂದರೆ ಆ ಸಾಲದ ಹಣವನ್ನು ಸರ್ಕಾರ ಯಾವ ರೀತಿಯಲ್ಲಿ ಬಳಸುತ್ತದೆ, ಯಾವ ಯೋಜನೆಗಳಿಗೆ ವಿನಿಯೋಗಿಸುತ್ತದೆ ಎಂಬ ವಿವರ ಇರುತ್ತದೆ.

(Pic credit: Google)