ಅಕ್ಸೆಂಚರ್​ನಲ್ಲಿ ಭಾರತೀಯ ಉದ್ಯೋಗಿಗಳಿಗೆ ಸಂಬಳಹೆಚ್ಚಳ ಇಲ್ಲ?

16 Oct 2023

By: Vijayasarathy SN

ಅಕ್ಸೆಂಚರ್, ಮಾರುಕಟ್ಟೆ ಬಂಡವಾಳದಲ್ಲಿ ವಿಶ್ವದ ಅತಿದೊಡ್ಡ ಐಟಿ ಕಂಪನಿ ಎನಿಸಿದೆ. ಇದರ ಮುಖ್ಯ ಕಚೇರಿ ಐರ್ಲೆಂಡ್ ರಾಜಧಾನಿ ಡುಬ್ಲಿನ್​ನಲ್ಲಿದೆ.

ಅತಿದೊಡ್ಡ ಐಟಿ ಕಂಪನಿ

Pic credit: Google

ಜಾಗತಿಕ ಆರ್ಥಿಕ ಹಿನ್ನಡೆ ಕಾರಣ ಈ ವರ್ಷದ ಸಂಬಳ ಹೆಚ್ಚಳ, ಬಡ್ತಿ ಇತ್ಯಾದಿಗಳಿಗೆ ಕೊಕ್ಕೆ ಹಾಕಲು ಅಕ್ಸೆಂಚರ್ ನಿರ್ಧರಿಸಿದೆ.

ಆರ್ಥಿಕ ಹಿನ್ನಡೆ

Pic credit: Google

ಅಕ್ಸೆಂಚರ್​ನ ಭಾರತ ವಿಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ವರ್ಷ ಸಂಬಳ ಹೆಚ್ಚಳ ಮಾಡಲಾಗುತ್ತಿಲ್ಲ. ಬಡ್ತಿ ಪ್ರಕ್ರಿಯೆ ಮುಂದೂಡಿದೆ.

ಭಾರತಕ್ಕೆ ಎಫೆಕ್ಟ್

Pic credit: Google

ಎಂಡಿ ಮಟ್ಟದಲ್ಲಿ ಬಡ್ತಿಗಳನ್ನು ಮುಂದಕ್ಕೆ ಹಾಕಿದೆ. ಹಾಗೆಯೇ, ಹಿರಿಯ ಎಂಡಿ ಮಟ್ಟದ ಹುದ್ದೆಗಳಿಗೆ ನೇಮಕಾತಿಯನ್ನೂ ಮುಂದಕ್ಕೆಹಾಕಲಾಗಿದೆ.

ಉನ್ನತ ಹುದ್ದೆ

Pic credit: Google

2023ರ ಡಿಸೆಂಬರ್​ನಲ್ಲಿ ಲೆವೆಲ್-5ವರೆಗೂ ಪ್ರೊಮೋಶನ್ಸ್ ನಡೆಯಲಿದೆ. ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳಿಗೆ ಬಡ್ತಿ ಈ ವರ್ಷ ಇರುವುದಿಲ್ಲ ಎಂದು ಹೇಳಿದೆ.

ಬಡ್ತಿಯೂ ಮುಂದೂಡಿಕೆ

Pic credit: Google

ಉದ್ಯೋಗಿಯ ವೈಯಕ್ತಿಕ ಸಾಧನೆ ಆಧಾರದ ಮೇಲೆ ಪರ್ಫಾರ್ಮೆನ್ಸ್ ಬೋನಸ್ ಕೊಡುವುದನ್ನು ಅಕ್ಸೆಂಚರ್ ಮುಂದುವರಿಸಲು ನಿರ್ಧರಿಸಿದೆ.

ಬೋನಸ್ ಇದೆ

Pic credit: Google

ಅಕ್ಸೆಂಚರ್ ಕಂಪನಿಯಲ್ಲಿ ಜಾಗತಿಕವಾಗಿ 7.38 ಲಕ್ಷ ಉದ್ಯೋಗಿಗಳಿದ್ದಾರೆ. ಭಾರತದಲ್ಲೇ 3 ಲಕ್ಷ ಉದ್ಯೋಗಿಗಳಿದ್ದಾರೆ. ಬೆಂಗಳೂರಲ್ಲೂ ಇದರ ಕಚೇರಿ ಇದೆ.

ಭಾರತದಲ್ಲಿ 3 ಲಕ್ಷ

Pic credit: Google

ಅಕ್ಸೆಂಚರ್ ಇತ್ತೀಚೆಗಷ್ಟೇ 19,000 ಮಂದಿಯನ್ನು ಲೇ ಆಫ್ ಮಾಡಿತ್ತು. ಅದರ ಬೆನ್ನಲ್ಲೇ ಈಗ ಸಂಬಳ ಹೆಚ್ಚಳ ಮಾಡದೇ ಇರಲು ನಿರ್ಧರಿಸಿ ಉದ್ಯೋಗಿಗಳಿಗೆ ಶಾಕ್ ಕೊಟ್ಟಿದೆ.

ಹೆಚ್ಚುವರಿ ಶಾಕ್

Pic credit: Google

Next Story: ಹಣ ಉಳಿಸಿ ಬೆಳೆಸುವ ಈ ಸ್ವಭಾವಗಳು ನಿಮ್ಮಲ್ಲಿರಲಿ

ಧನ್ಯವಾದಗಳು