08 July 2024
Pic credit: Google
Vijayasarathy SN
ಎನ್ಪಿಎಸ್ ಮತ್ತು ಪಿಪಿಎಫ್ ಸ್ಕೀಮ್ಗಳ ಬಗ್ಗೆ ನೀವು ಕೇಳಿರಬಹುದು. ಎನ್ಪಿಎಸ್ ಎಂದರೆ ನ್ಯಾಷನಲ್ ಪೆನ್ಷನ್ ಸಿಸ್ಟಂ. ಪಿಪಿಎಫ್ ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್.
Pic credit: Google
ಎನ್ಪಿಎಸ್ ಮತ್ತು ಪಿಪಿಎಫ್ ಎರಡೂ ಕೂಡ ಸರ್ಕಾರದಿಂದ ನಡೆಸುವ ಹೂಡಿಕೆ ಯೋಜನೆಗಳಾಗಿವೆ. ಎರಡೂ ಕೂಡ ಟ್ಯಾಕ್ಸ್ ಬೆನಿಫಿಟ್ ನೀಡುತ್ತವೆ. ಆದರೆ, ರಿಟರ್ನ್ಸ್ ಬರುವ ವಿಚಾರದಲ್ಲಿ ಎರಡಕ್ಕೂ ವ್ಯತ್ಯಾಸ ಇದೆ.
Pic credit: Google
ಪಿಪಿಎಫ್ನಲ್ಲಿ ಸದ್ಯ ವರ್ಷಕ್ಕೆ ಶೇ 7.1ರಷ್ಟು ಬಡ್ಡಿ ಕೊಡಲಾಗುತ್ತದೆ. ಒಂದು ವರ್ಷದಲ್ಲಿ ಹೂಡಿಕೆ ಮಿತಿ 1.5 ಲಕ್ಷ ರೂ ಇದೆ. ಮೆಚ್ಯೂರಿಟಿ ಅವಧಿ 15 ವರ್ಷ. ಐದೈದು ವರ್ಷ ಅವಧಿ ವಿಸ್ತರಣೆಗೆ ಅವಕಾಶ ಇರುತ್ತದೆ.
Pic credit: Google
ಪಿಪಿಎಫ್ನಲ್ಲಿ ನೀವು ವರ್ಷಕ್ಕೆ 1.5 ಲಕ್ಷ ರೂನಂತೆ 30 ವರ್ಷ ಹೂಡಿಕೆ ಮಾಡುತ್ತಾ ಹೋದಲ್ಲಿ ಮತ್ತು ಶೇ. 7.1ರ ಬಡ್ಡಿದರವೇ ಮುಂದುವರಿದಲ್ಲಿ 1.5 ಕೋಟಿ ರೂ ನಿಮಗೆ ಸಿಗುತ್ತದೆ.
Pic credit: Google
ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ನಿಗದಿತ ರಿಟರ್ನ್ ಇರುವುದಿಲ್ಲ. ಮಾರುಕಟ್ಟೆಗೆ ಜೋಡಿತವಾದ ಯೋಜನೆ ಇದು. ಆದರೆ, ಯಾವ ರೀತಿಯ ಹೂಡಿಕೆಗಳಲ್ಲಿ ಹಣತೊಡಗಿಸಬೇಕೆಂಬ ಆಯ್ಕೆ ನಿಮಗೆ ಇರುತ್ತದೆ.
Pic credit: Google
ಈಕ್ವಿಟಿ, ಕಾರ್ಪೊರೇಟ್ ಬಾಂಡ್, ಗವರ್ನ್ಮೆಂಟ್ ಬಾಂಡ್, ಆಲ್ಟರ್ನೇಟಿವ್ಸ್, ಹೀಗೆ ನಾಲ್ಕು ರೀತಿಯ ಹೂಡಿಕೆ ಆಯ್ಕೆಗಳು ಎನ್ಪಿಎಸ್ ಸದಸ್ಯರಿಗೆ ಇರುತ್ತವೆ. ಕಳೆದ ಏಳು ವರ್ಷದಲ್ಲಿ ಇವು ಶೇ. 6.17ರಿಂದ ಶೇ. 16.19ರವರೆಗೂ ರಿಟರ್ನ್ ಕೊಟ್ಟಿವೆ.
Pic credit: Google
ಈಕ್ವಿಟಿ ಹೂಡಿಕೆ ಆಯ್ಕೆ ಸ್ಕೀಮ್ ‘ಇ’ನಲ್ಲಿ ಬರುತ್ತದೆ. ಇದು ಏಳು ವರ್ಷದಲ್ಲಿ ಸರಾಸರಿ ಶೇ. 15.56ರಷ್ಟು ಲಾಭ ಕೊಟ್ಟಿದೆ. ಇನ್ನುಳಿದ ಆಯ್ಕೆಗಳು ಸರಾಸರಿಯಾಗಿ ಶೇ. 7.55ರಿಂದ ಶೇ 7.74ರವರೆಗೆ ರಿಟರ್ನ್ಸ್ ಕೊಟ್ಟಿವೆ.
Pic credit: Google