By: Vijayasarathy SN

ಗಮನಿಸಿ..!  ಮಾರ್ಚ್​ನಿಂದ ದುಬಾರಿಯಾಗಲಿದೆ ಈರುಳ್ಳಿ

21 Feb 2024

ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ಮಾರ್ಚ್ 31ರವರೆಗೆ ಮುಂದುವರಿಸಲು ನಿರ್ಧರಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ  ಕುಸಿತ ಕಂಡಿದೆ.

ಬೆಲೆ ಕುಸಿತ

(Pic credit: Google)

ಕ್ವಿಂಟಾಲ್​ಗೆ 1,800 ರೂ ಇದ್ದ ಈರುಳ್ಳಿ ಬೆಲೆ ಈಗ 1,600 ರೂಗೆ ಇಳಿದಿದೆ. ರಫ್ತು ನಿಷೇಧ ಮುಂದುವರಿಸಲಾಗುವುದು ಎಂದು ಸರ್ಕಾರ ನೀಡಿದ ಹೇಳಿಕೆಯ ಪರಿಣಾಮ ಇದಾಗಿದೆ. 

ನಿಷೇಧ ಪರಿಣಾಮ

(Pic credit: Google)

ಹಲವು ರಫ್ತುದಾರರು ಈರುಳ್ಳಿ ಖರೀದಿಸುವುದನ್ನು ನಿಲ್ಲಿಸಿದ ಪರಿಣಾಮವಾಗಿ ಎಪಿಎಂಸಿಯಲ್ಲಿ ಬೆಲೆ ಇಳಿಕೆ ಆಗಿದೆ. ರೈತರು ಕಡಿಮೆ ಬೆಲೆಗೆ ಮಂಡಿಗಳಿಗೆ ಮಾರುವಂತಾಗಿದೆ.

ಖರೀದಿ ಇಲ್ಲ

(Pic credit: Google)

ಕಳೆದ ವಾರ ಈರುಳ್ಳಿ ಬೆಲೆ ಹೆಚ್ಚಾಗಿತ್ತು. ಈಗ ಕಡಿಮೆಗೊಂಡಿದೆ. ಆದರೆ, ಮುಂಬರುವ ಕೆಲ ವಾರಗಳಲ್ಲಿ ಈರುಳ್ಳಿ ತುಟ್ಟಿಯಾಗಲಿದೆ ಎನ್ನುವಂತಹ ಸುದ್ದಿ ಇದೇ ವೇಳೆ ಕೇಳಿಬರುತ್ತಿದೆ.

ಮುಂದಿದೆ ಏರಿಕೆ

(Pic credit: Google)

ಈ ಸೀಸನ್​ನಲ್ಲಿ ಈರುಳ್ಳಿ ಆವಕದಲ್ಲಿ ಬಹಳ ಕಡಿಮೆ ಆಗುವ ಸಾಧ್ಯತೆ ಇದೆ. ಉತ್ಪಾದನೆ ಶೇ. 30 ಕಡಿಮೆ ಆಗಲಿದೆ. ಮಾರ್ಚ್ ಮೊದಲ ವಾರದಿಂದಲೇ ಬೆಲೆ ಏರಿಕೆ ಶುರುವಾಗಲಿದೆ.

ಮಾರ್ಚಿಯಲ್ಲಿ ಏರಿಕೆ

(Pic credit: Google)

ಈರುಳ್ಳಿ ಬೆಳೆ ಈ ಬಾರಿ ಕಡಿಮೆ ಆಗುವ ಕಾರಣಕ್ಕೆ ಸರ್ಕಾರ ಮಾರ್ಚ್ 31ರ ಬಳಿಕವೂ ರಫ್ತು ನಿಷೇಧ ಕ್ರಮವನ್ನು ಮುಂದುವರಿಸ ಬಹುದು ಎಂದು ವರದಿಗಳು ಹೇಳುತ್ತಿವೆ.

ಮಾರ್ಚ್ ನಂತರವೂ...

(Pic credit: Google)

ಭಾರತದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಶೇ. 40ರಷ್ಟು ಈರುಳ್ಳಿ ಉತ್ಪಾದನೆ ಮಹಾರಾಷ್ಟ್ರದಲ್ಲಿ ಆಗುತ್ತದೆ. ಮಧ್ಯಪ್ರದೇಶ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.

ಮಹಾರಾಷ್ಟ್ರ ಅಗ್ರ

(Pic credit: Google)

ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಈರುಳ್ಳಿ ಆವಕ ಎಷ್ಟಾಗಬಹುದು ಎಂಬುದನ್ನು ಕೇಂದ್ರ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಅಧಿಕಾರಿಗಳ ಪರಿಶೀಲನೆ

(Pic credit: Google)

ಅಗತ್ಯ ಎನಿಸಿದರೆ ಮಾತ್ರವೇ ಮಾರ್ಚ್ 31ರ ಬಳಿಕ ಅನುಮತಿ ಮೇರೆಗೆ ಈರುಳ್ಳಿ ರಫ್ತಿಗೆ ಅವಕಾಶ ಕೊಡಬಹುದು ಎನ್ನಲಾಗುತ್ತಿದೆ.

ರಫ್ತಿಗೆ ಅನುಮತಿ?

(Pic credit: Google)