ಜಾಗತಿಕವಾಗಿ ಈರುಳ್ಳಿ ಉತ್ಪಾದನೆಯಲ್ಲಿ ಭಾರತದ ಪಾಲೆಷ್ಟು?

By: Vijayasarathy SN

02 Nov 2023

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸೇವನೆಯಾಗುವ ತರಕಾರಿ ಎಂದರೆ ಆಲೂಗಡ್ಡೆ. ಅದು ಬಿಟ್ಟರೆ ಈರುಳ್ಳಿ ಅತಿಹೆಚ್ಚು ಬಳಕೆಯಾಗುವ ತರಕಾರಿ. ಈರುಳ್ಳಿಗೆ ಬೇಡಿಕೆ ಹೆಚ್ಚು.

ಹೆಚ್ಚು ಸೇವನೆ

Pic credit: Google

ವಿಶ್ವಾದ್ಯಂತ ಒಂದು ವರ್ಷದಲ್ಲಿ 9.3 ಕೋಟಿಯಷ್ಟು ಈರುಳ್ಳಿ ಉತ್ಪಾದನೆ ಆಗುತ್ತದೆ. ವಿಶ್ವದ ಅರ್ಧದಷ್ಟು ಈರುಳ್ಳಿ ಉತ್ಪಾದನೆ ಚೀನಾ ಮತ್ತು ಭಾರತದಲ್ಲಿ ಆಗುತ್ತದೆ.

ಹೆಚ್ಚು ಬೆಳೆ ಎಲ್ಲಿ?

Pic credit: Google

ಈರುಳ್ಳಿ ಉತ್ಪಾದನೆಯಲ್ಲಿ ಚೀನಾ ಅಗ್ರಸ್ಥಾನ ಪಡೆದರೆ, ಭಾರತ ಸಮೀಪದಲ್ಲೇ ಇದೆ. ಚೀನಾ 24,000 ಎಂಟಿ, ಭಾರತ 21,360 ಮೆಟ್ರಿಕ್ ಟನ್​ನಷ್ಟು ಈರುಳ್ಳಿ ಬೆಳೆಯುತ್ತವೆ.

ಚೀನಾ, ಭಾರತ

Pic credit: Google

ಅಮೆರಿಕ, ಇಂಡೋನೇಷ್ಯಾ, ಜರ್ಮನಿ, ಮಲೇಷ್ಯಾ, ಬ್ರೆಜಿಲ್, ಬಾಂಗ್ಲಾದೇಶ, ಯುಎಇ ಮೊದಲಾದ ದೇಶಗಳು ಅತಿಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳುತ್ತವೆ.

ಈರುಳ್ಳಿ ಆಮದು

Pic credit: Google

ಭಾರತ ಈರುಳ್ಳಿ ಉತ್ಪಾದನೆಯಲ್ಲಿ 2ರಲ್ಲಿದೆಯಾದರೂ ರಫ್ತಿನಲ್ಲಿ 3ನೇ ಸ್ಥಾನದಲ್ಲಿದೆ. ದೇಶದಲ್ಲಿ ಅತಿಹೆಚ್ಚು ಈರುಳ್ಳಿ ಎಲ್ಲಿ ಬೆಳೆಯಲಾಗುತ್ತದೆ, ಮುಂದಿದೆ ವಿವರ.

ಭಾರತದ ಈರುಳ್ಳಿ

Pic credit: Google

ಈರುಳ್ಳಿ ಉತ್ಪಾದನೆಯಲ್ಲಿ ಮಹಾರಾಷ್ಟ್ರ ನಂಬರ್ ಒನ್. ದೇಶದ ಈರುಳ್ಳಿಯಲ್ಲಿ ಈ ರಾಜ್ಯದ ಪಾಲು ಶೇ. 30ರಷ್ಟಿದೆ. ನಾಶಿಕ್, ಅಹ್ಮದ್​ನಗರ್, ಪುಣೆಯಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ.

ಮಹಾರಾಷ್ಟ್ರ ನಂ.1

Pic credit: Google

ಮಹಾರಾಷ್ಟ್ರ ಬಿಟ್ಟರೆ ಈರುಳ್ಳಿ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿದೆ. ಭಾರತದ ಒಟ್ಟಾರೆ ಈರುಳ್ಳಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 16ರಷ್ಟಿದೆ.

ಕರ್ನಾಟಕ ನಂ. 2

Pic credit: Google

ಭಾರತದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಈರುಳ್ಳಿ ಉತ್ಪಾದನೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಗುತ್ತದೆ. ಮಧ್ಯಪ್ರದೇಶ, ಬಿಹಾರ ರಾಜ್ಯಗಳು ಟಾಪ್-5ನಲ್ಲಿವೆ.

ಮೂರು ರಾಜ್ಯಗಳ ಪ್ರಾಬಲ್ಯ

Pic credit: Google

ಕರ್ನಾಟಕದಲ್ಲಿ ಎಲ್ಲೆಡೆ ಈರುಳ್ಳಿ ಬೆಳೆಯಲಾಗುತ್ತದೆಯಾದರೂ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಕಲಬುರ್ಗಿ, ಬೀದರ್, ಧಾರವಾಡದಲ್ಲಿ ಹೆಚ್ಚು ಉತ್ಪಾದನೆ ಇದೆ.

ಕರ್ನಾಟಕದಲ್ಲಿ ಹೆಚ್ಚೆಲ್ಲಿ?

Pic credit: Google