By: Vijayasarathy SN

ಐಎಂಎಫ್​ನಲ್ಲಿ ಅತಿಹೆಚ್ಚು ಸಾಲ ಮಾಡಿದ ದೇಶಗಳು

16 May 2024

ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ ಐಎಂಎಫ್​ನಲ್ಲಿ 32 ಬಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ. ಅದರ ಜಿಡಿಯ ಶೇ. 5.3ರಷ್ಟು ಹಣ ಇದು.

1. ಅರ್ಜೆಂಟೀನಾ

(Pic credit: Google)

ಆಫ್ರಿಕಾ ಖಂಡದ ಈಜಿಪ್ಟ್ ದೇಶ ಐಎಂಎಫ್​ಗೆ ಕೊಡಬೇಕಿರುವ ಸಾಲ 11 ಬಿಲಿಯನ್ ಡಾಲರ್​ನಷ್ಟಿದೆ. ಜಿಡಿಪಿಯ ಶೇ. 3.1ರಷ್ಟು ಹಣ ಇದು.

2. ಈಜಿಪ್ಟ್

(Pic credit: Google)

ಐಎಂಎಫ್​ನಲ್ಲಿ ಸಾಲ ಮಾಡಿರುವ ಏಕೈಕ ಐರೋಪ್ಯ ದೇಶವೆಂದರೆ ಉಕ್ರೇನ್. 9 ಬಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿದೆ. ರಷ್ಯಾ ಆಕ್ರಮಣದ ಪರಿಣಾಮ ಇದು.

3. ಉಕ್ರೇನ್

(Pic credit: Google)

ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳಿಂದ ಕೂಡಿರುವ ಪಾಕಿಸ್ತಾನ ಐಎಂಎಫ್​ನಲ್ಲಿ 7 ಬಿಲಿಯನ್ ಡಾಲರ್​ನಷ್ಟು ಸಾಲ ಹೊಂದಿದೆ. ಅದರ ಜಿಡಿಪಿಯ ಶೇ. 1.8ರಷ್ಟು ಹಣ ಇದು.

4. ಪಾಕಿಸ್ತಾನ

(Pic credit: Google)

ದಕ್ಷಿಣ ಅಮೆರಿಕ ಖಂಡದ ಈಕ್ವಡಾರ್ ದೇಶ ಐಎಂಎಫ್​ನಲ್ಲಿ 6 ಬಿಲಿಯನ್ ಡಾಲರ್ ಸಾಲ ಹೊಂದಿದೆ. ಅದರ 121 ಬಿಲಿಯನ್ ಡಾಲರ್​ನ ಜಿಡಿಪಿಯಲ್ಲಿ ಇದರ ಪಾಲು ಶೇ. 4.9 ಇದೆ.

5. ಈಕ್ವಡಾರ್

(Pic credit: Google)

ದಕ್ಷಿಣ ಅಮೆರಿಕ ಖಂಡಕ್ಕೆ ಸೇರಿದ ಮತ್ತೊಂದು ದೇಶ ಕೊಲಂಬಿಯಾ ಐಎಂಎಫ್​ನಲ್ಲಿ 3 ಬಿಲಿಯನ್ ಡಾಲರ್ ಸಾಲ ಹೊಂದಿದೆ.

6. ಕೊಲಂಬಿಯಾ

(Pic credit: Google)

92 ಬಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಆಫ್ರಿಕಾ ಖಂಡದ ಆಂಗೋಲ ದೇಶ ಐಎಂಎಫ್​ನಲ್ಲಿ ಶೇ. 3.2ರಷ್ಟು, ಅಂದರೆ 3 ಬಿಲಿಯನ್ ಡಾಲರ್​ನಷ್ಟು ಸಾಲ ಹೊಂದಿದೆ.

7. ಅಂಗೋಲಾ

(Pic credit: Google)

ಆಫ್ರಿಕಾ ಖಂಡದ್ದೇ ಆದ ಕೀನ್ಯಾ ದೇಶ ಕೂಡ 3 ಬಿಲಿಯನ್ ಡಾಲರ್​ನಷ್ಟು ಸಾಲವನ್ನು ಐಎಂಎಫ್​ನಿಂದ ಪಡೆದಿದೆ. ಜಿಡಿಪಿಯ ಶೇ. 2.8ರಷ್ಟು ಹಣ ಇದಾಗಿದೆ.

8. ಕೀನ್ಯಾ

(Pic credit: Google)

ಆಫ್ರಿಕಾ ಖಂಡಕ್ಕೆ ಸೇರಿದ ಘಾನಾ ದೇಶ ಕೇವಲ 75 ಬಿಲಿಯನ್ ಡಾಲರ್​ನಷ್ಟು ಜಿಡಿಪಿ ಹೊಂದಿದೆ. ಐಎಂಎಫ್​ನಲ್ಲಿ ಇದು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ 2 ಬಿಲಿಯನ್.

9. ಘಾನಾ

(Pic credit: Google)