ಹೆಚ್ಚಿನ ಬೈಕ್ ಟ್ಯಾಕ್ಸಿಗಳಲ್ಲಿ ಪುರುಷರೇ ಡ್ರೈವರ್ಗಳಾಗಿದ್ದು ಇದರಿಂದ ಬಹಳಷ್ಟು ಮಹಿಳೆಯರು ರ‍್ಯಾಪಿಡೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಪರಿಹಾರವೆಂಬಂತೆ ಪಿಂಕ್ ರ‍್ಯಾಪಿಡೋ ಆರಂಭಿಸಲಾಗುತ್ತಿದೆ.
Pic credit: Google
ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ರ‍್ಯಾಪಿಡೋ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ತಮ್ಮ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ವರ್ಷಾಂತ್ಯದೊಳಗೆ ಪಿಂಕ್ ರ‍್ಯಾಪಿಡೋ ಶುರುವಾಗಬಹುದು.
Pic credit: Google
ಪಿಂಕ್ ರ‍್ಯಾಪಿಡೋದಲ್ಲಿ ಬೈಕ್ ಚಾಲಕಿ ಮಹಿಳೆಯೇ ಇರುತ್ತಾರೆ. ಪ್ರಯಾಣಿಕರೂ ಕೂಡ ಮಹಿಳೆಯೇ ಆಗಿರುತ್ತಾರೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಎಕ್ಸ್ಕ್ಲೂಸಿವ್ ಸೇವೆ.
Pic credit: Google
ಅಪರಿಚಿತ ಡ್ರೈವರ್ ಜೊತೆ ಯಾವುದೇ ಭಯ ಇಲ್ಲದೇ ಒಬ್ಬ ಮಹಿಳೆ ಸುರಕ್ಷಿತವಾಗಿ ಪ್ರಯಾಣಿಸಬಲ್ಲಂತಾದರೆ ಅದುವೇ ತಮ್ಮ ನಿಜವಾದ ಯಶಸ್ಸು ಎಂದು ರ‍್ಯಾಪಿಡೋ ಸಂಸ್ಥಾಪಕರು ಹೇಳುತ್ತಾರೆ.
Pic credit: Google
ಬೈಕ್ ಚಾಲಕಿಯರು ಮತ್ತು ಪ್ರಯಾಣಿಕರು ಇಬ್ಬರಿಗೂ ಕೂಡ ಸುರಕ್ಷಿತ ಭಾವನೆ ಮೂಡುವ ರೀತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪವನ್ ಗುಂಟುಪಲ್ಲಿ ಹೇಳಿದ್ದಾರೆ.
Pic credit: Google
ಪಿಂಕ್ ರ‍್ಯಾಪಿಡೋದಿಂದ 25,000 ಮಹಿಳೆಯರಿಗೆ ಉದ್ಯೋಗ ಸಿಗಬಹುದು ಎನ್ನುವ ನಿರೀಕ್ಷೆಇದೆ. ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಯುವತಿಯರಿಗೆ ಅವಕಾಶ ಹೆಚ್ಚಿದೆ.
Pic credit: Google
ಪವನ್ ಗುಂಟುಪಲ್ಲಿ, ಅರವಿಂದ್ ಸಂಕ ಮತ್ತು ಎಸ್ ಆರ್ ಋಷಿಕೇಶ್ ಈ ಮೂವರು ಸೇರಿ ಬೆಂಗಳೂರಿನಲ್ಲಿ ರ‍್ಯಾಪಿಡೋ ಕಟ್ಟಿದ್ದರು. ಈಗ ಆಟೊರಿಕ್ಷಾ, ಕ್ಯಾಬ್, ಪಾರ್ಸಲ್ ಸರ್ವಿಸ್ ಕೂಡ ನೀಡುತ್ತಿದೆ.