ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಕಂಪನಿಗಳ ಷೇರುಗಳ ಸಾಧನೆ ಹೇಗಿದೆ?

By: Vijayasarathy SN

25 Oct 2023

2023ರ ಜನವರಿ 24ರಂದು ಹಿಂಡನ್ಬರ್ಗ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ವರದಿ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಕುಸಿತ ಆಗಿತ್ತು.

ವರದಿ ಎಫೆಕ್ಟ್

Pic Credit: Google

ಅದಾನಿ ಗ್ರೂಪ್ ಅಡಿಯಲ್ಲಿ 10 ಕಂಪನಿಗಳಿವೆ. ಎನ್​ಡಿಟಿವಿಯನ್ನು ಇತ್ತೀಚೆಗೆ ಖರೀದಿಸಲಾಗಿದೆ. ಅದಾನಿ ಎನರ್ಜಿ ಸಂಸ್ಥೆ ಸೆಪ್ಟೆಂಬರ್​ನಲ್ಲಿ ಷೇರುಪೇಟೆಗೆ ಬಂದಿದೆ.

ಅದಾನಿ ಕಂಪನಿಗಳು

Pic Credit: Google

ಎಸಿಸಿ ಸಿಮೆಂಟ್ಸ್, ಅಂಬುಜಾ ಸಿಮೆಂಟ್ಸ್ ಸೇರಿದಂತೆ ಅದಾನಿ ಗ್ರೂಪ್​ನ ಉಳಿದ 8 ಕಂಪನಿಗಳ ಷೇರು ಬೆಲೆ ಜನವರಿ 24ರಿಂದೀಚೆ ಹೇಗಿದೆ ಎಂಬ ವಿವರ ಮುಂದಿದೆ.

8 ಷೇರುಗಳ ಸಾಧನೆ

Pic Credit: Google

ಅದಾನಿ ಗ್ರೂಪ್​ನ ಪ್ರಮುಖ ಕಂಪನಿ ಅದಾನಿ ಎಂಟರ್ಪ್ರೈಸಸ್ ಷೇರುಬೆಲೆ ಜನವರಿ 24ರಂದು 3,442 ರೂ ಇದ್ದದ್ದು ಈಗ 2,332ರೂ ಆಗಿದೆ. 32% ಕುಸಿದಿದೆ.

ಎಂಟರ್ಪ್ರೈಸಸ್ 32% ಕುಸಿತ

Pic Credit: Google

ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯ ಷೇರು ಬೆಲೆ ಜ. 24ರಂದು 1,916 ರೂ ಇದ್ದದ್ದು ಅಕ್ಟೋಬರ್ 24ಕ್ಕೆ 894 ರೂ ಆಗಿದೆ. ಶೇ. 53ರಷ್ಟು ಷೇರು ಕುಸಿತವಾಗಿದೆ.

ಗ್ರೀನ್ 53% ಕುಸಿತ

Pic Credit: Google

ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿಯ ಷೇರುಬೆಲೆ ಜ. 24ರಂದು 761 ರೂ ಇದ್ದದ್ದು ಈಗ 778 ರೂ ಆಗಿದೆ. ಶೇ. 2.23ರಷ್ಟು ಲಾಭ ತಂದಿದೆ.

ಪೋರ್ಟ್ಸ್ 2.23% ಏರಿಕೆ

Pic Credit: Google

ಅದಾನಿ ಪವರ್ ಲಿ ಸಂಸ್ಥೆಯ ಷೇರುಬೆಲೆ ಜನವರಿ 24ರಂದು 274 ಇದ್ದದ್ದು ಅಕ್ಟೋಬರ್ 24ಕ್ಕೆ 325 ರೂ ಆಗಿದೆ. ಶೇ. 18.61ರಷ್ಟು ಷೇರುಬೆಲೆ ಏರಿದೆ.

ಪವರ್ 18.61% ಏರಿಕೆ

Pic Credit: Google

ಅದಾನಿ ಟೋಟಲ್ ಗ್ಯಾಸ್ ಲಿ ಷೇರುಬೆಲೆ ಜನವರಿ 24ರಂದು 3,891 ರೂ ಇದ್ದದ್ದು ಇದೀಗ 569 ರೂ ಆಗಿದೆ. ಶೇ. 85.27ರಷ್ಟು ಕುಸಿದಿದೆ. ಅತಿಹೆಚ್ಚು ಕುಸಿತ ಇದೇ ಆಗಿದೆ.

ಟೋಟಲ್ 85.37% ಕುಸಿತ

Pic Credit: Google

ಅದಾನಿ ವಿಲ್ಮರ್ ಲಿ ಷೇರುಬೆಲೆ ಜನವರಿ 24ರಂದು 572 ರೂ ಇತ್ತು. ಅಕ್ಟೋಬರ್ 24ಕ್ಕೆ ಅದು 330 ರೂ ಆಗಿದೆ. 9 ತಿಂಗಳಲ್ಲಿ ಶೇ. 42ರಷ್ಟು ಷೇರುಬೆಲೆ ಕುಸಿತವಾಗಿದೆ.

ವಿಲ್ಮರ್ 42% ಕುಸಿತ

Pic Credit: Google

ಅದಾನಿ ಗ್ರೂಪ್​ಗೆ ಸೇರಿದ ಸಿಮೆಂಟ್ ಕಂಪನಿ ಎಸಿಸಿ ಲಿ ಷೇರು ಬೆಲೆ 2,335ರೂನಿಂದ 1,887 ರೂ ಆಗಿದೆ. ಒಂಬತ್ತು ತಿಂಗಳಲ್ಲಿ ಶೇ. 19.18ರಷ್ಟು ಷೇರುಬೆಲೆ ಕುಸಿತವಾಗಿದೆ.

ಎಸಿಸಿ 19.18% ಕುಸಿತ

Pic Credit: Google

ಅದಾನಿ ಗ್ರೂಪ್​ನ ಅಂಬುಜಾ ಸಿಮೆಂಟ್ಸ್ ಷೇರುಬೆಲೆ ಜ. 24ರಂದು 498 ರೂ ಇದ್ದದ್ದು ಅ. 24ಕ್ಕೆ 421 ರೂ ಆಗಿದೆ. ಅದರ ಷೇರುಬೆಲೆಯಲ್ಲಿ ಶೇ. 15.46ರಷ್ಟು ಕುಸಿತವಾಗಿದೆ.

ಅಂಬುಜಾ 5.46%

Pic Credit: Google

Next Story: ಸಾವಿತ್ರಿಯಿಂದ ಷಾವರೆಗೆ, ಭಾರತದ 11 ಅತಿಶ್ರೀಮಂತ ಮಹಿಳೆಯರು

ಧನ್ಯವಾದಗಳು