ಅಂಚೆ ಕಚೇರಿ ಸ್ಕೀಮ್: ಹಣ ಡಬಲ್ ಮಾಡುವ ವಿಧಾನ
17 July 2024
Pic credit: Getty
Vijayasarathy SN
Pic credit: Getty
ಅಂಚೆ ಕಚೇರಿಯಲ್ಲಿ ಹಲವು ಉಳಿತಾಯ ಯೋಜನೆಗಳಿವೆ. ಆರ್ಡಿಯಿಂದ ಹಿಡಿದು ಕಿಸಾನ್ ವಿಕಾಸ್ ಪತ್ರದವರೆಗೆ ವಿವಿಧ ಅಗತ್ಯಗಳಿಗೆ ತಕ್ಕಂತೆ ಸ್ಕೀಮ್ಗಳಿವೆ.
Pic credit: Getty
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಥವಾ ಎಫ್ಡಿ ಪ್ಲಾನ್ಗಳೂ ಆಕರ್ಷಕ ಎನಿಸಿವೆ. 1, 2, 3 ಮತ್ತು 5 ವರ್ಷ ಅವಧಿಗಳಿಗೆ ಪ್ರತ್ಯೇಕ ದರಗಳಿರುವ ಎಫ್ಡಿ ಪ್ಲಾನ್ಗಳಿವೆ.
Pic credit: Getty
ಬ್ಯಾಂಕ್ನಲ್ಲಿ ಎಫ್ಡಿಯಿಂದ ಸಿಗುವ ಬಡ್ಡಿಗೆ ಟಿಡಿಎಸ್ ಕಡಿತ ಇರುತ್ತದೆ. ಪೋಸ್ಟ್ ಆಫೀಸ್ನಲ್ಲಿ ಇಡಲಾಗುವ ಠೇವಣಿಯಿಂದ ಬರುವ ಬಡ್ಡಿ ಆದಾಯಕ್ಕೆ ತೆರಿಗೆ ಹೇರಲಾಗುವುದಿಲ್ಲ.
Pic credit: Getty
ಪೋಸ್ಟ್ ಆಫೀಸ್ನಲ್ಲಿ 1, 2, 3 ಮತ್ತು 5 ವರ್ಷದ ಠೇವಣಿಗಳಿಗೆ ಕ್ರಮವಾಗಿ ಶೇ. 6.9, ಶೇ. 7, ಶೇ. 7.1 ಮತ್ತು ಶೇ. 7.5 ಬಡ್ಡಿ ಸಿಗುತ್ತದೆ. ಐದು ವರ್ಷಕ್ಕೆ ಗರಿಷ್ಠ ಬಡ್ಡಿದರ ಇದೆ.
Pic credit: Getty
ನೀವು ಐದು ಲಕ್ಷ ರೂ ಹಣವನ್ನು ಐದು ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಪ್ಲಾನ್ನಲ್ಲಿ ಇರಿಸಬಹುದು. ಇದಕ್ಕೆ ಬಡ್ಡಿ ಆದಾಯ ಸುಮಾರು 2.25 ಲಕ್ಷ ರೂ ಇರುತ್ತದೆ.
Pic credit: Getty
ಐದು ವರ್ಷಕ್ಕೆ ಒಟ್ಟು 7.25 ಲಕ್ಷ ರೂ ನಿಮಗೆ ಸಿಗುತ್ತದೆ. ಇದಿಷ್ಟೂ ಮೊತ್ತವನ್ನು ಮತ್ತೊಮ್ಮೆ ನೀವು ಐದು ವರ್ಷದ ಪೋಸ್ಟ್ ಆಫೀಸ್ ಎಫ್ಡಿಗೆ ಠೇವಣಿ ಇಡಬಹುದು.
Pic credit: Getty
ಇದು ಮೆಚ್ಯೂರ್ ಆದಾಗ 7.25 ಲಕ್ಷ ರೂ ಜೊತೆಗೆ 3.26 ಲಕ್ಷ ರೂ ಬಡ್ಡಿಯೂ ಬರುತ್ತದೆ. ನಿಮ್ಮ ಮೂಲ ಐದು ಲಕ್ಷ ರೂ ಹಣ 10 ವರ್ಷದಲ್ಲಿ 10.50 ಲಕ್ಷ ರೂ ಆಗಿ ಹೋಗಿರುತ್ತದೆ.
Next: ಪ್ರಮುಖ ಬ್ಯಾಂಕುಗಳಲ್ಲಿ 5 ವರ್ಷದ ಎಫ್ಡಿಗೆ ಬಡ್ಡಿದರಗಳಿಷ್ಟು
ಇನ್ನಷ್ಟು ನೋಡಿ