ಆರ್​ಬಿಐ ಎಂಪಿಸಿ ಕೈಗೊಂಡ ಪ್ರಮುಖ ನಿರ್ಧಾರಗಳು

ಆರ್​ಬಿಐ ಎಂಪಿಸಿ ಕೈಗೊಂಡ ಪ್ರಮುಖ ನಿರ್ಧಾರಗಳು

06 Dec 2024

Pic credit: Google

Vijayasarathy SN

TV9 Kannada Logo For Webstory First Slide
repo-rate-web-10

ಡಿ. 6ರಂದು ಮುಕ್ತಾಯಗೊಂಡ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಶೇ. 6.50ರಲ್ಲೇ ಮುಂದುವರಿಸುವ ನಿರ್ಧಾರ ಮಾಡಲಾಗಿದೆ. ಎಸ್​ಡಿಎಫ್, ಎಂಎಸ್​ಎಫ್ ದರಗಳೂ ಯಥಾಸ್ಥಿತಿಯಲ್ಲಿವೆ.

ಅದೇ ಬಡ್ಡಿದರ

Pic credit: Google

money-web-12

ಕ್ಯಾಷ್ ರಿಸರ್ವ್ ರೇಶಿಯೋ ಅಥವಾ ಸಿಆರ್​ಆರ್ ಅನ್ನು ಶೇ. 4.5ರಿಂದ ಶೇ. 4ಕ್ಕೆ ಇಳಿಸಲಾಗಿದೆ. ಒಟ್ಟು ಗ್ರಾಹಕರ ಠೇವಣಿಗಳಿಗೆ ಬ್ಯಾಂಕು ಪ್ರತ್ಯೇಕವಾಗಿ ಇರಿಸಬೇಕಾದ ಮೀಸಲು ನಿಧಿಯೇ ಸಿಆರ್​ಆರ್.

ಸಿಆರ್​ಆರ್ ಇಳಿಕೆ

Pic credit: Google

gdp-web-2

ಅಕ್ಟೋಬರ್​ನ ಎಂಪಿಸಿಯಲ್ಲಿ ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.2ರಷ್ಟು ಹೆಚ್ಚಬಹುದು ಎನ್ನಲಾಗಿತ್ತು. ಈ ಬಾರಿ ಆ ಅಂದಾಜನ್ನು ಶೇ. 6.6ಕ್ಕೆ ಇಳಿಸಲಾಗಿದೆ.

ಜಿಡಿಪಿ ಅಂದಾಜು

Pic credit: Google

2024-25ರಲ್ಲಿ ಹಣದುಬರ ಶೇ. 4.5ರಷ್ಟಾಗಬಹುದು ಎಂದು ಹಿಂದಿನ ಸಭೆಯಲ್ಲಿ ಅಂದಾಜಿಸಲಾಗಿತ್ತು. ಈಗ ಅದನ್ನು ಶೇ. 4.8ಕ್ಕೆ ಹೆಚ್ಚಿಸಲಾಗಿದೆ. ಆಹಾರ ಬೆಲೆಗಳು ಹೆಚ್ಚುತ್ತಿರುವುದೇ ಆತಂಕ.

ಹಣದುಬ್ಬರ ಅಂದಾಜು

Pic credit: Google

ಅಡಮಾನರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲು ನಿರ್ಧರಿಸಲಾಗಿದೆ. ಇದು ಸಣ್ಣ ರೈತರಿಗೆ ಅನುಕೂಲ ಮಾಡಲಿದೆ.

ಕೃಷಿ ಸಾಲ

Pic credit: Google

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅಥವಾ ಸಣ್ಣ ಹಣಕಾಸು ಬ್ಯಾಂಕುಗಳು ತಮ್ಮ ಗ್ರಾಹಕರ ಯುಪಿಐಗೆ ಕ್ರೆಡಿಟ್ ಲೈನ್ ಕೊಡುವ ಅವಕಾಶವನ್ನು ಆರ್​ಬಿಐ ಕಲ್ಪಿಸಿದೆ. ಇದರಿಂದ ಎಸ್​ಎಫ್​ಬಿಗಳಿಗೆ ಅನುಕೂಲವಾಗಲಿದೆ.

ಯುಪಿಐ ಕ್ರೆಡಿಟ್ ಲೈನ್

Pic credit: Google

ಕಪ್ಪು ಹಣವನ್ನು ಬಿಳಿ ಮಾಡುವ ಮತ್ತು ಹಣ ಅಕ್ರಮ ವರ್ಗಾವಣೆ ಕಾರ್ಯಗಳಿಗೆ ಮೂಲ್ ಅಕೌಂಟ್​ಗಳನ್ನು ಬಳಸಲಾಗುತ್ತದೆ. ಇವನ್ನು ಪತ್ತೆ ಮಾಡಿ ನಿಗ್ರಹಿಸಲು ಆರ್​ಬಿಐ ಎಐ ಮಾಡಲ್​ವೊಂದನ್ನು ಅಭಿವೃದ್ಧಿಪಡಿಸಿದೆ.

ಎಐ ನೆರವು...

Pic credit: Google