ರಹಸ್ಯವಾಗಿ 102 ಟನ್ ಚಿನ್ನ ಸಾಗಿಸಿ ತಂದ ರಿಸರ್ವ್ ಬ್ಯಾಂಕ್
Pic credit: Google
Vijayasarathy SN
Pic credit: Google
ಈ ಬಾರಿ ಧನತ್ರಯೋದಶಿ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶದಲ್ಲಿದ್ದ ತನ್ನ ಚಿನ್ನವನ್ನು ಜೋಪಾನವಾಗಿ ಭಾರತಕ್ಕೆ ಸಾಗಿಸಿ ತಂದಿದೆ.
Pic credit: Google
ವರದಿ ಪ್ರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್ನ ವೋಲ್ಟ್ಗಳಲ್ಲಿ ಇದ್ದ 102 ಟನ್ಗಳಷ್ಟು ಚಿನ್ನವನ್ನು ಆರ್ಬಿಐ ಭಾರತದಲ್ಲಿರುವ ತನ್ನ ಕೆಲ ಸಂಗ್ರಹಾಗಾರಗಳಿಗೆ ವರ್ಗಾಯಿಸಿದೆ.
Pic credit: Google
ಸೆಪ್ಟೆಂಬರ್ ಅಂತ್ಯದಲ್ಲಿ ಆರ್ಬಿಐ ಬಳಿ ಇರುವ ಒಟ್ಟು ಚಿನ್ನದ ಮೀಸಲು 855 ಟನ್ಗಳಷ್ಟಿತ್ತು. ಈ ಪೈಕಿ ಭಾರತದೊಳಗೆ 510.5 ಟನ್ ಚಿನ್ನವನ್ನು ಇರಿಸಲಾಗಿದೆ. ಉಳಿದದ್ದು ವಿದೇಶಗಳಲ್ಲಿವೆ.
Pic credit: Google
ಹಿಂದೆಲ್ಲಾ, ಆರ್ಬಿಐನ ಗೋಲ್ಡ್ ರಿಸರ್ವ್ಸ್ನಲ್ಲಿ ಹೆಚ್ಚಿನವು ವಿದೇಶಗಳಲ್ಲಿ ಇದ್ದವು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸಾಗಿಸಲಾಗುತ್ತಿದೆ.
Pic credit: Google
2022ರ ಸೆಪ್ಟೆಂಬರ್ನಿಂದೀಚೆ, ಅಂದರೆ ಎರಡು ವರ್ಷದಲ್ಲಿ ಭಾರತವು 214 ಟನ್ ಚಿನ್ನವನ್ನು ಭಾರತಕ್ಕೆ ವಾಪಸ್ ತಂದಿದೆ. ಮೇನ ಒಂದೇ ತಿಂಗಳಲ್ಲಿ 100 ಟನ್ ಚಿನ್ನವನ್ನು ಬ್ರಿಟನ್ನಿಂದ ಭಾರತಕ್ಕೆ ಸಾಗಿಸಲಾಗಿತ್ತು.
Pic credit: Google
ಸದ್ಯ ಬ್ಯಾಂಕ್ ಆಫ್ ಇಂಗ್ಲೆಂಡ್ ಸುಪರ್ದಿಯಲ್ಲಿ ಭಾರತದ 324 ಟನ್ ಚಿನ್ನ ಇದೆ. ಜಾಗತಿಕ ರಾಜಕೀಯ ಅನಿಶ್ಚಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಚಿನ್ನವನ್ನು ಇರಿಸುವುದು ಸರಿ ಎನಿಸುವುದಿಲ್ಲ.
Pic credit: Google
ವಿಶೇಷ ವಿಮಾನ ಹಾಗೂ ಸಕಲ ಭದ್ರತಾ ವ್ಯವಸ್ಥೆಯೊಂದಿಗೆ ರಹಸ್ಯವಾಗಿ ಚಿನ್ನವನ್ನು ಸಾಗಿಸಲಾಗುತ್ತದೆ. ಭಾರೀ ಮೌಲ್ಯದ ಸರಕಾದ್ದರಿಂದ ಸಾಗಣೆ ವೇಳೆ ರಹಸ್ಯ ಕಾಪಾಡುವುದು ಬಹಳ ಅಗತ್ಯ.