ಡೊನಾಲ್ಡ್ ಟ್ರಂಪ್ ಗೆದ್ದರೆ ಷೇರು ಮಾರುಕಟ್ಟೆ ಉತ್ಸಾಹ ಪಡೆಯಬಹುದು ಎನ್ನುವ ನಿರೀಕ್ಷೆಗಳಿದ್ದವು. ತದ್ವಿರುದ್ಧವಾಗಿ ಭಾರತದ ಮಾರುಕಟ್ಟೆ ಕುಸಿತ ಕಂಡಿದೆ. ಇದಕ್ಕೇನು ಕಾರಣ, ಮುಂದಿನ ಸ್ಲೈಡ್ಗಳಲ್ಲಿದೆ ವಿವರ...
Pic credit: Google
1. ಬಡ್ಡಿದರ ಗೊಂದಲ
ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು 25 ಮೂಲಾಂಕದಷ್ಟು ಕಡಿತಗೊಳಿಸುವ ನಿರೀಕ್ಷೆ ಇದೆ. ಟ್ರಂಪ್ ಬಂದ ಬಳಿಕ ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಟ್ರಂಪ್ ಅವರ ನೀತಿ...
Pic credit: Google
ಸುಂಕ ಭೀತಿ
ಟ್ರಂಪ್ ಸರ್ಕಾರ ಚೀನಾದ ಸರಕುಗಳಿಗೆ ಶೇ. 60, ಇತರ ದೇಶಗಳಿಗೆ ಶೇ. 10ರಷ್ಟು ಆಮದು ಸುಂಕ ವಿಧಿಸಿದರೆ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಬಹುದು. ಇದರಿಂದ ಬಡ್ಡಿದರ ಕಡಿತ ಅಸಾಧ್ಯವಾಗಬಹುದು. ಇದು ಮಾರುಕಟ್ಟೆಯಲ್ಲಿ ಗೊಂದಲಕ್ಕೆ ಕಾರಣ.
Pic credit: Google
2. ಎಫ್ಐಐ ಹೊರಹರಿವು
ವಿದೇಶೀ ಹೂಡಿಕೆದಾರರು ಭಾರತದಿಂದ ಮಾಸ್ ಆಗಿ ಹೊರಹೋಗುವುದು ಮುಂದುವರಿದಿದೆ. ಅಕ್ಟೋಬರ್ನಿಂದೀಚೆ ಭಾರತದಿಂದ ಹೊರಹೋದ ಎಫ್ಐಐಗಳ ಹೂಡಿಕೆ 1 ಲಕ್ಷ ಕೋಟಿ ರೂಗೂ ಅಧಿಕ ಎನ್ನಲಾಗಿದೆ.
Pic credit: Google
3. ಚೀನಾದತ್ತ ವಲಸೆ
ಚೀನೀ ಮಾರುಕಟ್ಟೆಯ ವ್ಯಾಲ್ಯುಯೇಶನ್ ಬಹಳ ಅಗ್ಗವಾಗಿದೆ. ಜೊತೆಗೆ ಅಲ್ಲಿನ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಸ್ಟಿಮುಲಸ್ ಪ್ಯಾಕೇಜ್ಗಳನ್ನು ಹಂತಹಂತವಾಗಿ ನೀಡುತ್ತಿದೆ. ಇದರಿಂದ ವಿದೇಶೀ ಹೂಡಿಕೆದಾರರು ಚೀನಾದತ್ತ ಆಕರ್ಷಿತರಾಗುತ್ತಿದ್ದಾರೆ.
Pic credit: Google
4. ಐಟಿ ಸ್ಟಾಕ್ಸ್ ಹಿನ್ನಡೆ
ಟ್ರಂಪ್ ಅವರ ‘ಅಮೆರಿಕ ಮೊದಲು’ ಎಂಬ ನೀತಿಯು ಭಾರತದ ಐಟಿ ವಲಯಕ್ಕೆ ಹಿನ್ನಡೆ ತರಬಹುದು. ಹೀಗಾಗಿ, ಭಾರತೀಯ ಐಟಿ ಕಂಪನಿಗಳ ಷೇರುಗಳನ್ನು ಮಾರಲಾಗುತ್ತಿದೆ.
Pic credit: Google
5. ಪ್ರಾಫಿಟ್ ಬುಕಿಂಗ್
ಭಾರತದ ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಬಹಳ ವೇಗವಾಗಿ ಹಿಗ್ಗಿಹೋಗಿದೆ. ಹಲವು ಷೇರುಗಳು ಅವಾಸ್ತವಿಕ ಎನ್ನುವಷ್ಟು ದುಬಾರಿಗೊಂಡಿವೆ. ಹೀಗಾಗಿ, ಕೆಲ ತಿಂಗಳಿಂದ ಪ್ರಾಫಿಟ್ ಬುಕಿಂಗ್ ಆಗುತ್ತಿರಬಹುದು.