ಅಣಬೆ ಕೃಷಿಯಲ್ಲಿ ಭರ್ಜರಿ ಲಾಭ ಮಾಡುವ ಮಿಶ್ರಾ
18 Dec 2023
By: Vijayasarathy SN
ಒಡಿಶಾದ ಕಳಿಂಗ ಮಶ್ರೂಮ್ ಸೆಂಟರ್ ಸಂಸ್ಥೆಯ ಸ್ಥಾಪಕ ಸಂತೋಷ್ ಮಿಶ್ರಾ ಜೀವನ ಛಲ, ಬದ್ಧತೆಗೆ ಉತ್ತಮ ನಿದರ್ಶನ.
ಛಲದ ಮಿಶ್ರಾ
(Pic credit: Google)
ಕೈಯಲ್ಲಿ 36 ರೂ ಇಟ್ಟುಕೊಂಡು ಅಣಬೆ ಕೃಷಿ ಆರಂಭಿಸಿದ ಮಿಶ್ರಾ ಇವತ್ತು ಒಂದು ವರ್ಷದಲ್ಲಿ 10 ಲಕ್ಷ ರೂ ಆದಾಯ ಕಾಣುತ್ತಿದ್ದಾರೆ.
ಯಶಸ್ಸು...
(Pic credit: Google)
1989ರಲ್ಲಿ ಅಣಬೆ ಕೃಷಿಯಲ್ಲಿ ತರಬೇತಿ ಪಡೆದ ಸಂತೋಷ್ ಮಿಶ್ರಾ ಸೂಕ್ತ ಶೆಡ್ ನಿರ್ಮಿಸಿ 100 ಬೆಡ್ಗಳಲ್ಲಿ ಅಣಬೆ ಬೆಳೆಯಲು ಆರಂಭಿಸಿದರು.
ಶುರುವಾಗಿದ್ದು...
(Pic credit: Google)
ಅಪ್ಪನಿಂದ ಸಾಲಕ್ಕೆ ಹಣ ಪಡೆದು ಹೂಡಿಕೆ ಮಾಡಿದರು. ನೋಡ ನೋಡುತ್ತಿದ್ದಂತೆ 150 ಕಿಲೋ ಅಣಬೆ ಫಲ ಸಿಕ್ಕಿತು.
ಸಾಫಲ್ಯ
(Pic credit: Google)
ಇವರ ಅಣಬೆಗೆ ಗ್ರಾಹಕರು ಸಿಗತೊಡಗಿದರು. ಇನ್ನಷ್ಟು ಸಾಲ ಮಾಡಿ 3,000 ಬೆಡ್ಗಳಿಗೆ ಅಣಬೆ ಕೃಷಿ ವಿಸ್ತರಿಸಿದರು.
ವಿಸ್ತರಣೆ
(Pic credit: Google)
90ರ ದಶಕದಲ್ಲೇ ಸಂತೋಷ್ ಮಿಶ್ರಾ ಅಣಬೆ ಕೃಷಿ ಖ್ಯಾತವಾಗತೊಡಗಿತು. ಇವತ್ತು ಅವರು ವರ್ಷಕ್ಕೆ 10 ಲಕ್ಷ ರೂ ಆದಾಯ ಪಡೆಯುತ್ತಾರೆ.
ಖ್ಯಾತಿ
(Pic credit: Google)
ಸಂತೋಷ್ ಮಿಶ್ರಾ 10 ಲಕ್ಷಕ್ಕೂ ಹೆಚ್ಚು ಮಂದಿಗೆ ತರಬೇತಿ ಕೊಟ್ಟಿದ್ದಾರೆ. ದುರ್ಬಲ ವರ್ಗದ ಒಂದು ಲಕ್ಷ ಮಂದಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ.
ತರಬೇತಿ
(Pic credit: Google)
ಸಂತೋಷ್ ಮಿಶ್ರಾ ಸದ್ಯ ಅಣಬೆಯಿಂದ ವಿವಿಧ ತಿಂಡಿಗಳು, ಹಿಟ್ಟು, ಉಪ್ಪಿನ ಕಾಯಿ ಇತ್ಯಾದಿ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಾರೆ.
ಬೇರೆ ತಿಂಡಿ
(Pic credit: Google)
Next: ಹಾಲು ಉತ್ಪಾದನೆಯಲ್ಲಿ ಭಾರತ ನಂ. 1; ಕರ್ನಾಟಕದ ಕೊಡುಗೆ ಎಷ್ಟು
ಇನ್ನಷ್ಟು ನೋಡಿ