ಎಸ್ಬಿಐ ಮ್ಯೂಚುವಲ್ ಫಂಡ್ ಸಂಸ್ಥೆಯ ಎಸ್ಬಿಐ ಜನ್ನಿವೇಶ್ ಮ್ಯೂಚುವಲ್ ಫಂಡ್ನಿಂದ ತಿಂಗಳಿಗೆ ಕೇವಲ 250 ರೂನ ಹೊಸ ಎಸ್ಐಪಿ ಯೋಜನೆ ಆರಂಭವಾಗಿದೆ.
Pic credit: Google
ಸಣ್ಣ ಉಳಿತಾಯ ಹೊಂದಿರುವ ಜನರಿಗೆ ಇದು ಅನುಕೂಲವಾಗಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರೂ ಕೂಡ ಷೇರು ಮಾರುಕಟ್ಟೆಯ ಭಾಗವಾಗಬಹುದು.
Pic credit: Google
ಜನ್ನಿವೇಶ್ ಮೂಲಕ ಎಸ್ಬಿಐ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು. ಇದು ಹೈಬ್ರಿಡ್ ಫಂಡ್ ಆಗಿದ್ದು, ಷೇರು ಹಾಗೂ ಡೆಟ್ ಎರಡೂ ಕಡೆ ಹೂಡಿಕೆ ಮಾಡುತ್ತದೆ.
Pic credit: Google
ಹೈಬ್ರಿಡ್ ಫಂಡ್ಗಳಲ್ಲಿ ತೀರಾ ಹೆಚ್ಚು ರಿಟರ್ನ್ಸ್ ಸಿಗಲ್ಲ. ರಿಸ್ಕ್ ಕೂಡ ಕಡಿಮೆ. ಎಸ್ಬಿಐನ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಕಳೆದ 3 ವರ್ಷದಲ್ಲಿ ಶೇ. 12ರ ವಾರ್ಷಿಕ ದರದಲ್ಲಿ ರಿಟರ್ನ್ ಕೊಟ್ಟಿದೆ.
Pic credit: Google
ಜನ್ನಿವೇಶ್ನಲ್ಲಿ ಎಸ್ಐಪಿ 250 ರೂನಿಂದ ಆರಂಭವಾಗುತ್ತದೆ. ಶೇ. 12ರ ವಾರ್ಷಿಕ ದರದಲ್ಲಿ ರಿಟರ್ನ್ ಸಿಗುತ್ತದೆ ಎಂದಿಟ್ಟುಕೊಂಡರೆ, 40 ವರ್ಷದಲ್ಲಿ 30 ಲಕ್ಷ ರೂ ಸಂಪತ್ತು ಸೇರುತ್ತದೆ.
Pic credit: Google
ಎಸ್ಬಿಐನ ಯೋನೋ ಆ್ಯಪ್, ಅಥವಾ ಪೇಟಿಎಂ, ಗ್ರೋ ಇತ್ಯಾದಿ ಬ್ರೋಕರ್ ಆ್ಯಪ್ಗಳಲ್ಲಿ ನೀವು ಜನ್ನಿವೇಶ್ ಎಸ್ಐಪಿ ತೆರೆಯಬಹುದು. ಪ್ಯಾನ್, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕಾಗುತ್ತದೆ.
Pic credit: Google
ಎಸ್ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಪ್ರತೀ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಲು ಅನುವು ಮಾಡಿಕೊಡುವ ಯೋಜನೆ.