ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ಹೊಸ ನಿಯಮಗಳು

By: Vijayasarathy SN

13 Nov 2023

ಏಳು ನಿಯಮಗಳು

ಎಸ್​ಸಿಎಸ್​ಎಸ್ 60 ವರ್ಷ ಮೇಲ್ಪಟ್ಟವರಿಗಾಗಿ ಇರುವ ಯೋಜನೆ. 5 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ವೃದ್ಧರಿಗೆ ಇರುವ ಉತ್ತಮ ಸೇವಿಂಗ್ ಸ್ಕೀಮ್ ಇದು.

Pic credit: Google

ಬದಲಾವಣೆ 1

ನಿವೃತ್ತಿ ನಂತರ ಬಂದ ಹಣವನ್ನು ಎಸ್​ಸಿಎಸ್​ಎಸ್ ಸ್ಕೀಮ್​ಗೆ ತೊಡಗಿಸಲು ಇರುವ ಕಾಲಮಿತಿ 1 ತಿಂಗಳಿಂದ 3 ತಿಂಗಳಿಗೆ ಏರಿಕೆ ಮಾಡಲಾಗಿದೆ.

Pic credit: Google

ಬದಲಾವಣೆ 2

50 ವರ್ಷ ಮೇಲ್ಪಟ್ಟ ವಯಸ್ಸಿನ ಸರ್ಕಾರಿ ಉದ್ಯೋಗಿ ಸೇವಾವಧಿಯಲ್ಲಿ ಮೃತಪಟ್ಟರೆ ಅವರ ನಿವೃತ್ತಿ ಹಣವನ್ನು ಸಂಗಾತಿಯು ಎಸ್​ಸಿಎಸ್​ಎಸ್ ಸ್ಕೀಮ್​ಗೆ ಬಳಸಬಹುದು.

Pic credit: Google

ಬದಲಾವಣೆ 3

ನಿವೃತ್ತಿ ಹಣ ಎಂದರೆ ಪಿಎಫ್, ಗ್ರಾಚುಟಿ, ಉದ್ಯೋಗಸ್ಥಳದ ವಿಮೆ, ಇಪಿಎಸ್, ವಿಆರ್​ಎಸ್ ಇತ್ಯಾದಿ ಹಣವೆಲ್ಲವೂ ಸೇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

Pic credit: Google

ಬದಲಾವಣೆ 4

ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿರುವ ಹಣವನ್ನು ಒಂದು ವರ್ಷ ಅವಧಿಯೊಳಗೆ ಹಿಂಪಡೆದರೆ ಠೇವಣಿಯ ಶೇ. 1ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

Pic credit: Google

ಬದಲಾವಣೆ 5

ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ 5 ವರ್ಷದ ಅವಧಿಯದ್ದು. ಹಾಗೆಯೇ 3 ವರ್ಷಕ್ಕೊಮ್ಮೆ ಅದನ್ನು ಎಷ್ಟು ಬಾರಿ ಬೇಕಾದರೂ ವಿಸ್ತರಿಸಬಹುದು.

Pic credit: Google

ಬದಲಾವಣೆ 6

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಕೊನೆಯ ಬಾರಿ ವಿಸ್ತರಿಸಿದಾಗ ಇದ್ದ ಬಡ್ಡಿದರವು ಠೇವಣಿ ಮೊತ್ತಕ್ಕೆ ಅನ್ವಯ ಆಗುತ್ತದೆ.

Pic credit: Google

ಬದಲಾವಣೆ 7

ಈ ಸ್ಕೀಮ್​ನಲ್ಲಿ ಗರಿಷ್ಠ ಠೇವಣಿ ಹಣವು, ಯೋಜನೆಯಲ್ಲಿ ಅನುಮತಿಸಲಾದ ಠೇವಣಿ ಮಿತಿಗಿಂತ ಹೆಚ್ಚಿರಬಾರದು.

Pic credit: Google