16 July 2024

ಷೇರುಪೇಟೆಯಲ್ಲಿ ಹೂಡಿಕೆಗೆ ಕಂಪನಿಗಳ ಆಯ್ಕೆ ಹೇಗೆ?

Pic credit: Google

Vijayasarathy SN

ಹಲವು ಕಂಪನಿಗಳು

Pic credit: Google

ಷೇರು ಮಾರುಕಟ್ಟೆಯಲ್ಲಿ ಹಲವು ಸಾವಿರ ಕಂಪನಿಗಳು ಇರುತ್ತವೆ. ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂದು ಗೊಂದಲ ಸಹಜ. ಎಲ್ಲರೂ ಹಾಕುತ್ತಿದ್ದಾರೆ, ನಾನೂ ಹಾಕುತ್ತೇನೆ ಎನ್ನುವುದು ತಪ್ಪು.

ದಾರಿ ಯಾವುದಯ್ಯ?

Pic credit: Google

ಉತ್ತಮ ಸ್ಥಿತಿಯಲ್ಲಿರುವ ಮತ್ತು ಬೇಡಿಕೆ ಇರುವ ಕಂಪನಿಗಳನ್ನು ನೀವು ಹುಡುಕಬಹುದು. ಆದರೆ, ಇಂಥ ಕಂಪನಿಗಳನ್ನು ಗುರುತಿಸುವುದು ಹೇಗೆ? ಯಾವ ಅಂಶಗಳನ್ನು ನೋಡಬೇಕು?

1. ಇಪಿಎಸ್

Pic credit: Google

ಇದು ಅರ್ನಿಂಗ್ಸ್ ಪರ್ ಶೇರ್. ಇಪಿಎಸ್ ಮೆಟ್ರಿಕ್ ಅನ್ನು ಬಹಳ ಸಾಮಾನ್ಯವಾಗಿ ಬಳಸಲಾಗುತ್ತದೆ. ಒಂದು ಕಂಪನಿಯ ಒಟ್ಟು ನಿವ್ವಳ ಲಾಭವನ್ನು ಅದರ ಒಟ್ಟು ಷೇರುಗಳ ಸಂಖ್ಯೆಯೊಂದಿಗೆ ಭಾಗಿಸಬೇಕು.

2. ಪಿಇ ಅನುಪಾತ

Pic credit: Google

ಇದು ಇಪಿಎಸ್​ನ ಮುಂದುವರಿದ ಭಾಗ. ಇದರಲ್ಲಿ ಕಂಪನಿಯ ಷೇರುಬೆಲೆಯನ್ನು ಇಪಿಎಸ್​ ಸಂಖ್ಯೆಯಿಂದ ಭಾಗಿಸಬೇಕು. ಒಂದು ಷೇರಿಗೆ ಎಷ್ಟು ಮೌಲ್ಯ ಸಿಗುತ್ತೆ ಎಂದು ಅಂದಾಜಿಸಬಹುದು.

3. ಡೆಟ್ ಟು ಕ್ಯಾಪಿಟಲ್

Pic credit: Google

ಯಾವುದೇ ಕಂಪನಿಯಾದರೂ ಸಾಲ ಮಾಡಬೇಕಾಗುತ್ತದೆ. ಆದರೆ, ಅದರ ಒಟ್ಟಾರೆ ಬಂಡವಾಳದಲ್ಲಿ ಸಾಲದ ಪ್ರಮಾಣ ಶೇ. 40ಕ್ಕಿಂತ ಹೆಚ್ಚಿದ್ದರೆ ಹುಷಾರಾಗಿರಬೇಕು.

4. ಪೆಗ್ ರೇಶಿಯೋ

Pic credit: Google

ಒಂದು ಕಂಪನಿಯ ಪಿಇ ಅನುಪಾತವನ್ನು ಅದರ ನಿರೀಕ್ಷಿತ ಲಾಭ ಪ್ರತಿಶತದ ಸಂಖ್ಯೆಯೊಂದಿಗೆ ಭಾಗಿಸಬೇಕು. PEG ರೇಶಿಯೋ ಒಂದೇ ಉದ್ಯಮದ ಎರಡು ಕಂಪನಿಗಳ ಹೋಲಿಕೆಗೆ ಸುಲಭವಾಗುತ್ತದೆ.

ಕೊನೆಯದಾಗಿ...

Pic credit: Google

ಭವಿಷ್ಯದಲ್ಲಿ ಚೆನ್ನಾಗಿ ಪ್ರಗತಿ ಕಾಣಬಲ್ಲ ಕ್ಷೇತ್ರಗಳನ್ನು ಗುರುತಿಸುವುದು ಬಹಳ ಮುಖ್ಯ. ಉತ್ತಮ ಬಿಸಿನೆಸ್ ಇಲ್ಲದಿದ್ದರೆ ಎಷ್ಟೇ ಒಳ್ಳೆಯ ಕಂಪನಿಯಾದರೂ ಬಿದ್ದುಹೋದೀತು.