ಷೇರು ಮಾರುಕಟ್ಟೆ ಜುಲೈ ತಿಂಗಳಿಂದೀಚೆ ಸಾಕಷ್ಟು ಅಲುಗಾಡಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿ ಹೆಚ್ಚಿನ ಸೂಚ್ಯಂಕಗಳು ನೆಗಟಿವ್ ತೋರುತ್ತಿವೆ. ದೀಪಾವಳಿ ಹಬ್ಬದಂದು ಸೆನ್ಸೆಕ್ಸ್ 79,389 ಅಂಕ, ನಿಫ್ಟಿ 24,205 ಅಂಕಗಳಲ್ಲಿ ಅಂತ್ಯವಾಗಿತ್ತು.
Pic credit: Google
ಇಷ್ಟಾದರೂ 2080 ಸಂವತ್ ವರ್ಷದಲ್ಲಿ ಹೂಡಿಕೆದಾರರು ಸಖತ್ ಲಾಭ ಮಾಡಿದ್ದಾರೆ. ಅಂದರೆ ಕಳೆದ ದೀಪಾವಳಿಯಿಂದ ಹಿಡಿದು ಈ ದೀಪಾವಳಿವರೆಗಿನ ಒಂದು ಭಾರತೀಯ ವರ್ಷದಲ್ಲಿ ಹೂಡಿಕೆದಾರರಿಗೆ 128 ಲಕ್ಷ ಕೋಟಿ ರೂ ಲಾಭವಾಗಿದೆ.
Pic credit: Google
ಷೇರು ಮಾರುಕಟ್ಟೆ ಇತಿಹಾಸದಲ್ಲೇ ಸಂವತ್ 2080ರ ವರ್ಷವು ಅತ್ಯಂತ ಸಂಪತ್ತು ವೃದ್ಧಿ ಕಂಡ ವರ್ಷವಾಗಿದೆ. ಹೂಡಿಕೆದಾರರ ಆಸ್ತಿ ಮೌಲ್ಯ ಬರೋಬ್ಬರಿ 453 ಲಕ್ಷ ಕೋಟಿ ರೂನಷ್ಟಾಗಿದೆ.
Pic credit: Google
ಷೇರು ಮಾರುಕಟ್ಟೆಗಿಂತ ಇತರ ಕೆಲ ಆಸ್ತಿಗಳು ಹೂಡಿಕೆದಾರರಿಗೆ ಹೆಚ್ಚು ಆನಂದ ತಂದಿವೆ. ಬಿಟ್ಕಾಯಿನ್, ಬೆಳ್ಳಿ, ಚಿನ್ನ ಆಸ್ತಿಗಳು ಸೆನ್ಸೆಕ್ಸ್ಗಿಂತ ಉತ್ತಮ ಬೆಳವಣಿಗೆ ಕಂಡಿವೆ.
Pic credit: Google
ಬಿಟ್ಕಾಯಿನ್ ಒಂದು ವರ್ಷದಲ್ಲಿ ಶೇ. 72ರಷ್ಟು ಮೌಲ್ಯ ಹೆಚ್ಚಳ ಕಂಡಿದೆ. ಬೆಳ್ಳಿ ಶೇ. 37, ಚಿನ್ನ ಶೇ. 33ರಷ್ಟು ಲಾಭದ ರಿಟರ್ನ್ ತಂದಿವೆ. ಇದೇ ವೇಳೆ ಸೆನ್ಸೆಕ್ಸ್ ಕೊಟ್ಟ ಲಾಭ ಶೇ. 22 ಮಾತ್ರ.
Pic credit: Google
ವಿದೇಶೀ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆದು ಚೀನಾದೆಡೆಗೆ ಹೋಗುತ್ತಿರುವುದು ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಇತ್ತೀಚೆಗೆ ಸೆನ್ಸೆಕ್ಸ್, ನಿಫ್ಟಿ ಕುಸಿಯುತ್ತಿವೆ.
Pic credit: Google
ಆರ್ಥಿಕ ಮೂಲಭೂತ ಅಂಶಗಳು ಗಟ್ಟಿಯಾಗಿರುವುದರಿಂದ ಮತ್ತು ಹಣಕಾಸು ವ್ಯವಸ್ಥೆಯ ಬುಡ ಪ್ರಬಲವಾಗಿರುವುದರಿಂದ ಭಾರತದ ಷೇರು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಲಯಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.