ಸುಬ್ರತಾ ರಾಯ್: ಒಂದೂವರೆ ಸಾವಿರದಿಂದ ಒಂದೂವರೆ ಲಕ್ಷಕೋಟಿವರೆಗೂ

15 Nov 2023

By: Vijayasarathy SN

ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರತಾ ರಾಯ್ (75) 2023ರ ನ. 14ರಂದು ಮುಂಬೈನಲ್ಲಿ ಕೊನೆಯುಸಿರೆಳೆದರು. ಅವರ ಜೀವನದ ಕುತೂಹಲಕಾರಿ ವಿಚಾರಗಳು ಇಲ್ಲಿವೆ.

ಸುಬ್ರತಾ ರಾಯ್ 1948-2023

Pic credit: Google

ಸುಬ್ರತಾ ರಾಯ್ ಅವರದ್ದು ಬಂಗಾಳಿ ಕುಟುಂಬ; ಹುಟ್ಟಿದ್ದು ಬಿಹಾರದಲ್ಲಿ. ಉದ್ಯಮ ಸಾಮ್ರಾಜ್ಯ ಬೆಳೆದದ್ದು ಉತ್ತರಪ್ರದೇಶದಲ್ಲಿ.

ಸುಬ್ರತಾ ರಾಯ್ ಜನನ

Pic credit: Google

ಸುಬ್ರತಾ ರಾಯ್ ಅವರ ಮೊದಲ ಸಂಬಳ ತಿಂಗಳಿಗೆ ಕೇವಲ 1,500 ರೂ ಮಾತ್ರ. 30 ವರ್ಷದಲ್ಲಿ ಅವರ ಉದ್ಯಮ ಸಾಮ್ರಾಜ್ಯ 1.5 ಲಕ್ಷ ಕೋಟಿ ರೂ ಆಗಿತ್ತು.

ಆರಂಭಿಕ ಸಂಬಳ

Pic credit: Google

ಸಹಾರಾ ಪರಿವಾರದಲ್ಲಿ ಉದ್ಯೋಗಿಗಳ ಸಂಖ್ಯೆ 11 ಲಕ್ಷ ಇತ್ತು. ಭಾರತೀಯ ರೈಲ್ವೆ ಬಿಟ್ಟರೆ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ ಸಂಸ್ಥೆ ಅದಾಗಿತ್ತು.

11 ಲಕ್ಷ ಉದ್ಯೋಗಿ

Pic credit: Google

ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ಹೌಸಿಂಗ್ ಫೈನಾನ್ಸ್, ಏರ್​ಲೈನ್ಸ್, ಮೀಡಿಯಾ, ಹೋಟೆಲ್, ಆಸ್ಪತ್ರೆ ಇತ್ಯಾದಿ ಸುಬ್ರತಾ ರಾಯ್ ಉದ್ಯಮ ಸಾಮ್ರಾಜ್ಯ ವಿಸ್ತೃತವಾಗಿತ್ತು.

ಉದ್ಯಮ ವಿಸ್ತಾರ

(Pic credit: Google)

ಉತ್ತರಪ್ರದೇಶದಲ್ಲಿ ಸುಬ್ರತಾ ರಾಯ್ ಭದ್ರತಾ ವ್ಯವಸ್ಥೆ ಸಿಎಂಗಿಂತಲೂ ಹೆಚ್ಚಿತ್ತು. ಬೆಂಗಾವಲು ವಾಹನಗಳಲ್ಲಿ ಇಂಪೋರ್ಟೆಡ್ ಕಾರುಗಳಿದ್ದವು.

ಸಿಎಂಗಿಂತಲೂ ಗಟ್ಟಿ

(Pic credit: Google)

ಸುಬ್ರತಾ ರಾಯ್ ಅವರ ಏರ್ ಸಹಾರಾ ವಿಮಾನಗಳು ದೇಶದ ರಾಜಕಾರಣಿಗಳು, ಸಿನಿಮಾ ಸ್ಟಾರ್​ಗಳ ವೈಯಕ್ತಿಕ ಸೇವೆಗಳಿಗೆ ಬಳಕೆಯಾಗುತ್ತಿದ್ದವು.

ಏರ್ ಸಹಾರ

(Pic credit: Google)

ಇಪತ್ತು ವರ್ಷಗಳ ಹಿಂದೆ (2004ರಲ್ಲಿ) ಸುಬ್ರತಾ ರಾಯ್ ತಮ್ಮ ಮಕ್ಕಳ ಮದುವೆಗೆ ಮಾಡಿದ ಖರ್ಚು 250 ಕೋಟಿ ರೂ. ದುಬಾರಿ ಮದುವೆಗಳ ಪಟ್ಟಿಯಲ್ಲಿ ಇದಿದೆ.

ದುಬಾರಿ ಮದುವೆ

(Pic credit: Google)

2010ರಲ್ಲಿ ಸಹಾರಾ ಗ್ರೂಪ್ ವಿರುದ್ಧ ಸೆಬಿ ಕ್ರಮ ಕೈಗೊಂಡ ಬಳಿಕ ಸುಬ್ರತಾ ರಾಯ್ ಉದ್ಯಮ ಸಾಮ್ರಾಜ್ಯ ಕುಸಿತ ಕಾಣತೊಡಗಿತು.

ಸುಬ್ರತಾ ಸಾಮ್ರಾಜ್ಯ ಪತನ

(Pic credit: Google)