ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ನೇರ ಟಿಕೆಟ್ ಮಾರಾಟ ವ್ಯವಸ್ಥೆ

21 Nov 2024

Pic: Google

Vijayasarathy SN

Pic: Google

ರೈಲು ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಜನರು ಕಿಕ್ಕಿರಿದಿರುತ್ತಾರೆ. ಅಲ್ಲಿ ಟಿಕೆಟ್ ಖರೀದಿಸಲು ಉದ್ದುದ್ದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ.

Pic: Google

ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡದೇ ಇದ್ದವರು ಸ್ಟೇಷನ್​ಗೆ ಬಹಳ ಮುಂಚಿತವಾಗಿ ಹೋಗಿ ಟಿಕೆಟ್ ಖರೀದಿಸಬೇಕಾಗುತ್ತದೆ. ಇಲ್ಲದಿದ್ದರೆ ಟ್ರೈನು ಹೊರಟೇ ಬಿಡಬಹುದು.

Pic: Google

ಬೆಂಗಳೂರಿನ ರೈಲು ನಿಲ್ದಾಣಗಳಲ್ಲೂ ಜನಸಂದಣಿ ಬಹಳ ದಟ್ಟವಾಗಿರುತ್ತದೆ. ಜನರಿಗೆ ಸಕಾಲಕ್ಕೆ ಟಿಕೆಟ್ ಸಿಗುವಂತೆ ಸಹಾಯವಾಗಲು ನೈರುತ್ಯ ರೈಲ್ವೆ ಮೊಬೈಲ್ ಅನ್​ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ ತಂದಿದೆ.

Pic: Google

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಎಸ್​ಎಂವಿಟಿ, ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಇರುವ ಜಾಗಕ್ಕೆ ಸಿಬ್ಬಂದಿ ಬಂದು ಟಿಕೆಟ್ ನೀಡುತ್ತಾರೆ.

Pic: Google

ರೈಲು ನಿಲ್ದಾಣಗಳಲ್ಲಿ ಟಿಕೆಟ್ ಮೆಷೀನ್​ಗಳೂ ಇರುತ್ತವೆ. ಇಲ್ಲಿಯೂ ಕೂಡ ಪ್ರಯಾಣಿಕರು ಟಿಕೆಟ್ ಖರೀದಿಸಲು ಅವಕಾಶ ಇರುತ್ತದೆ. 

Pic: Google

ಇದನ್ನು ಆಪರೇಟ್ ಮಾಡಲು ಗೊಂದಲ ಇದ್ದವರು ಎಂಯುಟಿಎಸ್ ಸೇವೆ ಬಳಸಬಹುದು. ನಿಲ್ದಾಣದ ದ್ವಾರಗಳಲ್ಲೋ, ಟಿಕೆಟ್ ಕೌಂಟರ್ ಆಸುಪಾಸಿನಲ್ಲಿ ಅಲ್ಲಲ್ಲಿ ಈ ಸಿಬ್ಬಂದಿ ಇರುತ್ತಾರೆ.

Pic: Google

ಈ ಸಿಬ್ಬಂದಿ ಬಳಿ ಅನ್​ರಿಸರ್ವ್ಡ್ ಟಿಕೆಟ್, ಪ್ಲಾಟ್​ಫಾರ್ಮ್ ಟಿಕೆಟ್ ಹಾಗೂ ಇತರ ಟಿಕೆಟ್​ಗಳನ್ನು ಪಡೆಯಬಹುದು. ಟಿಕೆಟ್ ಇಲ್ಲದೆ ಟ್ರೈನ್ ಹತ್ತುವ ಪ್ರಮೇಯ ತಪ್ಪುತ್ತದೆ.